ವಿಮೋಚನಕಾಂಡ 34:15 - ಕನ್ನಡ ಸತ್ಯವೇದವು J.V. (BSI)15 ನೀವು ಆ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆಮಾಡಿಕೊಳ್ಳದಂತೆ ಜಾಗರೂಕರಾಗಿರಿ, ಮಾಡಿಕೊಂಡರೆ ಅವರು ತಮ್ಮ ದೇವತೆಗಳನ್ನು ಪೂಜಿಸಿ ಯಜ್ಞಗಳನ್ನು ಮಾಡುವಾಗ ಅವರಲ್ಲಿ ಒಬ್ಬನು ಯಜ್ಞ ಭೋಜನಕ್ಕೆ ನಿಮ್ಮನ್ನೂ ಕರೆದಾನು, ನೀವು ಹೋಗಿ ಭೋಜನ ಮಾಡೀರಿ; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ನೀವು ಆ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆಮಾಡಿಕೊಳ್ಳದಂತೆ ಜಾಗರೂಕರಾಗಿರಿ, ಮಾಡಿಕೊಂಡರೆ ಅವರು ತಮ್ಮ ದೇವತೆಗಳನ್ನು ಪೂಜಿಸಿ ಯಜ್ಞಗಳನ್ನು ಮಾಡುವಾಗ ಅವರಲ್ಲಿ ಒಬ್ಬನು ಯಜ್ಞಭೋಜನಕ್ಕೆ ನಿಮ್ಮನ್ನೂ ಕರೆದಾನು, ನೀವು ಹೋಗಿ ಭೋಜನ ಮಾಡಬೇಕಾದೀತು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ನೀವು ಆ ನಾಡಿನ ನಿವಾಸಿಗಳ ಸಂಗಡ ಒಪ್ಪಂದ ಮಾಡಿಕೊಳ್ಳದಂತೆ ಜಾಗರೂಕರಾಗಿರಿ. ಮಾಡಿಕೊಂಡರೆ ಅವರು ತಮ್ಮ ದೇವತೆಗಳನ್ನು ಪೂಜಿಸಿ ಬಲಿಯರ್ಪಿಸುವಾಗ ಬಲಿ ಭೋಜನಕ್ಕೆ ನಿಮ್ಮನ್ನು ಕರೆಯಬಹುದು. ನೀವು ಹೋಗಿ ಅದನ್ನು ಭುಜಿಸುವ ಸಂಭವವುಂಟು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 “ಎಚ್ಚರಿಕೆಯಾಗಿರಿ, ಆ ದೇಶದಲ್ಲಿ ವಾಸಿಸುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ನೀವು ಅವರೊಂದಿಗೆ ಸೇರಿಕೊಳ್ಳುವಿರಿ. ಅವರೊಂದಿಗೆ ಸೇರಿಕೊಳ್ಳುವಂತೆ ನಿಮ್ಮನ್ನು ಆಹ್ವಾನಿಸುವರು; ಅವರ ಯಜ್ಞಾರ್ಪಣೆಗಳನ್ನು ತಿನ್ನುವಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 “ನೀನು ಆ ದೇಶದ ನಿವಾಸಿಗಳ ಸಂಗಡ ಒಪ್ಪಂದ ಮಾಡಿಕೊಳ್ಳದಂತೆ ಎಚ್ಚರದಿಂದಿರು. ಅವರು ಅನ್ಯದೇವರುಗಳನ್ನು ಆರಾಧಿಸಿ, ಅವುಗಳಿಗೆ ಯಜ್ಞ ಅರ್ಪಿಸುವ ಸಮಯದಲ್ಲಿ ಒಬ್ಬನು ನಿನ್ನನ್ನು ಕರೆದಾನು, ನೀನು ಅವನ ಯಜ್ಞಭೋಜನವನ್ನು ಮಾಡಬೇಕಾದೀತು. ಅಧ್ಯಾಯವನ್ನು ನೋಡಿ |
ಹೀಗಿರಲಾಗಿ ನೀವು ನಿಮ್ಮ ಹೆಣ್ಣುಮಕ್ಕಳನ್ನು ಅವರ ಗಂಡುಮಕ್ಕಳಿಗೆ ಕೊಡಲೂಬಾರದು, ನಿಮ್ಮ ಗಂಡುಮಕ್ಕಳಿಗೋಸ್ಕರ ಅವರ ಹೆಣ್ಣು ಮಕ್ಕಳನ್ನು ತೆಗೆದುಕೊಳ್ಳಲೂಬಾರದು, ಅವರಿಗೋಸ್ಕರ ಸುಖಕ್ಷೇಮಗಳನ್ನು ಎಂದಿಗೂ ಬಯಸಬಾರದು. ಈ ಪ್ರಕಾರ ನಡೆದರೆ ನೀವು ಬಲಗೊಂಡು ಆ ದೇಶದ ಸಮೃದ್ಧಿಯನ್ನು ಅನುಭವಿಸಿ ಅದನ್ನು ನಿಮ್ಮ ಸಂತಾನದವರಿಗೆ ಶಾಶ್ವತಸ್ವಾಸ್ತ್ಯವನ್ನಾಗಿ ಬಿಡುವಿರಿ ಎಂದು ಹೇಳಿದಿಯಲ್ಲಾ.