ವಿಮೋಚನಕಾಂಡ 32:25 - ಕನ್ನಡ ಸತ್ಯವೇದವು J.V. (BSI)25 ಜನರು ಅಂಕೆತಪ್ಪಿ ತಮ್ಮ ಇಷ್ಟಬಂದಂತೆ ಮಾಡುವದಕ್ಕೆ ಆರೋನನು ಅವರನ್ನು ಬಿಟ್ಟದ್ದರಿಂದ ಅವರ ವಿರೋಧಿಗಳು ಅಪಹಾಸ್ಯ ಮಾಡುವದಕ್ಕೆ ಆಸ್ಪದವಾಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಮೋಶೆಯು ಜನರು ಅಂಕೆ ತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಸಡಿಲವಾಗಿ ಬಿಟ್ಟಿದ್ದರಿಂದ ಅವನ ವಿರೋಧಿಗಳು ಅಪಹಾಸ್ಯಮಾಡುವುದಕ್ಕೆ ಆಸ್ಪದವಾಯಿತು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ಇಸ್ರಯೇಲರು ಅಂಕೆಮೀರಿ ಇಷ್ಟಬಂದಂತೆ ನಡೆದುಕೊಳ್ಳಲು ಆರೋನನು ಬಿಟ್ಟುಬಿಟ್ಟಿದ್ದನು. ಈ ಕಾರಣ ಅವರು ವಿರೋಧಿಗಳ ಅಪಹಾಸ್ಯಕ್ಕೆ ಗುರಿಯಾಗಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ಜನರು ಅಂಕೆತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಬಿಟ್ಟುಬಿಟ್ಟಿರುವುದು ಮೋಶೆಗೆ ತಿಳಿಯಿತು. ಜನರು ಕ್ರಮವಿಲ್ಲದೆ ಸ್ವೇಚ್ಛೆಯಿಂದ ನಡೆಯುತ್ತಿದ್ದರು; ಅವರ ಮೂರ್ಖತನವು ಅವರ ವಿರೋಧಿಗಳಿಗೆ ಎದ್ದುಕಾಣುತ್ತಿತ್ತು! ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಮೋಶೆಯು ಜನರು ಕ್ರಮವಿಲ್ಲದಿರುವುದನ್ನು ಕಂಡನು. ಆರೋನನು ಅವರನ್ನು ಮಿತಿಮೀರಿ ಇಷ್ಟಬಂದಂತೆ ಮಾಡುವದಕ್ಕೆ ಅವಕಾಶ ಮಾಡಿಕೊಟ್ಟದ್ದರಿಂದ ಅವರ ವೈರಿಗಳ ಮುಂದೆ ಅಪಹಾಸ್ಯಕ್ಕೆ ಆಸ್ಪದವಾಯಿತು. ಅಧ್ಯಾಯವನ್ನು ನೋಡಿ |