Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 39:38 - ಕನ್ನಡ ಸತ್ಯವೇದವು J.V. (BSI)

38 ಚಿನ್ನದ ಧೂಪವೇದಿಯು, ಅಭಿಷೇಕತೈಲವು, ಸುವಾಸನೆಯುಳ್ಳ ಧೂಪವು ಇವುಗಳನ್ನೂ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಚಿನ್ನದ ಧೂಪವೇದಿಯನ್ನು, ಅಭಿಷೇಕತೈಲವನ್ನು, ಸುವಾಸನೆಯುಳ್ಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಚಿನ್ನದ ಧೂಪವೇದಿಕೆ, ಅಭಿಷೇಕತೈಲ, ಸುವಾಸನೆಯುಳ್ಳ ಧೂಪ ಇವುಗಳನ್ನೂ; ಡೇರೆಯ ಬಾಗಿಲಿನ ಪರದೆಯನ್ನೂ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಅವರು ಚಿನ್ನದ ವೇದಿಕೆಯನ್ನೂ ಅಭಿಷೇಕತೈಲವನ್ನೂ ಪರಿಮಳಧೂಪವನ್ನೂ ಗುಡಾರದ ಪ್ರವೇಶದಲ್ಲಿರುವ ಪರದೆಯನ್ನೂ ಮೋಶೆಗೆ ತೋರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಚಿನ್ನದ ಬಲಿಪೀಠವನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 39:38
11 ತಿಳಿವುಗಳ ಹೋಲಿಕೆ  

ಆರೋನನು ಪ್ರತಿನಿತ್ಯವೂ ಹೊತ್ತಾರೆಯಲ್ಲಿ ದೀಪಗಳನ್ನು ಸರಿಪಡಿಸುವಾಗಲೂ


ಈಗ ನಾನು ನನ್ನ ದೇವರಾದ ಯೆಹೋವನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಿಸಿ ಇಸ್ರಾಯೇಲ್ಯರಿಗಿರುವ ಶಾಶ್ವತನಿಯಮದ ಪ್ರಕಾರ ಆತನ ಸನ್ನಿಧಿಯಲ್ಲಿ ಸುಗಂಧದ್ರವ್ಯಗಳಿಂದ ಧೂಪಹಾಕುವದಕ್ಕೂ ಪ್ರತಿನಿತ್ಯ ನೈವೇದ್ಯದ ರೊಟ್ಟಿಗಳನ್ನಿಡುವದಕ್ಕೂ ಪ್ರಾತಃಕಾಲ, ಸಾಯಂಕಾಲ, ಸಬ್ಬತ್‍ದಿನ, ಅಮಾವಾಸ್ಯೆ, ನಮ್ಮ ದೇವರಾದ ಯೆಹೋವನ ಜಾತ್ರೆ ಇವುಗಳಲ್ಲಿ ಸರ್ವಾಂಗ ಹೋಮವನ್ನರ್ಪಿಸುವದಕ್ಕೂ ಆ ಆಲಯವನ್ನು ಆತನಿಗೋಸ್ಕರ ಪ್ರತಿಷ್ಠಿಸಬೇಕೆಂದಿದ್ದೇನೆ.


ಅದಲ್ಲದೆ ಅವನು ದೇವರ ಸೇವೆಗೆ ನೇಮಕವಾದ ಪಟ್ಟಾಭಿಷೇಕತೈಲವನ್ನೂ ಪರಿಮಳ ದ್ರವ್ಯಗಳಿಂದುಂಟಾದ ಸ್ವಚ್ಫವಾದ ಧೂಪದ್ರವ್ಯವನ್ನೂ ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಮಾಡಿದನು.


ದೀಪಕ್ಕೆ ಬೇಕಾದ ಎಣ್ಣೆಯೂ ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳೂ


ಪಟ್ಟಾಭಿಷೇಕತೈಲ, ಪವಿತ್ರಸ್ಥಾನದ ಸೇವೆಗೆ ಬೇಕಾದ ಪರಿಮಳಧೂಪ ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು.


ಅದರ ಮೇಲ್ಭಾಗಕ್ಕೂ ನಾಲ್ಕು ಪಕ್ಕಗಳಿಗೂ ಕೊಂಬುಗಳಿಗೂ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಬೇಕು. ಸುತ್ತಲೂ ಚಿನ್ನದ ಗೋಟು ಕಟ್ಟಿಸಬೇಕು.


ದೀಪಕ್ಕೆ ಬೇಕಾದ ಎಣ್ಣೆಯೂ ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುವಾಸನಾದ್ರವ್ಯಗಳೂ


ಚೊಕ್ಕಬಂಗಾರದ ದೀಪಸ್ತಂಭವು, ಅದರ ಮೇಲಿಡಬೇಕಾದ ಹಣತೆಗಳು, ಅದರ ಉಪಕರಣಗಳು, ದೀಪಕ್ಕೆ ಬೇಕಾದ ಎಣ್ಣೆಯು ಇವುಗಳನ್ನೂ;


ಡೇರೆಯ ಬಾಗಲಿನ ಪರದೆಯನ್ನೂ; ತಾಮ್ರದ ಯಜ್ಞವೇದಿಯು, ಅದರ ತಾಮ್ರದ ಜಾಳಿಗೆಯು, ಅದರ ಕೋಲುಗಳು, ಉಪಕರಣಗಳು ಇವುಗಳನ್ನೂ; ಗಂಗಾಳವು, ಅದರ ಪೀಠವು ಇವುಗಳನ್ನೂ;


ಸುಗಂಧದ್ರವ್ಯಗಳಿಂದ ಧೂಪಹಾಕುವದಕ್ಕೆ ಜಾಲೀಮರದ ಧೂಪವೇದಿಯನ್ನು ಮಾಡಿಸಬೇಕು.


ಅದಲ್ಲದೆ ಯೆಹೋವನು ಮೋಶೆಗೆ ಹೇಳಿದ್ದೇನಂದರೆ -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು