Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 27:3 - ಕನ್ನಡ ಸತ್ಯವೇದವು J.V. (BSI)

3 ಅದರಲ್ಲಿರುವ ಬೂದಿಯನ್ನು ತೆಗೆಯುವದಕ್ಕಾಗಿ ಬಟ್ಟಲುಗಳನ್ನು ಮಾಡಿಸಬೇಕು; ಸಲಿಕೆಗಳನ್ನೂ ಬೋಗುಣಿಗಳನ್ನೂ ಮುಳ್ಳುಗಳನ್ನೂ ಅಗ್ಗಿಷ್ಟಿಗೆಗಳನ್ನೂ ಮಾಡಿಸಬೇಕು. ಆ ಉಪಕರಣಗಳೆಲ್ಲಾ ತಾಮ್ರದವುಗಳಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅದರಲ್ಲಿರುವ ಬೂದಿಯನ್ನು ತೆಗೆಯುವುದಕ್ಕಾಗಿ ತಟ್ಟೆಗಳನ್ನೂ, ಸಲಿಕೆಗಳನ್ನೂ, ಬೋಗುಣಿಗಳನ್ನೂ, ಮುಳ್ಳುಚಮಚಗಳನ್ನೂ, ಹಾಗೂ ಅಗ್ಗಿಷ್ಟಿಕೆಗಳನ್ನೂ ಮಾಡಿಸಬೇಕು. ಆ ಉಪಕರಣಗಳೆಲ್ಲಾ ತಾಮ್ರದವುಗಳಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅದರಲ್ಲಿರುವ ಬೂದಿಯನ್ನು ತೆಗೆಯುವುದಕ್ಕಾಗಿ ಬಟ್ಟಲುಗಳನ್ನು ಮಾಡಿಸಬೇಕು. ಸಲಿಕೆಗಳನ್ನು, ಬೋಗುಣಿಗಳನ್ನು, ಮುಳ್ಳುಗಳನ್ನು ಹಾಗು ಅಗ್ಗಿಷ್ಟಿಕೆಗಳನ್ನು ಕೂಡ ಮಾಡಿಸಬೇಕು. ಈ ಉಪಕರಣಗಳೆಲ್ಲಾ ತಾಮ್ರದವುಗಳಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 “ಯಜ್ಞವೇದಿಕೆಯ ಉಪಕರಣಗಳನ್ನೆಲ್ಲಾ ತಾಮ್ರದಿಂದ ಮಾಡಿಸಬೇಕು. ಬಟ್ಟಲುಗಳನ್ನು, ಸಲಿಕೆಗಳನ್ನು, ಬೋಗುಣಿಗಳನ್ನು, ಮುಳ್ಳುಗಳನ್ನು ಮತ್ತು ಅಗ್ಗಿಷ್ಟಿಕೆಗಳನ್ನು ಮಾಡಿಸಬೇಕು. ಇವುಗಳನ್ನು ಯಜ್ಞವೇದಿಕೆಯಿಂದ ಬೂದಿಯನ್ನು ತೆಗೆದು ಶುಚಿಗೊಳಿಸುವುದಕ್ಕೆ ಉಪಯೋಗಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅದರ ಬೂದಿಯನ್ನು ತೆಗೆಯುವದಕ್ಕಾಗಿ ಬಟ್ಟಲುಗಳು, ಸಲಿಕೆಗಳು, ಮುಳ್ಳುಚಮಚಗಳು, ಬೋಗುಣಿಗಳು, ಅಗ್ಗಿಷ್ಟಿಕೆಗಳು ಮತ್ತು ಬಲಿಪೀಠದ ಉಪಕರಣಗಳನ್ನೆಲ್ಲಾ ಕಂಚಿನಿಂದ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 27:3
17 ತಿಳಿವುಗಳ ಹೋಲಿಕೆ  

ಹೀರಾಮನು ಅರಸನಾದ ಸೊಲೊಮೋನನ ಅಪ್ಪಣೆಯಂತೆ ಯೆಹೋವನ ಆಲಯಕ್ಕೋಸ್ಕರ ಈ ಎಲ್ಲಾ ಸಾಮಾನುಗಳನ್ನು ಒಪ್ಪ ಹಾಕಿದ ತಾಮ್ರದಿಂದ ಮಾಡಿದನು.


ಹೂರಾಮಾಬೀವನು ಅರಸನಾದ ಸೊಲೊಮೋನನ ಅಪ್ಪಣೆಯ ಮೇರೆಗೆ ಯೆಹೋವನ ಆಲಯಕ್ಕೋಸ್ಕರ ಅದರ ಎಲ್ಲಾ ಸಾಮಾನುಗಳನ್ನು ಒಪ್ಪಹಾಕಿದ ತಾಮ್ರದಿಂದ ಮಾಡಿ ತೀರಿಸಿದನು.


ಇದಲ್ಲದೆ ಹೂರಾಮನು ಹಂಡೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೂರಾಮನು ಸೊಲೊಮೋನನ ಅಪ್ಪಣೆಯಂತೆ ದೇವಾಲಯಕ್ಕೋಸ್ಕರ ಮಾಡಿದ ಸಾಮಾನುಗಳು ಯಾವವಂದರೆ -


ಚೊಕ್ಕ ಬಂಗಾರದ ಮುಳ್ಳು ಬೋಗುಣಿ ಹೂಜೆಗಳ ಮತ್ತು ಬೆಳ್ಳಿಬಂಗಾರದ ಆಯಾ ಪಾತ್ರೆಗಳ ತೂಕ,


ಕಾವಲುದಂಡಿನ ಅಧಿಪತಿಯು ಬೆಳ್ಳಿಬಂಗಾರದ ಅಗ್ಗಿಷ್ಟಿಗೆ ಬಟ್ಟಲು ಮೊದಲಾದವುಗಳನ್ನು ತೆಗೆದುಕೊಂಡನು.


ಇದಲ್ಲದೆ ಹೀರಾಮನು ಬಟ್ಟಲುಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಅವನು ಸೊಲೊಮೋನನ ಅಪ್ಪಣೆಯಂತೆ ದೇವಾಲಯಕ್ಕೋಸ್ಕರ ಮಾಡಿದ ಒಟ್ಟು ಸಾಮಾನುಗಳು ಯಾವವಂದರೆ -


ಅದಕ್ಕೆ ಸಂಬಂಧಪಟ್ಟ ಅಗ್ಗಿಷ್ಟಿಗೆಗಳು, ಮುಳ್ಳುಗಳು, ಸಲಿಕೆಗಳು, ಬೋಗುಣಿಗಳು ಮುಂತಾದ ಉಪಕರಣಗಳನ್ನೆಲ್ಲಾ ಮೇಲೆ ಇಟ್ಟು ಕಡಲುಹಂದಿಯ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಹಾಕಬೇಕು.


ಅವನು ತನಗೋಸ್ಕರವಾದ ಹೋರಿಯನ್ನು ವಧಿಸಿದ ಮೇಲೆ ಯೆಹೋವನ ಸನ್ನಿಧಿಯಲ್ಲಿರುವ ವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ ಪರಿಮಳಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ತೆರೆಯನ್ನು ದಾಟಿ


ವೇದಿಯ ಉಪಕರಣಗಳನ್ನೆಲ್ಲಾ ಅಂದರೆ ಅದರ ಬಟ್ಟಲುಗಳು, ಸಲಿಕೆಗಳು, ಬೋಗುಣಿಗಳು, ಮುಳ್ಳುಗಳು, ಅಗ್ಗಿಷ್ಟಿಗೆಗಳು ಇವುಗಳನ್ನೆಲ್ಲಾ ತಾಮ್ರದಿಂದ ಮಾಡಿದನು.


ಆಗ ಮೋಶೆ ಆ ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬಟ್ಟಲುಗಳಲ್ಲಿ ತುಂಬಿ ಅರ್ಧವನ್ನು ಯಜ್ಞವೇದಿಯ ಮೇಲೆ ಪ್ರೋಕ್ಷಿಸಿದನು.


ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿಸಬೇಕು; ಅವು ಯಜ್ಞವೇದಿಗೆ ಏಕವಾಗಿರಬೇಕು. ಆ ವೇದಿಗೆ ತಾಮ್ರದ ತಗಡುಗಳನ್ನು ಹೊದಿಸಬೇಕು.


ವೇದಿಗೆ ಹೆಣಿಗೇ ಕೆಲಸದಿಂದ ತಾಮ್ರದ ಜಾಳಿಗೆಯನ್ನು ಮಾಡಿಸಬೇಕು. ಆ ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ತಾಮ್ರದ ಬಳೆಗಳನ್ನು ಹಾಕಿಸಬೇಕು.


ಚೊಕ್ಕ ಬಂಗಾರದ ಬಟ್ಟಲುಗಳು, ಕತ್ತರಿಗಳು, ಬೋಗುಣಿಗಳು, ಧೂಪಾರತಿಗಳು, ಅಗ್ಗಿಷ್ಟಿಗೆಗಳು, ದೇವಾಲಯದ ಮಹಾಪರಿಶುದ್ಧ ಸ್ಥಳವೆನಿಸಿಕೊಳ್ಳುವ ಗರ್ಭಗೃಹದ ಕದಗಳಿಗೂ ಪರಿಶುದ್ಧಸ್ಥಳದ ಕದಗಳಿಗೂ ಇರುವ ಬಂಗಾರದ ತಿರುಗಣಿಗಳು ಇವೇ.


ಅವುಗಳ ತಾಮ್ರವನ್ನೂ ದೇವಾಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ ಸಲಿಕೆ ಕತ್ತರಿ ಧೂಪಾರತಿ ಮೊದಲಾದ ತಾಮ್ರದ ಸಾಮಾನುಗಳನ್ನೂ ಬಾಬೆಲಿಗೆ ತೆಗೆದುಕೊಂಡು ಹೋದರು.


ಗುಡಾರದ ಸಕಲವಿಧವಾದ ಕೆಲಸಕ್ಕೆ ಬೇಕಾದ ಉಪಕರಣಗಳೂ ಗುಡಾರದ ಗೂಟಗಳೂ ಅಂಗಳದ ಗೂಟಗಳೂ ತಾಮ್ರದವುಗಳಾಗಿರಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು