Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 38:8 - ಕನ್ನಡ ಸತ್ಯವೇದವು J.V. (BSI)

8 ದೇವದರ್ಶನದ ಗುಡಾರದ ಬಾಗಲಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರು ಕೊಟ್ಟ ತಾಮ್ರದ ದರ್ಪಣಗಳಿಂದ ಗಂಗಾಳವನ್ನೂ ಅದರ ಪೀಠವನ್ನೂ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ದೇವದರ್ಶನದ ಗುಡಾರದ ಬಾಗಿಲಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರು ಕೊಟ್ಟ ದರ್ಪಣಗಳಿಂದ ತಾಮ್ರದ ತೊಟ್ಟಿಯನ್ನೂ, ಅದರ ಪೀಠವನ್ನೂ ಮಾಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ದೇವದರ್ಶನದ ಗುಡಾರದ ಬಾಗಿಲಲ್ಲಿ ಸೇವೆಮಾಡುತ್ತಿದ್ದ ಮಹಿಳೆಯರು ಕೊಟ್ಟ ತಾಮ್ರದ ದರ್ಪಣಗಳಿಂದ ನೀರಿನ ತೊಟ್ಟಿಯನ್ನೂ ಅದರ ಪೀಠವನ್ನೂ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಅವನು ತಾಮ್ರದಿಂದ ಗಂಗಾಳವನ್ನೂ ಅದರ ಪೀಠವನ್ನೂ ಮಾಡಿದನು. ದೇವದರ್ಶನಗುಡಾರದ ಬಾಗಿಲಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರು ಕೊಟ್ಟ ತಾಮ್ರದ ದರ್ಪಣಗಳನ್ನು ಅದಕ್ಕೆ ಉಪಯೋಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಸೇವೆಮಾಡುತ್ತಿದ್ದ ಸ್ತ್ರೀಯರಿಂದ ಕೂಡಿಸಿದ ಕಂಚಿನ ದರ್ಪಣಗಳಿಂದ ಕಂಚಿನಿಂದ ಬೋಗುಣಿಯನ್ನು ಅದರ ಪೀಠವನ್ನೂ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 38:8
23 ತಿಳಿವುಗಳ ಹೋಲಿಕೆ  

ಆಕೆ ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿಹಗಲೂ ದೇವರ ಸೇವೆಯನ್ನು ಮಾಡುತ್ತಿದ್ದಳು.


ಬಹುವೃದ್ಧನಾದ ಏಲಿಯು ತನ್ನ ಮಕ್ಕಳು ಎಲ್ಲಾ ಇಸ್ರಾಯೇಲ್ಯರಲ್ಲಿ ನಡಿಸುತ್ತಿರುವದನ್ನೂ ಅವರು ದೇವದರ್ಶನದ ಗುಡಾರದ ಬಾಗಲಿನಲ್ಲಿ ಸೇವೆಮಾಡುವ ಸ್ತ್ರೀಯರೊಡನೆ ಸಂಗವಿುಸುತ್ತಿರುವದನ್ನೂ ಕೇಳಿ ಅವರಿಗೆ -


ದೇವದರ್ಶನದ ಗುಡಾರಕ್ಕೂ ಯಜ್ಞವೇದಿಗೂ ನಡುವೆ ಗಂಗಾಳವನ್ನು ಇಟ್ಟು ಅದರಲ್ಲಿ ನೀರನ್ನು ತುಂಬಿಸಬೇಕು.


ದಿಕ್ಕಿಲ್ಲದೆ ಒಬ್ಬೊಂಟಿಗಳಾಗಿರುವ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲಿರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು.


ಯೇಸು ಅವನಿಗೆ - ಸ್ನಾನಮಾಡಿಕೊಂಡವನ ಕಾಲುಗಳನ್ನು ತೊಳೆಯುವದಲ್ಲದೆ ಬೇರೇನೂ ತೊಳೆಯಬೇಕಾಗಿರುವದಿಲ್ಲ, ಅವನ ಮೈಯೆಲ್ಲಾ ಶುದ್ಧವಾಗಿದೆ. ನೀವೂ ಶುದ್ಧರಾಗಿದ್ದೀರಿ; ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲವೆಂದು ಹೇಳಿದನು.


ಆ ದಿನದಲ್ಲಿ ಪಾಪವನ್ನೂ ಅಶುಚಿಯನ್ನೂ ಪರಿಹರಿಸತಕ್ಕ ಒಂದು ಬುಗ್ಗೆಯು ದಾವೀದ ವಂಶದವರಿಗೂ ಯೆರೂಸಲೇವಿುನವರಿಗೂ ತೆರೆದಿರುವದು.


ಯೆಹೋವನೇ, ನಾನು ನಿಷ್ಕಳಂಕನೆಂದು ಕೈಗಳನ್ನು ತೊಳೆದುಕೊಂಡವನಾಗಿ


ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ನಂಬತಕ್ಕ ಸಾಕ್ಷಿಯೂ ಸತ್ತವರೊಳಗಿಂದ ಮೊದಲು ಎದ್ದುಬಂದವನೂ ಭೂರಾಜರ ಒಡೆಯನೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ನಮ್ಮನ್ನು ಪ್ರೀತಿಸುವವನೂ ತನ್ನ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವನೂ ನಮ್ಮನ್ನು ರಾಜ್ಯವನ್ನಾಗಿಯೂ


ಪ್ರಿಯರಾದ ಮಕ್ಕಳೇ, ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸುವದಕ್ಕೆ ಯಾರಿಗೂ ಅವಕಾಶ ಕೊಡಬೇಡಿರಿ. ಕ್ರಿಸ್ತನು ಹೇಗೆ ನೀತಿವಂತನಾಗಿದ್ದಾನೋ ಹಾಗೆಯೇ ನೀತಿಯನ್ನನುಸರಿಸುವವನು ನೀತಿವಂತನಾಗಿದ್ದಾನೆ.


ಅನ್ನಪಾನಾದಿಗಳೂ ವಿವಿಧ ಸ್ನಾನಗಳೂ ಸಹಿತವಾಗಿ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು ತಿದ್ದುಪಾಟಿನ ಕಾಲದವರೆಗೆ ಮಾತ್ರ ನೇಮಕವಾದವು ಎಂಬದು.


ಪೇತ್ರನು ಹೊರಗೆ ಬಾಗಲ ಹತ್ತರ ನಿಂತಿದ್ದರಿಂದ ಮಹಾಯಾಜಕನ ಪರಿಚಿತನಾದ ಆ ಶಿಷ್ಯನು ಹೊರಗೆ ಬಂದು ಬಾಗಲು ಕಾಯುವವಳ ಸಂಗಡ ಮಾತಾಡಿ ಪೇತ್ರನನ್ನು ಒಳಕ್ಕೆ ಕರಕೊಂಡು ಹೋದನು.


ಇತ್ತಲಾಗಿ ಪೇತ್ರನು ಹೊರಗೆ ಅಂಗಳದಲ್ಲಿ ಕೂತಿದ್ದನು. ಅಲ್ಲಿ ಒಬ್ಬ ದಾಸಿಯು ಅವನ ಬಳಿಗೆ ಬಂದು - ನೀನು ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು ಅನ್ನಲು ಅವನು -


ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನವೂ ಕಾಯುತ್ತಾ ಬಾಗಲಿನ ನಿಲವುಗಳ ಹತ್ತಿರ ಜಾಗರೂಕನಾಗಿ ನನ್ನ ಮಾತುಗಳನ್ನು ಕೇಳುವವನು ಭಾಗ್ಯವಂತನು.


ಇದಲ್ಲದೆ ಅವನು ನಾಲ್ವತ್ತು ಬತ್ ನೀರು ಹಿಡಿಯುವ ನಾಲ್ಕು ಮೊಳ ಅಗಲವಾದ ಹತ್ತು ಗಂಗಾಳಗಳನ್ನು ಮಾಡಿ ಪ್ರತಿಯೊಂದು ಪೀಠದ ಮೇಲೆ ಒಂದೊಂದನ್ನು ಇಟ್ಟನು.


ಧೂಪವೇದಿ, ಯಜ್ಞವೇದಿ, ಅದರ ಉಪಕರಣಗಳು,


ಅದರ ಎರಡು ಪಕ್ಕಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು. ಆ ವೇದಿಯನ್ನು ಹಲಿಗೆಗಳಿಂದ ಪೆಟ್ಟಿಗೆಯಂತೆ ಮಾಡಿದನು.


ಯೆಹೋವನು ಮೋಶೆಗೆ ಮತ್ತೂ ಹೇಳಿದ್ದೇನಂದರೆ -


ಅನಂತರ ಅವನು ಸಮುದ್ರವೆನಿಸಿಕೊಳ್ಳುವ ಒಂದು ಎರಕದ ಪಾತ್ರೆಯನ್ನು ಮಾಡಿಸಿದನು. ಅದರ ಬಾಯಿ ಚಕ್ರಾಕಾರವಾಗಿಯೂ ಅಂಚಿನಿಂದ ಅಂಚಿಗೆ ಹತ್ತು ಮೊಳವಾಗಿಯೂ ಇತ್ತು. ಅದರ ಎತ್ತರ ಐದು ಮೊಳ, ಸುತ್ತಳತೆ ಮೂವತ್ತು ಮೊಳ.


ಶಾಲು, ಚೀಲ, ಕೈಗನ್ನಡಿ, ನಾರುಮಡಿ, ಶಿರೋವೇಷ್ಟನ, ಮೇಲ್ಹೊದಿಕೆ, ಈ ಭೂಷಣಗಳನ್ನೆಲ್ಲಾ ತೆಗೆದುಹಾಕುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು