ವಿಮೋಚನಕಾಂಡ 34:16 - ಕನ್ನಡ ಸತ್ಯವೇದವು J.V. (BSI)16 ಅದಲ್ಲದೆ ನೀವು ನಿಮ್ಮ ಗಂಡು ಮಕ್ಕಳಿಗೆ ಅವರಲ್ಲಿ ಕನ್ನಿಕೆಗಳನ್ನು ತೆಗೆದುಕೊಳ್ಳುವದಕ್ಕೆ ಆಸ್ಪದವುಂಟಾಗುವದು; ತರುವಾಯ ಆ ಸೊಸೆಯರು ತೌರಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನೂ ಅನ್ಯದೇವರುಗಳ ಪೂಜೆ ಎಂಬ ವ್ಯಭಿಚಾರಕ್ಕೆ ಎಳೆದಾರು, ಎಚ್ಚರ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಅದಲ್ಲದೆ ನೀವು ನಿಮ್ಮ ಪುತ್ರರಿಗಾಗಿ ಅವರಲ್ಲಿ ಪುತ್ರಿಯರನ್ನು ತೆಗೆದುಕೊಳ್ಳುವುದಕ್ಕೆ ಅದು ಮಾರ್ಗವಾಗುವುದು; ತರುವಾಯ ಆ ಸೊಸೆಯರು ತವರುಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನೂ ಅನ್ಯದೇವರುಗಳ ಪೂಜೆ ಎಂಬ ವ್ಯಭಿಚಾರಕ್ಕೆ ಎಳೆದಾರು, ಎಚ್ಚರ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಅದೂ ಅಲ್ಲದೆ ನೀವು ನಿಮ್ಮ ಗಂಡು ಮಕ್ಕಳಿಗೆ ಅವರಲ್ಲಿ ಹೆಣ್ಣುಗಳನ್ನು ತೆಗೆದುಕೊಳ್ಳುವುದಕ್ಕೆ ಆಸ್ಪದವುಂಟಾಗುವುದು. ಅನಂತರ ಆ ಸೊಸೆಯಂದಿರು ತೌರುಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನು ಅನ್ಯದೇವರುಗಳ ಪೂಜೆಯೆಂಬ ವ್ಯಭಿಚಾರಕ್ಕೆ ಎಳೆಯಬಹುದು. ಆದ್ದರಿಂದ ಎಚ್ಚರಿಕೆಯಾಗಿರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ನೀವು ಅವರ ಪುತ್ರಿಯರಲ್ಲಿ ಕೆಲವರನ್ನು ನಿಮ್ಮ ಪುತ್ರರಿಗೆ ಹೆಂಡತಿಯರಾಗುವುದಕ್ಕೆ ಆರಿಸಿಕೊಳ್ಳುವಿರಿ. ಅವರ ಪುತ್ರಿಯರು ಸುಳ್ಳುದೇವರುಗಳ ಸೇವೆ ಮಾಡುತ್ತಾರೆ. ನಿಮ್ಮ ಪುತ್ರರನ್ನೂ ಅವರು ಅದೇ ಸೇವೆಗೆ ನಡೆಸುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಇದಲ್ಲದೆ ಅವರ ಪುತ್ರಿಯರನ್ನು ನಿನ್ನ ಪುತ್ರರಿಗೋಸ್ಕರ ತೆಗೆದುಕೊಳ್ಳಬೇಕಾಗಬಹುದು. ತೆಗೆದುಕೊಂಡರೆ ಅವರ ಪುತ್ರಿಯರು ತಮ್ಮ ದೇವರುಗಳನ್ನು ಆರಾಧಿಸಿ, ನಿಮ್ಮ ಪುತ್ರರನ್ನೂ ಅನ್ಯದೇವರುಗಳ ಆರಾಧನೆಯೆಂಬ ವ್ಯಭಿಚಾರಕ್ಕೆ ಎಳೆಯಬಹುದು. ಅಧ್ಯಾಯವನ್ನು ನೋಡಿ |
ಹೀಗಿರಲಾಗಿ ನೀವು ನಿಮ್ಮ ಹೆಣ್ಣುಮಕ್ಕಳನ್ನು ಅವರ ಗಂಡುಮಕ್ಕಳಿಗೆ ಕೊಡಲೂಬಾರದು, ನಿಮ್ಮ ಗಂಡುಮಕ್ಕಳಿಗೋಸ್ಕರ ಅವರ ಹೆಣ್ಣು ಮಕ್ಕಳನ್ನು ತೆಗೆದುಕೊಳ್ಳಲೂಬಾರದು, ಅವರಿಗೋಸ್ಕರ ಸುಖಕ್ಷೇಮಗಳನ್ನು ಎಂದಿಗೂ ಬಯಸಬಾರದು. ಈ ಪ್ರಕಾರ ನಡೆದರೆ ನೀವು ಬಲಗೊಂಡು ಆ ದೇಶದ ಸಮೃದ್ಧಿಯನ್ನು ಅನುಭವಿಸಿ ಅದನ್ನು ನಿಮ್ಮ ಸಂತಾನದವರಿಗೆ ಶಾಶ್ವತಸ್ವಾಸ್ತ್ಯವನ್ನಾಗಿ ಬಿಡುವಿರಿ ಎಂದು ಹೇಳಿದಿಯಲ್ಲಾ.