Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 28:12 - ಕನ್ನಡ ಸತ್ಯವೇದವು J.V. (BSI)

12 ಆ ಎರಡು ರತ್ನಗಳನ್ನು ಹೆಗಲಿನ ಮೇಲಿರುವ ಕವಚದ ಪಟ್ಟಿಗಳಲ್ಲಿ ಬಿಗಿಸಬೇಕು. ಅವು ಇಸ್ರಾಯೇಲ್ಯರ ಜ್ಞಾಪಕಾರ್ಥವಾದ ರತ್ನಗಳಾಗಿರುವವು. ಆರೋನನು ಯೆಹೋವನ ಸನ್ನಿಧಿಗೆ ಹೋಗುವಾಗೆಲ್ಲಾ ಇಸ್ರಾಯೇಲ್ಯರ ಕುಲಗಳ ಹೆಸರುಗಳನ್ನು ಆತನ ನೆನಪಿಗೆ ತರುವದಕ್ಕಾಗಿ ತನ್ನ ಎರಡು ಭುಜಗಳ ಮೇಲೆ ಧರಿಸಿಕೊಂಡು ಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆ ಎರಡು ರತ್ನಗಳನ್ನು ಹೆಗಲಿನ ಮೇಲಿರುವ ಏಫೋದಿನ ಪಟ್ಟಿಗಳಲ್ಲಿ ಹಾಕಿಸಬೇಕು. ಅವು ಇಸ್ರಾಯೇಲರ ಜ್ಞಾಪಕಾರ್ಥವಾದ ರತ್ನಗಳಾಗಿರುವವು. ಆರೋನನು ಯೆಹೋವನ ಸನ್ನಿಧಿಯಲ್ಲಿ ಹೋಗುವಾಗೆಲ್ಲಾ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಆತನ ನೆನಪಿಗೆ ತರುವುದಕ್ಕಾಗಿ ತನ್ನ ಎರಡೂ ಭುಜಗಳ ಮೇಲೆ ಅವುಗಳನ್ನು ಧರಿಸಿಕೊಂಡು ಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಇಸ್ರಯೇಲರ ಜ್ಞಾಪಕಾರ್ಥವಾಗಿ ಆ ಎರಡು ರತ್ನಗಳನ್ನು ಹೆಗಲಿನ ಮೇಲಿರುವ ಕವಚದ ಪಟ್ಟಿಗಳಲ್ಲಿ ಬಿಗಿಸಬೇಕು. ಆರೋನನು ಸರ್ವೇಶ್ವರನಾದ ನನ್ನ ಸನ್ನಿಧಿಗೆ ಭುಜಗಳ ಮೇಲೆ ಅವುಗಳನ್ನು ಧರಿಸಿಕೊಂಡು ಬರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಬಳಿಕ ಈ ಎರಡು ರತ್ನಗಳನ್ನು ಏಫೋದಿನ ಪ್ರತಿಭುಜದ ಪಟ್ಟಿಯಲ್ಲಿಡು. ಆರೋನನು ಯೆಹೋವನ ಮುಂದೆ ನಿಲ್ಲುವಾಗ ಈ ವಿಶೇಷ ಅಂಗಿಯನ್ನು ಧರಿಸಿಕೊಂಡಿರುವನು. ಇಸ್ರೇಲನ ಗಂಡುಮಕ್ಕಳ ಹೆಸರುಗಳುಳ್ಳ ಎರಡು ರತ್ನಗಳು ಏಫೋದಿನ ಮೇಲಿರುತ್ತವೆ. ದೇವರು ಇಸ್ರೇಲರನ್ನು ಜ್ಞಾಪಿಸಿಕೊಳ್ಳುವಂತೆ ಈ ರತ್ನಗಳು ಮಾಡುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆ ಎರಡು ರತ್ನಗಳನ್ನು ಏಫೋದಿನ ಹೆಗಲಿನ ಭಾಗದ ಮೇಲೆ ಇಸ್ರಾಯೇಲರ ಜ್ಞಾಪಕಾರ್ಥವಾದ ರತ್ನಗಳಾಗಿ ಇಡಬೇಕು. ಆರೋನನು ತನ್ನ ಎರಡು ಹೆಗಲುಗಳ ಮೇಲೆ ಅವರ ಹೆಸರುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಜ್ಞಾಪಕಾರ್ಥವಾಗಿ ಹೊರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 28:12
23 ತಿಳಿವುಗಳ ಹೋಲಿಕೆ  

ದೈವನಿರ್ಣಯದ ಪದಕದ ಮೇಲೆ ಇಸ್ರಾಯೇಲ್ಯರ ಕುಲಗಳ ಹೆಸರುಗಳು ಬರೆದಿರುವದರಿಂದ ಆರೋನನು ಪವಿತ್ರಸ್ಥಾನದೊಳಗೆ ಹೋಗುವಾಗೆಲ್ಲಾ ಆ ಹೆಸರುಗಳನ್ನು ನಿತ್ಯವಾಗಿ ಯೆಹೋವನ ನೆನಪಿಗೆ ತರುವದಕ್ಕಾಗಿ ತನ್ನ ಹೃದಯದ ಮೇಲೆ ವಹಿಸುವನು.


ನೀವು ಅವರಿಗೆ - ಯೆಹೋವನ ಒಡಂಬಡಿಕೆಯ ಮಂಜೂಷವು ಯೊರ್ದನನ್ನು ದಾಟುವಾಗ ಅದರ ಮುಂದೆ ಯೊರ್ದನಿನ ನೀರು ನಿಂತುಹೋಯಿತೆಂದು ಹೇಳಿರಿ. ಯೊರ್ದನಿನ ನೀರು ನಿಂತುಹೋಯಿತೆಂಬದಕ್ಕೆ ಈ ಕಲ್ಲುಗಳು ಇಸ್ರಾಯೇಲ್ಯರಿಗೆ ಸದಾಕಾಲವೂ ಸಾಕ್ಷಿಗಳಾಗಿರುವವು ಅಂದನು.


ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಕೊಟ್ಟ ಚಿನ್ನವನ್ನು ಮೋಶೆಯೂ ಮಹಾಯಾಜಕ ಎಲ್ಲಾಜಾರನೂ ತೆಗೆದುಕೊಂಡು ಇಸ್ರಾಯೇಲ್ಯರ ವಿಷಯದಲ್ಲಿ ಯೆಹೋವನಿಗೆ ಜ್ಞಾಪಕಕೊಡುವದಕ್ಕಾಗಿ ದೇವದರ್ಶನದ ಗುಡಾರದೊಳಗೆ ತಂದರು.


ಆರೋನನ ಸಂತತಿಯವರಲ್ಲದ ಇತರರಲ್ಲಿ ಯಾರೂ ಯೆಹೋವನ ಸನ್ನಿಧಿಗೆ ಬಂದು ಧೂಪವನ್ನು ಸಮರ್ಪಿಸಬಾರದು; ಸಮರ್ಪಿಸಿದರೆ ಕೋರಹನಿಗೂ ಅವನ ಜೊತೆಗಾರರಿಗೂ ಉಂಟಾದ ಗತಿಗೆ ಗುರಿಯಾದಾರೆಂದು ಇಸ್ರಾಯೇಲ್ಯರಿಗೆ ನೆನಪು ಹುಟ್ಟಿಸುವದಕ್ಕಾಗಿ ಅದು ಗುರುತಾಯಿತು.


ಒಂದೊಂದು ರಾಶಿಯ ಮೇಲೆ ಸ್ವಚ್ಫವಾದ ಧೂಪವನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸುವದಕ್ಕಾಗಿ ಆ ಧೂಪವೇ ಯೆಹೋವನಿಗೆ ಹೋಮಮಾಡಲ್ಪಡಬೇಕು.


ಅವನು ಆ ದೂತನನ್ನು ದೃಷ್ಟಿಸಿನೋಡಿ ಭಯಹಿಡಿದವನಾಗಿ - ಏನು ಸ್ವಾಮೀ ಎಂದು ಕೇಳಲು ದೂತನು ಅವನಿಗೆ - ನಿನ್ನ ಪ್ರಾರ್ಥನೆಗಳೂ ನಿನ್ನ ದಾನಧರ್ಮಗಳೂ ದೇವರ ಮುಂದೆ ಜ್ಞಾಪಕಾರ್ಥವಾಗಿ ಏರಿ ಬಂದವು.


ಆತನು ನಮ್ಮ ಪೂರ್ವಿಕರಿಗೆ ಹೇಳಿದ್ದಕ್ಕೆ ಸರಿಯಾಗಿ ಅಬ್ರಹಾಮನಿಗೂ ಅವನ ವಂಶದವರಿಗೂ ಯಾವಾಗಲೂ ದಯೆ ತೋರಿಸಬೇಕೆಂಬದನ್ನು ನೆನಸಿಕೊಂಡು ತನ್ನ ಸೇವಕನಾದ ಇಸ್ರಾಯೇಲನನ್ನು ಕೈಹಿಡಿದಿದ್ದಾನೆ ಅಂದಳು.


ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇವಿುಸಿದ್ದೇನೆ; ಅವರು ಹಗಲೂ ಇರುಳೂ ಮೌನವಾಗಿರರು.


ಇಗೋ ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸಪಡುವೆನು; ನನ್ನ ಬಲವೂ ಕೀರ್ತನೆಯೂ ಯಾಹುಯೆಹೋವನಷ್ಟೆ, ಆತನೇ ನನಗೆ ರಕ್ಷಕನಾದನು ಎಂಬದೇ.


ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರವಿುಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು.


ಆ ಕಾಲದಲ್ಲಿ ನೀನು ದರ್ಶನದಲ್ಲಿ ನಿನ್ನ ಭಕ್ತರಿಗೆ ಹೇಳಿದ್ದೇನಂದರೆ - ಒಬ್ಬ ಶೂರನಿಗೆ ರಕ್ಷಾಬಲವನ್ನು ಅನುಗ್ರಹಿಸಿದ್ದೇನೆ; ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತಸ್ಥಾನದಲ್ಲಿಟ್ಟಿದ್ದೇನೆ.


ಆ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳು ಇರಬೇಕು. ಅದರ ಎರಡು ಕೊನೆಗಳು ಜೋಡಿಸಲ್ಪಡಬೇಕು.


ಯೆಹೋವನು ತನ್ನ ಭುಜಬಲದಿಂದ ನಿಮ್ಮನ್ನು ಐಗುಪ್ತದೇಶದಿಂದ ಬಿಡಿಸಿದನಾದದರಿಂದ ಆತನ ನಿಯಮವನ್ನು ಕುರಿತು ನೀವು ಮಾತಾಡಬೇಕೆಂಬದಕ್ಕಾಗಿ ಈ ಆಚಾರವು ನಿಮಗೆ ಕೈಯಲ್ಲಿ ಕಟ್ಟಿಕೊಂಡಿರುವ ದಾರದಂತೆಯೂ ಹುಬ್ಬುಗಳ ನಡುವೆ ಕಟ್ಟಿಕೊಂಡಿರುವ ಜ್ಞಾಪಕಪಟ್ಟಿಯಂತೆಯೂ ಇರುವದು.


ಆ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು. ಅದರಲ್ಲಿ ಯೆಹೋವನ ಘನಕ್ಕಾಗಿ ಹಬ್ಬವನ್ನು ಮಾಡಬೇಕು. ಅದನ್ನು ಶಾಶ್ವತನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು.


ಇದು ನಿಮಗೋಸ್ಕರವಾಗಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ ಅಂದನು.


ಮುದ್ರಾರತ್ನವನ್ನು ಕೆತ್ತುವ ರೀತಿಯಲ್ಲಿ ಆ ಎರಡು ರತ್ನಗಳಲ್ಲಿ ಇಸ್ರಾಯೇಲ್ಯರ ಕುಲಗಳ ಹೆಸರುಗಳನ್ನು ಕೆತ್ತಿಸಿ ಆ ರತ್ನಗಳನ್ನು ಕುಂದಣದಲ್ಲಿ ಕಟ್ಟಿಸಬೇಕು.


ಬೆನ್ಯಾಮೀನ್ ಕುಲದವರ ವಿಷಯದಲ್ಲಿ ಹೀಗಂದನು - ಯೆಹೋವನು ಇವರ ಬೆಟ್ಟಗಳ ತಪ್ಪಲುಗಳಲ್ಲೇ ನಿವಾಸಿಸುತ್ತಾ ಇವರನ್ನು ಯಾವಾಗಲೂ ಆವರಿಸಿಕೊಂಡಿರುವದರಿಂದ ಆತನ ಪ್ರಿಯರಾದ ಇವರು ನಿರ್ಭಯವಾಗಿ ವಾಸಿಸುವರು.


ಅದನ್ನು ಹೆಗಲ ಮೇಲೆ ಇಟ್ಟುಕೊಳ್ಳುತ್ತಿದ್ದೆನು, ಕಿರೀಟವನ್ನಾಗಿ ಧರಿಸುತ್ತಿದ್ದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು