Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 36:2 - ಕನ್ನಡ ಸತ್ಯವೇದವು J.V. (BSI)

2 ಬೆಚಲೇಲನನ್ನೂ ಒಹೊಲೀಯಾಬನನ್ನೂ ಮತ್ತು ಯಾರಾರ ಹೃದಯದಲ್ಲಿ ಯೆಹೋವನು ಜ್ಞಾನವನ್ನು ಇಟ್ಟಿದ್ದನೋ ಯಾರಾರನ್ನು ಈ ಕೆಲಸಮಾಡುವದಕ್ಕೆ ಹೃದಯ ಪ್ರೇರಿಸಿತೋ ಆ ಜಾಣರೆಲ್ಲರನ್ನೂ ಮೋಶೆ ತನ್ನ ಹತ್ತಿರಕ್ಕೆ ಕರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಬೆಚಲೇಲನನ್ನೂ ಒಹೋಲೀಯಾಬನನ್ನೂ ಮತ್ತು ಯಾರ ಹೃದಯದಲ್ಲಿ ಯೆಹೋವನು ಜ್ಞಾನವನ್ನು ಕೊಟ್ಟಿದ್ದನೋ, ಯಾರಾರಿಗೆ ಈ ಕೆಲಸಮಾಡುವುದಕ್ಕೆ ಹೃದಯದಲ್ಲಿ ಪ್ರೇರಣೆಯಾಯಿತೋ ಅಂಥ ಜ್ಞಾನಿಗಳೆಲ್ಲರನ್ನೂ ಮೋಶೆಯು ತನ್ನ ಹತ್ತಿರಕ್ಕೆ ಕರೆಯಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಬೆಚಲೇಲನನ್ನು ಒಹೋಲೀಯಾಬನನ್ನು ಮತ್ತು ಸರ್ವೇಶ್ವರನಿಂದ ಜ್ಞಾನಪಡೆದು ಕೆಲಸ ಕೈಗೊಳ್ಳಲು ಉತ್ಸುಕರಾಗಿದ್ದ ಕಲೆಗಾರರೆಲ್ಲರನ್ನು ಮೋಶೆ ತನ್ನ ಬಳಿಗೆ ಕರೆಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಬಳಿಕ ಮೋಶೆಯು ಬೆಚಲೇಲನನ್ನೂ ಒಹೊಲೀಯಾಬನನ್ನೂ ಮತ್ತು ಯೆಹೋವನಿಂದ ವಿಶೇಷ ಜ್ಞಾನ ಹೊಂದಿದ ಇತರ ಎಲ್ಲಾ ನಿಪುಣರನ್ನೂ ಕರೆದನು. ಕೆಲಸದಲ್ಲಿ ಸಹಾಯಮಾಡಲು ಇವರು ಬಯಸಿದ್ದರಿಂದ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಬೆಚಲಯೇಲನನ್ನು, ಒಹೋಲಿಯಾಬನನ್ನು ಮತ್ತು ಯೆಹೋವ ದೇವರು ಜ್ಞಾನಕೊಟ್ಟಿದ್ದ ಪ್ರತಿಯೊಬ್ಬ ಶಿಲ್ಪಿಯನ್ನೂ ಆ ಕೆಲಸ ಮಾಡುವುದಕ್ಕೆ ಸಿದ್ಧ ಮನಸ್ಸಿದ್ದ ಪ್ರತಿಯೊಬ್ಬನನ್ನೂ ಮೋಶೆಯು ಕರೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 36:2
15 ತಿಳಿವುಗಳ ಹೋಲಿಕೆ  

ಇದಲ್ಲದೆ ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವವನ್ನು ವಹಿಸಿಕೊಳ್ಳದೆ ದೇವರಿಂದ ನೇವಿುಸಲ್ಪಟ್ಟು ವಹಿಸಿಕೊಳ್ಳುತ್ತಾನೆ; ಆರೋನನು ಸಹ ದೇವರಿಂದಲೇ ನೇವಿುಸಲ್ಪಟ್ಟು ಆ ಗೌರವವನ್ನು ವಹಿಸಿಕೊಂಡನಲ್ಲಾ.


ಅರ್ಖಿಪ್ಪನಿಗೆ - ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರಬೇಕೆಂದು ಹೇಳಿರಿ.


ಅವನೊಂದಿಗೆ ದಾನ್ ಕುಲದವನಾದ ಅಹೀಸಾಮಾಕನ ಮಗನಾದ ಒಹೊಲೀಯಾಬನನ್ನೂ ನೇವಿುಸಿದ್ದೇನೆ. ಅದಲ್ಲದೆ ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವದಕ್ಕೆ ಜಾಣರೆಲ್ಲರ ಹೃದಯದಲ್ಲಿ ಜ್ಞಾನವನ್ನುಂಟುಮಾಡಿದ್ದೇನೆ.


ಇದಲ್ಲದೆ ಪ್ರತಿಸಭೆಯಲ್ಲಿ ಸಭೆಯವರ ಸಮ್ಮತಿಯಿಂದ ಹಿರಿಯರನ್ನು ಗೊತ್ತು ಮಾಡಿ ನೇವಿುಸಿ ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರು ನಂಬಿದ್ದ ಕರ್ತನ ಕೈಗೆ ಅವರನ್ನು ಒಪ್ಪಿಸಿದರು.


ಈ ಬೆಳ್ಳಿ ಬಂಗಾರಗಳಿಂದ ಆಲಯದ ಗೋಡೆಗಳನ್ನು ಹೊದಿಸಬೇಕು, ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿಬಂಗಾರದ ಸಮಾನುಗಳನ್ನು ಮಾಡಿಸಬೇಕು. ಈಹೊತ್ತು ಉದಾರ ಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸುವದಕ್ಕೆ ಯಾರು ಮನಸ್ಸುಳ್ಳವರಾಗಿದ್ದಾರೆ ಎಂದು ನೆರೆದ ಸಭೆಗೆ ಹೇಳಲು


ನಿಮ್ಮಲ್ಲಿರುವ ಜಾಣರೆಲ್ಲರು ಬಂದು ಯೆಹೋವನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು.


ಆರು ದಿನಗಳು ಕೆಲಸನಡೆಯಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾದ್ದರಿಂದ ಅದರಲ್ಲಿ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು;


ಯಾರಿಗೆ ನಾನು ಜಾಣತನದ ವರವನ್ನು ಪರಿಪೂರ್ತಿಯಾಗಿ ಅನುಗ್ರಹಿಸಿದ್ದೇನೋ ಅಂಥ ಜಾಣರೆಲ್ಲರ ಸಂಗಡ ನೀನು ಮಾತಾಡಿ ಅವರ ಕೈಯಿಂದ ಆ ವಸ್ತ್ರಗಳನ್ನು ಸಿದ್ಧಪಡಿಸಬೇಕು. ಆರೋನನು ಅವುಗಳನ್ನು ಧರಿಸಿಕೊಂಡು ನನ್ನ ಯಾಜಕನಾಗುವದಕ್ಕೆ ಪ್ರತಿಷ್ಠಿತನಾಗುವನು.


ಇಸ್ರಾಯೇಲ್ಯರು ನನಗೋಸ್ಕರ ಕಾಣಿಕೆಯನ್ನು ಮೀಸಲಿಡಬೇಕೆಂದು ಅವರಿಗೆ ಹೇಳು. ಮನಃಪೂರ್ವಕವಾಗಿ ಕೊಡುವವರಿಂದಲೇ ಆ ಕಾಣಿಕೆಯನ್ನು ತೆಗೆದುಕೊಳ್ಳಬೇಕು.


ಬೆಚಲೇಲನೂ ಒಹೊಲೀಯಾಬನೂ ಎಲ್ಲವನ್ನು ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಮಾಡುವರು; ಮತ್ತು ಬೇರೆ ಜಾಣರೆಲ್ಲರು, ಅಂದರೆ ಯೆಹೋವನಿಂದ ಜ್ಞಾನವಿವೇಕಗಳನ್ನು ಹೊಂದಿ ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೋಸ್ಕರ ಬೇಕಾದ ಸಕಲವಿಧವಾದ ವಸ್ತುಗಳನ್ನು ಮಾಡುವ ಕ್ರಮತಿಳಿದಿರುವವರು, ಅವರೊಂದಿಗೆ ಕೆಲಸಮಾಡುವರು ಅಂದನು.


ಅವರು ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೆ ಇಸ್ರಾಯೇಲ್ಯರು ತಂದಿದ್ದ ಕಾಣಿಕೆಗಳನ್ನೆಲ್ಲಾ ಮೋಶೆಯ ಕೈಯಿಂದ ತೆಗೆದುಕೊಂಡರು. ಇಸ್ರಾಯೇಲ್ಯರು ಪ್ರತಿದಿನದ ಹೊತ್ತಾರೆಯಲ್ಲಿ ಮೋಶೆಯ ಬಳಿಗೆ ಬಂದು ಹೆಚ್ಚು ಕಾಣಿಕೆಗಳನ್ನು ಮನಃಪೂರ್ವಕವಾಗಿ ಕೊಡುತ್ತಿದ್ದರು.


ಇಗೋ, ಯಾಜಕರ ಮತ್ತು ಲೇವಿಯರ ವರ್ಗಗಳವರು ದೇವಾಲಯ ಸಂಬಂಧವಾದ ಬೇಕಾದಕೆಲಸವನ್ನು ಮಾಡುವದಕ್ಕೆ ಸಿದ್ಧರಾಗಿದ್ದಾರೆ. ಯಾವ ಕೆಲಸವಿದ್ದರೂ ಎಲ್ಲವನ್ನೂ ಜಾಣತನದಿಂದ ಮಾಡುವದಕ್ಕೆ ಸಿದ್ಧಮನಸ್ಸುಳ್ಳವರು ನಿನ್ನ ಹತ್ತಿರ ಇರುತ್ತಾರೆ. ಅಧಿಪತಿಗಳೂ ಎಲ್ಲಾ ಪ್ರಜೆಗಳೂ ನಿನ್ನ ಆಜ್ಞೆಗೆ ಒಳಗಾಗುವರು ಎಂದು ಹೇಳಿದನು.


ಬೆಟ್ಟದಲ್ಲಿ ನಾನು ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನು ಮಾಡಿಸಬೇಕು, ನೋಡು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು