Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 27:9 - ಕನ್ನಡ ಸತ್ಯವೇದವು J.V. (BSI)

9 ಗುಡಾರಕ್ಕೆ ಅಂಗಳವನ್ನು ಏರ್ಪಡಿಸಬೇಕು. ಆ ಅಂಗಳದ ತೆಂಕಣ ಕಡೆಯಲ್ಲಿ ತೆರೆಗಳು ಇರಬೇಕು. ಆ ತೆರೆಗಳು ಹುರಿನಾರಿನ ಬಟ್ಟೆಯಿಂದ ಉಂಟಾಗಿ ನೂರು ಮೊಳ ಉದ್ದವಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಪರಿಶುದ್ಧ ಗುಡಾರಕ್ಕೆ ಅಂಗಳವನ್ನು ಮಾಡಿಸಬೇಕು. ಆ ದಕ್ಷಿಣ ಭಾಗದ ಅಂಗಳಕ್ಕೆ ಪರದೆಗಳು ಇರಬೇಕು. ಆ ಪರದೆಗಳನ್ನು ನಯವಾಗಿ ಹೊಸೆದ ಹತ್ತಿಯ ನೂಲಿನಿಂದ ಬಟ್ಟೆಯಿಂದ ಮಾಡಿಸಬೇಕು. ಅವು ನೂರು ಮೊಳ ಉದ್ದವಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 “ಗುಡಾರಕ್ಕೆ ಅಂಗಳವನ್ನು ಏರ್ಪಡಿಸಬೇಕು. ಆ ಅಂಗಳದ ದಕ್ಷಿಣ ಕಡೆಯಲ್ಲಿ ತೆರೆಗಳು ಇರಬೇಕು. ಹುರಿನಾರಿನ ಬಟ್ಟೆಯಿಂದ ತಯಾರಿಸಿದ ಆ ತೆರೆಗಳು ನೂರು ಮೊಳ ಉದ್ದವಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ಪವಿತ್ರಗುಡಾರಕ್ಕೆ ಅಂಗಳವನ್ನು ಮಾಡಿಸಬೇಕು. ದಕ್ಷಿಣ ದಿಕ್ಕಿನಲ್ಲಿ ನೂರು ಮೊಳ ಉದ್ದದ ಪರದೆಗಳ ಗೋಡೆಯಿರಬೇಕು. ಈ ಪರದೆಗಳನ್ನು ಉತ್ತಮ ನಾರುಬಟ್ಟೆಯಿಂದ ಮಾಡಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ಗುಡಾರದ ಅಂಗಳವನ್ನು ಮಾಡಬೇಕು. ಹೇಗೆಂದರೆ ದಕ್ಷಿಣ ದಿಕ್ಕಿನಲ್ಲಿರುವ ಅಂಗಳಕ್ಕೋಸ್ಕರ ನಯವಾಗಿ ಹೊಸೆದ ನಾರಿನ ಪರದೆಗಳನ್ನು ಮಾಡಬೇಕು. ಅವು ಸುಮಾರು ನಲವತ್ತೈದು ಮೀಟರ್ ಉದ್ದವಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 27:9
29 ತಿಳಿವುಗಳ ಹೋಲಿಕೆ  

ಒಳಗಣ ಪ್ರಾಕಾರಕ್ಕೆ ಸೇರಿದ ಇಪ್ಪತ್ತು ಮೊಳ ಅಗಲದ ದೀಕ್ಷಿತರ ಪ್ರಾಕಾರಕ್ಕೂ ಹೊರಗಣ ಪ್ರಾಕಾರದ ನೆಲಗಟ್ಟಿಗೂ ನಡುವೆಯಿದ್ದ ಆ ಪ್ರದೇಶವು ಐವತ್ತು ಮೊಳ ಅಗಲ; [ಅಲ್ಲಿನ ಎರಡು ಸಾಲುಗಳ] ಮೂರನೆಯ ಅಂತಸ್ತಿನ ಅಂಚಿನ ದಾರಿಗಳು ಒಂದಕ್ಕೊಂದು ಎದುರಾಗಿದ್ದವು.


ಆಮೇಲೆ ಅವನು ನನ್ನನ್ನು ಒಳಗಣ ಪ್ರಾಕಾರಕ್ಕೆ ಕರತಂದನು; ಇಗೋ, ಅಲ್ಲಿ ಎರಡು ಕೋಣೆಗಳು ಕಾಣಿಸಿದವು; ಬಡಗಣ ಹೆಬ್ಬಾಗಿಲ ಪಕ್ಕದಲ್ಲಿ ಒಂದು ಕೋಣೆಯು ತೆಂಕಲಿಗೆ ಅಭಿಮುಖವಾಗಿತ್ತು; ತೆಂಕಣ ಹೆಬ್ಬಾಗಿಲ ಪಕ್ಕದಲ್ಲಿ ಇನ್ನೊಂದು ಕೋಣೆಯು ಬಡಗಲಿಗೆ ಅಭಿಮುಖವಾಗಿತ್ತು.


ಅವನು ನನ್ನನ್ನು ಒಳಗಣ ಪ್ರಾಕಾರದ ಮೂಡಲಿಗೆ ಕರತಂದು ಅಲ್ಲಿನ ಹೆಬ್ಬಾಗಿಲನ್ನೂ ಅದರ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಆ ಅಳತೆಗಳೇ ಕಂಡುಬಂದವು;


ಆಮೇಲೆ ಅವನು ನನ್ನನ್ನು ತೆಂಕಣ ಬಾಗಿಲ ಮಾರ್ಗವಾಗಿ ಒಳಗಣ ಪ್ರಾಕಾರಕ್ಕೆ ಕರತಂದನು; ಅವನು ಆ ತೆಂಕಣ ಹೆಬ್ಬಾಗಿಲನ್ನೂ ಅಲ್ಲಿನ ಗೊಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಅಷ್ಟೇ ಅಳತೆಗಳಿದ್ದವು;


[ಹೊರಗಣ ಪ್ರಾಕಾರದ] ಬಡಗಣ ಮೂಡಣ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಪ್ರಾಕಾರಕ್ಕೂ ಹೆಬ್ಬಾಗಿಲುಗಳು ಇದ್ದವು; ಒಂದು ಬಾಗಿಲಿಂದ ಎದುರು ಬಾಗಿಲಿಗೆ ನೂರು ಮೊಳ ಅಳೆದನು.


ಇದಲ್ಲದೆ ಹೊರಗಣ ಪ್ರಾಕಾರದ ಬಡಗಣ ಹೆಬ್ಬಾಗಿಲಿನ ಅಗಲವನ್ನೂ ಉದ್ದವನ್ನೂ ಅಳೆದನು.


ಪ್ರಾಕಾರದಲ್ಲಿನ ನಿಲವುಕಂಬದವರೆಗೆ ನಿಲವುಕಂಬಗಳನ್ನು [ಅಳತೆ] ಮಾಡಲು ಅರುವತ್ತು ಮೊಳವಿದ್ದವು; ಹೆಬ್ಬಾಗಿಲನ್ನು ಸುತ್ತುಮುತ್ತಲು [ಅಳೆದನು].


ಆತನಿಗೆ ಹೊತ್ತ ಹರಕೆಗಳನ್ನು ಆತನ ಎಲ್ಲಾ ಜನರ ಮುಂದೆಯೇ ಸಲ್ಲಿಸುವೆನು. ಯಾಹುವಿಗೆ ಸ್ತೋತ್ರ!


ಕೃತಜ್ಞತಾಸ್ತುತಿಯೊಡನೆ ಆತನ ಮಂದಿರದ್ವಾರಗಳಿಗೂ ಕೀರ್ತನೆಯೊಡನೆ ಆತನ ಅಂಗಳಗಳಿಗೂ ಬನ್ನಿರಿ; ಆತನ ಉಪಕಾರ ಸ್ಮರಿಸಿರಿ; ಆತನ ನಾಮವನ್ನು ಕೊಂಡಾಡಿರಿ.


ಯೆಹೋವನ ಆಲಯದಲ್ಲಿ [ಸಸಿಗಳಂತೆ] ನೆಡಲ್ಪಟ್ಟವರು ನಮ್ಮ ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯುವರು.


ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯ್ದುಕೊಂಡಿರುವದೇ ಲೇಸು.


ಆಲಯದ ಎರಡು ಪ್ರಾಕಾರಗಳಲ್ಲಿಯೂ ಸರ್ವನಕ್ಷತ್ರಮಂಡಲಕ್ಕೋಸ್ಕರ ಯಜ್ಞವೇದಿಗಳನ್ನು ಕಟ್ಟಿಸಿದನು.


ಯೆಹೋವನ ಆಲಯದ ಮುಂದಿರುವ ತಾಮ್ರದ ಯಜ್ಞವೇದಿಯು ಈ ಎಲ್ಲಾ ಸರ್ವಾಂಗಹೋಮದ್ರವ್ಯಗಳನ್ನೂ ಧಾನ್ಯನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಹಿಡಿಯಲಾರದಷ್ಟು ಚಿಕ್ಕದಾಗಿದ್ದದರಿಂದ ಸೊಲೊಮೋನನು ಆ ದಿವಸ ದೇವಾಲಯದ ಮುಂದಿನ ಪ್ರಾಕಾರದ ಮಧ್ಯಸ್ಥಳವನ್ನು ಪ್ರತಿಷ್ಠಿಸಿ ಅಲ್ಲಿ ಇವುಗಳನ್ನೆಲ್ಲಾ ಸಮರ್ಪಿಸಿದನು.


ದೇವಾಲಯದ ಪ್ರಾಕಾರದಲ್ಲಿ ಮೂರು ಸಾಲು ಕಲ್ಲಿನ ಕಂಬಗಳನ್ನೂ ಒಂದು ಸಾಲು ದೇವದಾರುವಿನ ಕಂಬಗಳನ್ನೂ ಇರಿಸಿದನು.


ಅಂಗಳದ ಸುತ್ತಲೂ ಆವರಣವನ್ನು ನಿಲ್ಲಿಸಿ ಅಂಗಳದ ಬಾಗಲಿಗೆ ಪರದೆಯನ್ನು ತೂಗಬಿಡಬೇಕು.


ಅಂಗಳದ ತೆರೆಗಳು, ಕಂಬಗಳು, ಗದ್ದಿಗೇಕಲ್ಲುಗಳು ಇವುಗಳನ್ನೂ; ಅಂಗಳದ ಬಾಗಲಿನ ಪರದೆಯು, ಅದರ ಹಗ್ಗಗಳು, ಗೂಟಗಳು ಇವುಗಳನ್ನೂ; ದೇವದರ್ಶನದ ಗುಡಾರದ ಸೇವೆಗೆ ಬೇಕಾದ ಎಲ್ಲಾ ಉಪಕರಣಗಳನ್ನೂ;


ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿದರು.


ಆ ಕಡೆಯಲ್ಲಿ ಇಪ್ಪತ್ತು ಕಂಬಗಳೂ ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇ ಕಲ್ಲುಗಳೂ ಇರಬೇಕು.


ಅಂಗಳದ ತೆರೆಗಳು, ಕಂಬಗಳು, ಗದ್ದಿಗೇಕಲ್ಲುಗಳು, ಅಂಗಳದ ಬಾಗಲಿನ ಪರದೆ,


ಗುಡಾರಕ್ಕೂ ಯಜ್ಞವೇದಿಗೂ ಸುತ್ತಲು ಅಂಗಳದ ಆವರಣವನ್ನು ಎತ್ತಿ ನಿಲ್ಲಿಸಿ ಅಂಗಳದ ಬಾಗಲಿಗೆ ಪರದೆಯನ್ನು ಹಾಕಿದನು. ಹೀಗೆ ಮೋಶೆ ಆ ಕೆಲಸವನ್ನೆಲ್ಲಾ ಮುಗಿಸಿದನು.


ಗುಡಾರದ ಮತ್ತು ಯಜ್ಞವೇದಿಯ ಸುತ್ತಲಿರುವ ಅಂಗಳದ ತೆರೆಗಳೂ ಅಂಗಳದ ಬಾಗಲಿನ ಪರದೆಯೂ ಇವುಗಳ ಹಗ್ಗಗಳೂ ಇವೇ. ಇವುಗಳ ಸಕಲ ವಿಧವಾದ ಪರಿಚರ್ಯವನ್ನು ಗೇರ್ಷೋನ್ಯರು ಮಾಡಬೇಕು.


ದೇವದರ್ಶನದ ಗುಡಾರದ ಬಾಗಲಿನ ಪರದೆಯು, ಗುಡಾರದ ಮತ್ತು ಯಜ್ಞವೇದಿಯ ಸುತ್ತಣ ಅಂಗಳದ ತೆರೆಗಳು, ಅದರ ಬಾಗಲಿನ ಪರದೆಯು, ಹಗ್ಗಗಳು, ಎಲ್ಲಾ ಉಪಕರಣಗಳು ಇವುಗಳನ್ನು ಹೊರಬೇಕು; ಮತ್ತು ಇವುಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅವರು ಮಾಡಬೇಕು.


ಇವುಗಳ ಗದ್ದಿಗೇಕಲ್ಲುಗಳನ್ನೂ ಗೂಟಗಳನ್ನೂ ಹಗ್ಗಗಳನ್ನೂ ಎಲ್ಲಾ ಉಪಕರಣಗಳನ್ನೂ ಹೊರಬೇಕು; ಇವುಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅವರು ಮಾಡಬೇಕು. ಅವರವರ ಹೊರೆಗಳನ್ನೆಲ್ಲಾ ನೀವು ಹೆಸರು ಹೇಳಿ ಗೊತ್ತುಮಾಡಬೇಕು.


ಇದಲ್ಲದೆ ಯಾಜಕರ ಪ್ರಾಕಾರವನ್ನೂ ಮಹಾಪ್ರಾಕಾರವನ್ನೂ ಮಹಾಪ್ರಾಕಾರಕ್ಕೆ ಬಾಗಲುಗಳನ್ನೂ ಮಾಡಿಸಿದನು; ಅವುಗಳ ಕದಗಳನ್ನು ತಾಮ್ರದ ತಗಡಿನಿಂದ ಹೊದಿಸಿದನು.


ಆಮೇಲೆ ಅವನು ನನ್ನನ್ನು ಹೊರಗಣ ಪ್ರಾಕಾರಕ್ಕೆ ಕರತಂದನು; ಇಗೋ, ಕೋಣೆಗಳೂ ಪ್ರಾಕಾರದ ಸುತ್ತಲು ಹಾಕಿದ ನೆಲಗಟ್ಟೂ ಕಾಣಿಸಿದವು; ಒಟ್ಟಾಗಿ ನೆಲಗಟ್ಟಿನ ಮೇಲೆ ಮೂವತ್ತು ಕೋಣೆಗಳಿದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು