Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 33:5 - ಕನ್ನಡ ಸತ್ಯವೇದವು J.V. (BSI)

5 ಯೆಹೋವನು ಮೋಶೆಗೆ ಹೀಗಂದನು - ನೀನು ಇಸ್ರಾಯೇಲ್ಯರಿಗೆ ಹೇಳಬೇಕಾದದ್ದೇನಂದರೆ - ನೀವು ನನ್ನ ಆಜ್ಞೆಗಳಿಗೆ ಬೊಗ್ಗದವರೇ. ನಾನು ಒಂದು ಕ್ಷಣಮಾತ್ರ ನಿಮ್ಮ ಮಧ್ಯದಲ್ಲಿ ಬರುವದಾದರೆ ನೀವು ನಿರ್ಮೂಲವಾಗಿ ಹೋದೀರಿ, ನೋಡಿಕೊಳ್ಳಿರಿ. ಆದಕಾರಣ ನಿಮ್ಮ ಆಭರಣಗಳನ್ನು ಈಗ ತೆಗೆದುಬಿಡಿರಿ ನಿಮಗೆ ನಾನು ಏನು ಮಾಡಬೇಕೆಂಬದನ್ನು ಆಲೋಚಿಸಿಕೊಳ್ಳುವೆನು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಯೆಹೋವನು ಮೋಶೆಗೆ ಹೀಗೆಂದನು. “ನೀನು ಇಸ್ರಾಯೇಲರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಮೊಂಡುತನವುಳ್ಳ ಜನರು, ನಾನು ಒಂದು ಕ್ಷಣ ಮಾತ್ರ ನಿಮ್ಮ ಮಧ್ಯದಲ್ಲಿ ಬರುವುದಾದರೆ, ನಾನು ನಿಮ್ಮನ್ನು ನಿರ್ಮೂಲ ಮಾಡಿಬಿಡುವೆನು. ಆದಕಾರಣ ನಿಮ್ಮ ಆಭರಣಗಳನ್ನು ಈಗ ತೆಗೆದುಬಿಡಿರಿ. ನಿಮಗೆ ನಾನು ಏನು ಮಾಡಬೇಕೆಂಬುದನ್ನು ಆಲೋಚಿಸಿಕೊಳ್ಳುವೆನು’” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಏಕೆಂದರೆ ಮೋಶೆಯ ಮುಖಾಂತರ ಸರ್ವೇಶ್ವರ, “ನೀವು ನನ್ನ ಆಜ್ಞೆಗಳಿಗೆ ಬಗ್ಗದ ಹಟಮಾರಿಗಳು. ನಾನು ಕ್ಷಣಮಾತ್ರ ನಿಮ್ಮೊಡನೆ ಬರುವುದಾದರೆ ನಿರ್ಮೂಲವಾಗಿಬಿಡುವಿರಿ, ಎಚ್ಚರಿಕೆ! ಆದ್ದರಿಂದ ನಿಮ್ಮ ಒಡವೆವಸ್ತುಗಳನ್ನು ತೆಗೆದುಬಿಡಿ. ನಿಮಗೇನು ಮಾಡಬೇಕೆಂದು ಆಲೋಚಿಸುವೆನು,” ಎಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಯೆಹೋವನು ಮೋಶೆಗೆ, “ಇಸ್ರೇಲರಿಗೆ ಹೀಗೆಂದು ಹೇಳು: ನೀವು ಅವಿಧೇಯರಾದ ಜನರಾಗಿದ್ದೀರಿ. ನಾನು ನಿಮ್ಮೊಡನೆ ಕ್ಷಣಹೊತ್ತು ಸಂಚರಿಸಿದರೆ, ನಿಮ್ಮನ್ನು ಸಂಹರಿಸುವೆನು. ಆದ್ದರಿಂದ ನಿಮ್ಮೆಲ್ಲಾ ಆಭರಣಗಳನ್ನು ತೆಗೆದುಬಿಡಿರಿ. ನೀವು ಮಾಡಬೇಕಾದದ್ದನ್ನು ನಾನೇ ತಿಳಿಸುವೆನು!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಏಕೆಂದರೆ ಯೆಹೋವ ದೇವರು ಮೋಶೆಗೆ, “ಇಸ್ರಾಯೇಲರಿಗೆ ಹೀಗೆ ಹೇಳು: ‘ನೀವು ಆಜ್ಞೆಗಳನ್ನು ಪಾಲಿಸದ ಹಟಮಾರಿ ಜನರು. ನಾನು ಕ್ಷಣಮಾತ್ರವೂ ನಿಮ್ಮೊಡನೆ ಬಂದರೆ ನೀವು ನಿರ್ಮೂಲವಾಗಿಬಿಡುವಿರಿ. ಹೀಗಿರುವುದರಿಂದ ಈಗ ನಿಮ್ಮ ಆಭರಣಗಳನ್ನು ನಿಮ್ಮಿಂದ ತೆಗೆದುಬಿಡಿರಿ, ನಾನು ನಿಮಗೆ ಏನು ಮಾಡಬೇಕೆಂಬುದನ್ನು ತೀರ್ಮಾನಿಸುವೆನು’ ಎಂದು ಹೇಳು,” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 33:5
16 ತಿಳಿವುಗಳ ಹೋಲಿಕೆ  

ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು.


ಯಾರ ಕೈಯೂ ಸೋಕದೆ ಕ್ಷಣಮಾತ್ರದಲ್ಲಿ ಹಾಳಾದ ಸೊದೋವಿುನ ಪಾಪಕ್ಕಿಂತಲೂ ನನ್ನ ಪ್ರಜೆಯ ಅಧರ್ಮವು ಹೆಚ್ಚಾಯಿತಲ್ಲಾ.


ಕಣ್ಣೀರುಸುರಿಸಿ ಅಂಗಲಾಚಿ ತಲೆಬೋಳಿಸಿಕೊಂಡು ಗೋಣಿತಟ್ಟನ್ನು ಸುತ್ತಿಕೊಳ್ಳಿರಿ ಎಂದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಆ ದಿನದಲ್ಲಿ ನಿಮಗೆ ಆಜ್ಞಾಪಿಸಿದನು;


ಅವರು ನಿವಿುಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ; ಭಯಂಕರರೀತಿಯಿಂದ ಸಂಹಾರವಾಗಿ ಮುಗಿದು ಹೋಗುತ್ತಾರೆ.


ಕ್ಷಣಮಾತ್ರದೊಳಗೆ ಮಧ್ಯರಾತ್ರಿಯಲ್ಲೇ ಸಾಯುವರು, ಪ್ರಜೆಗಳು ಕದಲಿ ಇಲ್ಲವಾಗುವರು, ಮನುಷ್ಯನ ಕೈ ಸೋಕದೆ ಬಲಿಷ್ಠರೂ ಅಪಹರಿಸಲ್ಪಡುವರು.


ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ್ದನ್ನೂ ನೀವು ತನ್ನ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ.


ಆ ದೂತನು ಅವನಿಗೆ - ನಿನ್ನ ಹುಡುಗನ ಮೇಲೆ ಕೈಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನಾದರೂ ನನಗೆ ಸಮರ್ಪಿಸುವದಕ್ಕೆ ಹಿಂದೆಗೆಯಲಿಲ್ಲವಾದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬದು ಈಗ ತೋರಬಂತು ಎಂದು ಹೇಳಿದನು.


ನಾನು ಇಳಿದು ಹೋಗಿ ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುತ್ತೇನೆ ಅಂದನು.


ಚಂಡಿಗಳೇ, ಮನಶ್ಶುದ್ಧಿಯೂ ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ.


ಅದಲ್ಲದೆ ಯೆಹೋವನು ಮೋಶೆಗೆ - ಈ ಜನರ ಸ್ವಭಾವವನ್ನು ನಾನು ನೋಡಿದ್ದೇನೆ; ಇವರು ನನ್ನ ಆಜ್ಞೆಗೆ ಬೊಗ್ಗದವರಾಗಿದ್ದಾರೆ;


ಆದದರಿಂದ ಇಸ್ರಾಯೇಲ್ಯರು ಹೋರೆಬ್ ಬೆಟ್ಟದಿಂದೀಚೆಗೆ ಆಭರಣಗಳನ್ನು ಧರಿಸಿಕೊಳ್ಳದೆ ಇದ್ದರು.


ನೀನು ಹಟಗಾರ, ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ತಾಮ್ರ ಎಂದು ನಾನು ತಿಳಿದುಕೊಂಡೆನು;


ಯೆಹೋವನು ಇಂತೆನ್ನುತ್ತಾನೆ - ಈಗಲಾದರೋ ನೀವು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಂಡು ಉಪವಾಸಮಾಡಿರಿ, ಅಳಿರಿ, ಗೋಳಾಡಿರಿ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು