ವಿಮೋಚನಕಾಂಡ 30:12 - ಕನ್ನಡ ಸತ್ಯವೇದವು J.V. (BSI)12 ನೀನು ಖಾನೇಷುಮಾರಿಯಾಗತಕ್ಕ ಇಸ್ರಾಯೇಲ್ಯರನ್ನು ಲೆಕ್ಕಿಸುವಾಗ ಅವರೊಳಗೆ ವ್ಯಾಧಿಸಂಭವಿಸದಂತೆ ಪ್ರತಿಯೊಬ್ಬನು ತನ್ನ ತನ್ನ ಪ್ರಾಣಕ್ಕೆ ಈಡಾಗಿ ಯೆಹೋವನಿಗೆ ಕಪ್ಪವನ್ನು ಕೊಡಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 “ನೀನು ಇಸ್ರಾಯೇಲ್ಯರ ಜನಗಣತಿ ಮಾಡಿಸಿ ಅವರನ್ನು ಲೆಕ್ಕಿಸುವಾಗ ಅವರಿಗೆ ಬಾಧೆಯುಂಟಾಗಿ ವ್ಯಾಧಿ ಸಂಭವಿಸದಂತೆ ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣಕ್ಕಾಗಿ ವಿಮೋಚನ ಕ್ರಯವನ್ನು ಯೆಹೋವನಿಗೆ ಕೊಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 “ನೀನು ಇಸ್ರಯೇಲರ ಜನಗಣತಿ ಮಾಡುವಾಗ ಲೆಕ್ಕಿಸಬೇಕಾದ ಪ್ರತಿಯೊಬ್ಬನು ತನ್ನ ತನ್ನ ಪ್ರಾಣಕ್ಕೆ ಈಡಾಗಿ ಸರ್ವೇಶ್ವರನಾದ ನನಗೆ ತೆರಿಗೆಯನ್ನು ಕೊಡಬೇಕು. ಆಗ ಅವರಿಗೆ ಯಾವ ವಿಪತ್ತು ಸಂಭವಿಸದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 “ಇಸ್ರೇಲರನ್ನು ಲೆಕ್ಕಿಸು. ಹೀಗಾಗಿ ಎಷ್ಟು ಮಂದಿ ಜನರಿರುತ್ತಾರೆಂದು ನೀನು ತಿಳಿದುಕೊಳ್ಳುವೆ. ಪ್ರತಿಸಾರಿ ಇದನ್ನು ಮಾಡಿದಾಗ, ಪ್ರತಿಯೊಬ್ಬನು ತನಗೋಸ್ಕರವಾಗಿ ಯೆಹೋವನಿಗೆ ತೆರಿಗೆಯನ್ನು ಕೊಡಬೇಕು. ಆಗ ಜನರಿಗೆ ಯಾವ ಕೇಡುಗಳೂ ಉಂಟಾಗುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 “ನೀನು ಇಸ್ರಾಯೇಲರನ್ನು ಎಣಿಸಲು ಜನಗಣತಿಯನ್ನು ತೆಗೆದುಕೊಂಡಾಗ ಪ್ರತಿಯೊಬ್ಬನು ತನ್ನ ಜೀವನದ ವಿಮೋಚನೆಯ ಕ್ರಯವನ್ನು ಯೆಹೋವ ದೇವರಿಗೆ ಕೊಡಬೇಕು. ಈ ರೀತಿ ಮಾಡಿದಲ್ಲಿ ಅವರನ್ನು ಎಣಿಸುವಾಗ ಅವರಲ್ಲಿ ವ್ಯಾಧಿ ಉಂಟಾಗುವುದಿಲ್ಲ. ಅಧ್ಯಾಯವನ್ನು ನೋಡಿ |
ಮೂರುವರುಷಗಳ ಕಾಲ ಬರವು ಉಂಟಾಗಬೇಕೋ, ಇಲ್ಲವೆ ಮೂರು ತಿಂಗಳುಗಳವರೆಗೆ ನಿನ್ನ ಶತ್ರುಗಳ ಕತ್ತಿಗೆ ಬಲಿಯಾಗುವದು ಬೇಕೋ, ಇಲ್ಲವೆ ಇಸ್ರಾಯೇಲ್ಯರ ಸಮಸ್ತಪ್ರಾಂತಗಳಲ್ಲಿ ಯೆಹೋವನು ಕಳುಹಿಸಿದ ಸಂಹಾರಕದೂತನಿಂದುಂಟಾಗುವ ಮೂರು ದಿನಗಳ ಘೋರ ವ್ಯಾಧಿ ರೂಪವಾದ ಯೆಹೋವನ ಕತ್ತಿಯುಬೇಕೋ? ಈ ಮೂರರಲ್ಲಿ ಒಂದನ್ನು ಆರಿಸಿಕೋ ಎಂಬದೇ. ನನ್ನನ್ನು ಕಳುಹಿಸಿದವನಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು ಎಂದು ಹೇಳಿದನು.