ವಿಮೋಚನಕಾಂಡ 30:32 - ಕನ್ನಡ ಸತ್ಯವೇದವು J.V. (BSI)32 ಮೈಗೆ ಹಚ್ಚಿಕೊಳ್ಳುವದಕ್ಕೆ ಇದನ್ನು ಉಪಯೋಗಿಸಬಾರದು. ಇದರಲ್ಲಿರುವ ಜೀನಸುಗಳ ಮೇರೆಗೆ ಬೇರೆ ಕೆಲಸಕ್ಕೆ ತೈಲವನ್ನು ಮಾಡಲೇಬಾರದು. ಇದು ದೇವರ ವಸ್ತು; ಇದನ್ನು ಮೀಸಲೆಂದು ನೀವು ತಿಳಿದುಕೊಳ್ಳಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201932 ಜನರು ಮೈಗೆ ಹಚ್ಚಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಬಾರದು. ಈ ವಿಧಾನದ ಮೇರೆಗೆ ಬೇರೆ ಕೆಲಸಕ್ಕಾಗಿ ತೈಲವನ್ನು ಮಾಡಲೇಬಾರದು. ಇದು ದೇವರ ವಸ್ತು. ಇದು ಪರಿಶುದ್ಧವಾದದ್ದು ಎಂದು ನೀವು ತಿಳಿದುಕೊಳ್ಳಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)32 ಮೈಗೆ ಹಚ್ಚಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಬಾರದು. ಈ ವಿಧಾನವನ್ನು ಅನುಸರಿಸಿ ಬೇರೆ ಕಾರ್ಯಕ್ಕಾಗಿ ತೈಲವನ್ನು ತಯಾರಿಸಲೇ ಕೂಡದು. ಇದು ದೇವರ ವಸ್ತು. ಇದು ಮೀಸಲೆಂದು ನೀವು ತಿಳಿದುಕೊಳ್ಳಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್32 ಯಾರೂ ಇದನ್ನು ಸಾಮಾನ್ಯವಾದ ಸುಗಂಧ ವಾಸನೆಯುಳ್ಳ ತೈಲವಾಗಿ ಉಪಯೋಗಿಸಬಾರದು. ಈ ವಿಶೇಷವಾದ ತೈಲವನ್ನು ಮಾಡುವ ರೀತಿಯಲ್ಲಿ ಸಾಮಾನ್ಯವಾದ ಸುಗಂಧತೈಲವನ್ನು ಮಾಡಬಾರದು. ಈ ತೈಲವು ಪವಿತ್ರವಾದದ್ದು. ಇದು ನಿಮಗೆ ಬಹಳ ವಿಶೇಷವಾದದ್ದಾಗಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ32 ಇದನ್ನು ಮನುಷ್ಯರ ಮೇಲೆ ಹೊಯ್ಯಬಾರದು. ಇದರ ಮಾದರಿಯಂತೆ ಅಥವಾ ಇದಕ್ಕೆ ಸಮಾನವಾದದ್ದನ್ನು ಮಾಡಬಾರದು. ಇದು ಪರಿಶುದ್ಧವಾದದ್ದು. ನೀವು ಸಹ ಇದನ್ನು ಪರಿಶುದ್ಧವೆಂದು ತಿಳಿದುಕೊಳ್ಳಬೇಕು. ಅಧ್ಯಾಯವನ್ನು ನೋಡಿ |