Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 28:41 - ಕನ್ನಡ ಸತ್ಯವೇದವು J.V. (BSI)

41 ಆ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ ಅವನ ಮಕ್ಕಳಿಗೂ ತೊಡಿಸಿ ಅವರನ್ನು ಅಭಿಷೇಕಿಸಿ ಉದ್ಯೋಗಕ್ಕೆ ಸೇರಿಸಿ ಪ್ರತಿಷ್ಠಿಸಬೇಕು; ಆಗ ಅವರು ನನಗೆ ಯಾಜಕರಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಅವರು ನನಗೆ ಯಾಜಕಸೇವೆ ಮಾಡುವುದಕ್ಕಾಗಿ ಆ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ, ಅವನ ಮಕ್ಕಳಿಗೂ ತೊಡಿಸಿ, ಅವರನ್ನು ಅಭಿಷೇಕಿಸಿ, ಸೇವೆಗಾಗಿ ಪ್ರತಿಷ್ಠಿಸಿ ಶುದ್ಧೀಕರಿಸಿಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಈ ಬಗೆಯ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ ಅವನ ಮಕ್ಕಳಿಗೂ ತೊಡಿಸಿ, ಅವರನ್ನು ಅಭಿಷೇಕಿಸಿ, ಉದ್ಯೋಗಕ್ಕೆ ಸೇರಿಸಿ ಪ್ರತಿಷ್ಠಿಸು. ಆಗ ಅವರು ನನಗೆ ಯಾಜಕರಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ನಿನ್ನ ಸಹೋದರನಾದ ಆರೋನನಿಗೆ ಮತ್ತು ಅವನ ಗಂಡುಮಕ್ಕಳಿಗೆ ಬಟ್ಟೆಗಳನ್ನು ತೊಡಿಸು. ಬಳಿಕ ಅವರನ್ನು ಯಾಜಕರನ್ನಾಗಿ ಮಾಡಲು ವಿಶೇಷ ತೈಲದಿಂದ ಅಭಿಷೇಕಿಸು. ಇದು ಅವರನ್ನು ಪ್ರತಿಷ್ಠಿಸುವುದು ಮತ್ತು ಪವಿತ್ರರನ್ನಾಗಿ ಮಾಡುವುದು. ಅವರು ಯಾಜಕರಾಗಿ ನನ್ನ ಸೇವೆ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಅವುಗಳನ್ನು ನಿನ್ನ ಸಹೋದರ ಆರೋನನ ಮತ್ತು ಅವನ ಪುತ್ರರಿಗೆ ತೊಡಿಸಿ, ಅವರನ್ನು ಅಭಿಷೇಕಿಸಿ, ಪ್ರತಿಷ್ಠೆ ಮಾಡು. ಅವರು ನನಗೆ ಯಾಜಕ ಸೇವೆ ಮಾಡುವ ಹಾಗೆ ಅವರನ್ನು ಶುದ್ಧಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 28:41
24 ತಿಳಿವುಗಳ ಹೋಲಿಕೆ  

ಅಭಿಷೇಕತೈಲವನ್ನು ಅವನ ತಲೆಯ ಮೇಲೆ ಅಭ್ಯಂಜನಮಾಡಿ ಅವನನ್ನು ಅಭಿಷೇಕಿಸಬೇಕು.


ಯೆಹೋವನ ಅಭಿಷೇಕ ತೈಲವು ನಿಮ್ಮ ಮೇಲಿರುವದರಿಂದ ನೀವು ದೇವದರ್ಶನದ ಗುಡಾರದ ಬಾಗಲನ್ನು ಬಿಟ್ಟು ಹೋಗಬಾರದು; ಹೋದರೆ ಸತ್ತೀರಿ ಎಂದು ಹೇಳಿದನು. ಮೋಶೆಯ ಮಾತಿನಂತೆಯೇ ಅವರು ನಡಕೊಂಡರು.


ಅವರು ನನಗೋಸ್ಕರ ಯಾಜಕರಾಗುವದಕ್ಕಾಗಿ ನೀನು ಅವರ ತಂದೆಯನ್ನು ಅಭಿಷೇಕಿಸಿದಂತೆಯೇ ಅವರನ್ನೂ ಅಭಿಷೇಕಿಸಬೇಕು. ಈ ಅಭಿಷೇಕದಿಂದ ಯಾಜಕತ್ವವು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿರುವದು ಎಂದು ಹೇಳಿದನು.


ಆರೋನನಿಗೂ ಅವನ ಮಕ್ಕಳಿಗೂ ನಡುಕಟ್ಟುಗಳನ್ನು ಕಟ್ಟಿಸಿ ಮುಂಡಾಸಗಳನ್ನು ಸುತ್ತಿಸಬೇಕು. ಆ ಹೊತ್ತಿನಿಂದ ಯಾಜಕತ್ವವು ಶಾಶ್ವತವಾದ ನಿಯಮದಿಂದ ಅವರಿಗೆ ಉಂಟಾಗುವದು. ಹೀಗೆ ಆರೋನನನ್ನೂ ಅವನ ಮಕ್ಕಳನ್ನೂ ಯಾಜಕೋದ್ಯೋಗಕ್ಕೆ ಸೇರಿಸಬೇಕು.


ಧರ್ಮಶಾಸ್ತ್ರವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇವಿುಸುತ್ತದೆ; ಆದರೆ ಧರ್ಮಶಾಸ್ತ್ರದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ನೇವಿುಸುತ್ತದೆ.


ಆದರೆ ಆತನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುವದರಿಂದ ಯಾವನಾದರೂ ನಿಮಗೆ ಉಪದೇಶ ಮಾಡುವದು ಅವಶ್ಯವಿಲ್ಲ. ಆತನು ಮಾಡಿದ ಅಭಿಷೇಕವು ಎಲ್ಲಾ ವಿಷಯಗಳಲ್ಲಿ ನಿಮಗೆ ಉಪದೇಶ ಮಾಡುವಂಥದಾಗಿದ್ದು ಸತ್ಯವಾಗಿದೆ, ಸುಳ್ಳಲ್ಲ. ಅದು ನಿಮಗೆ ಉಪದೇಶ ಮಾಡಿದ ಪ್ರಕಾರ ಆತನಲ್ಲಿ ನೆಲೆಗೊಂಡಿರ್ರಿ.


ನೀವು ಪವಿತ್ರನಾಗಿರುವಾತನಿಂದ ಅಭಿಷೇಕವನ್ನು ಹೊಂದಿದವರಾಗಿದ್ದು ಎಲ್ಲರೂ ತಿಳಿದವರಾಗಿದ್ದೀರಿ.


ಇದಲ್ಲದೆ ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವವನ್ನು ವಹಿಸಿಕೊಳ್ಳದೆ ದೇವರಿಂದ ನೇವಿುಸಲ್ಪಟ್ಟು ವಹಿಸಿಕೊಳ್ಳುತ್ತಾನೆ; ಆರೋನನು ಸಹ ದೇವರಿಂದಲೇ ನೇವಿುಸಲ್ಪಟ್ಟು ಆ ಗೌರವವನ್ನು ವಹಿಸಿಕೊಂಡನಲ್ಲಾ.


ಹೇಗಂದರೆ ದೇವರು ಯಾರನ್ನು ಕಳುಹಿಸಿದ್ದಾನೋ ಆತನಿಗೆ ಆತ್ಮವರವನ್ನು ಅಳತೆಮಾಡದೆ ಅನುಗ್ರಹಿಸುವದರಿಂದ ಆತನು ದೇವರ ಮಾತುಗಳನ್ನೇ ಆಡುತ್ತಾನೆ.


ಹೀಗೆ ಏಳು ದಿವಸ ಯಜ್ಞವೇದಿಯ ದೋಷವನ್ನು ಪರಿಹರಿಸುತ್ತಾ ಅದನ್ನು ಶುದ್ಧಿಮಾಡಿ ಪ್ರತಿಷ್ಠಿಸಬೇಕು.


ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ಸೆರೆಯವರಿಗೆ ಬಿಡುಗಡೆಯಾಗುವದನ್ನು, ಬಂದಿಗಳಿಗೆ [ಕದ] ತೆರೆಯುವದನ್ನು ಪ್ರಸಿದ್ಧಿಪಡಿಸುವದಕ್ಕೂ


ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ ಹೂಡಿದ ನೊಗವು ಕತ್ತಿನಿಂದಲೂ ತೊಲಗುವವು; ನೀವು ಪುಷ್ಟರಾದ ಕಾರಣ ನೊಗವು ಮುರಿದು ಹೋಗುವದು.


ಇವರೇ ಯಾಜಕೋದ್ಯೋಗವನ್ನು ನಡಿಸುವದಕ್ಕಾಗಿ ಅಭಿಷೇಕದಿಂದ ಪ್ರತಿಷ್ಠಿತರಾದವರು.


ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲಿ ಏಳು ದಿವಸದ ಆಚಾರವನ್ನು ನಡಿಸಿ ಆರೋನನನ್ನೂ ಅವನ ಮಕ್ಕಳನ್ನೂ ಉದ್ಯೋಗಕ್ಕೆ ಸೇರಿಸಬೇಕು;


ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಮಕ್ಕಳ ಕೈಗೆ ಕೊಟ್ಟು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು.


ಮಾಡಬೇಕಾದ ವಸ್ತ್ರಗಳು ಯಾವವಂದರೆ - ಪದಕದ ಚೀಲ ಮಹಾಯಾಜಕ ಕವಚ ಮೇಲಂಗಿ ವಿಚಿತ್ರವಾದ ನಿಲುವಂಗಿ ಮುಂಡಾಸ ನಡುಕಟ್ಟು ಇವುಗಳೇ. ನಿನ್ನ ಅಣ್ಣನಾದ ಆರೋನನೂ ಅವನ ಮಕ್ಕಳೂ ನನ್ನ ಯಾಜಕರಾಗುವದಕ್ಕೆ ಅವರಿಗೋಸ್ಕರ ಈ ದೀಕ್ಷಾವಸ್ತ್ರಗಳನ್ನು ಮಾಡಿಸಬೇಕು.


ಇದಲ್ಲದೆ ನನಗೆ ಯಾಜಕಸೇವೆ ಮಾಡುವದಕ್ಕೆ ನೀನು ನಿನ್ನ ಅಣ್ಣನಾದ ಆರೋನನನ್ನೂ ಅವನ ಮಕ್ಕಳಾದ ನಾದಾಬ್ ಅಬೀಹೂ ಎಲ್ಲಾಜಾರ್ ಈತಾಮಾರ್ ಎಂಬವರನ್ನೂ ಇಸ್ರಾಯೇಲ್ಯರಲ್ಲಿಂದ ನಿನ್ನ ಹತ್ತಿರಕ್ಕೆ ಕರಿಸಬೇಕು.


ಆರೋನನು ನನಗೆ ಯಾಜಕನಾಗುವಂತೆ ಅವನಿಗೆ ಆ ದೀಕ್ಷಾವಸ್ತ್ರಗಳನ್ನು ತೊಡಿಸಿ ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಬೇಕು.


ಆಗ ಅವನು ಹೊರಗೆ ಬಂದು ತನಗೋಸ್ಕರವೂ ಜನಸಮೂಹಕ್ಕೋಸ್ಕರವೂ ಸರ್ವಾಂಗಹೋಮಗಳನ್ನು ಸಮರ್ಪಿಸಿ ತನಗೋಸ್ಕರವಾಗಿಯೂ ಜನರಿಗೋಸ್ಕರವಾಗಿಯೂ ದೋಷಪರಿಹಾರಮಾಡಬೇಕು.


ಸುವಾಸನೆಯುಳ್ಳ ಬುಕ್ಕಿಟ್ಟಾಗಿರುವಂತೆ ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಕಲಸಿ ಉಪ್ಪು ಹಾಕಿ ದೇವರ ಸೇವೆಗೆ ಸ್ವಚ್ಫವಾದ ಧೂಪದ್ರವ್ಯವನ್ನು ಮಾಡಿಸಬೇಕು.


ತನ್ನವರು ಯಾರಾರೆಂಬದನ್ನು ಯೆಹೋವನು ನಾಳೆ ತಿಳಿಸುವನು. ಯಾರನ್ನು ಯೆಹೋವನು ಪ್ರತಿಷ್ಠಿಸಿದ್ದಾನೋ ಯಾರನ್ನು ತಾನೇ ಆದು ಕೊಂಡಿದ್ದಾನೋ ಅವರನ್ನು ಮಾತ್ರ ಆತನು ತನ್ನ ಹತ್ತಿರಕ್ಕೆ ಬರಗೊಡಿಸುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು