ವಿಮೋಚನಕಾಂಡ 23:27 - ಕನ್ನಡ ಸತ್ಯವೇದವು J.V. (BSI)27 ನೀವು ಹೋಗುವ ಎಲ್ಲಾ ಕಡೆಯಲ್ಲಿಯೂ ನಾನು ಜನಗಳ ಮನಸ್ಸಿನಲ್ಲಿ ಹೆದರಿಕೆಯನ್ನು ಹುಟ್ಟಿಸಿ ಕಳವಳವನ್ನು ಉಂಟು ಮಾಡಿ ನಿಮ್ಮನ್ನು ವಿರೋಧಿಸುವವರನ್ನು ಓಡಿಹೋಗುವಂತೆ ಮಾಡುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ನೀವು ಹೋಗುವ ಎಲ್ಲಾ ಕಡೆಗಳಲ್ಲಿಯೂ ನಾನು ಜನಗಳ ಮನಸ್ಸಿನಲ್ಲಿ ಹೆದರಿಕೆಯನ್ನುಂಟು ಮಾಡಿ ಅವರನ್ನು ಕಳವಳಗೊಳಿಸಿ, ನಿಮ್ಮ ವಿರೋಧಿಗಳೆಲ್ಲರೂ ಓಡಿಹೋಗುವಂತೆ ಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ನೀವು ಹೋಗುವ ಎಲ್ಲ ಕಡೆಯಲ್ಲಿಯೂ ನಾನು ಜನಗಳ ಮನಸ್ಸಿನಲ್ಲಿ ಹೆದರಿಕೆಯನ್ನು ಹುಟ್ಟಿಸಿ, ಕಳವಳವನ್ನು ಉಂಟುಮಾಡಿ, ನಿಮ್ಮನ್ನು ವಿರೋಧಿಸುವವರು ಓಡಿಹೋಗುವಂತೆ ಮಾಡುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 “ನೀವು ನಿಮ್ಮ ವೈರಿಗಳ ವಿರುದ್ಧ ಯುದ್ಧ ಮಾಡುವಾಗ, ನಿಮ್ಮ ವೈರಿಗಳನ್ನೆಲ್ಲಾ ಸೋಲಿಸುವಂತೆ ನಾನು ನಿಮಗೆ ನನ್ನ ಮಹಾಶಕ್ತಿಯಿಂದ ಸಹಾಯ ಮಾಡುವೆನು. ನಿಮ್ಮ ವೈರಿಗಳು ಯುದ್ಧದಲ್ಲಿ ಭಯದಿಂದಲೂ ಗಲಿಬಿಲಿಯಿಂದಲೂ ಓಡಿಹೋಗುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ27 “ನೀವು ಹೋಗುವ ಎಲ್ಲ ಜಾಗಗಳಲ್ಲಿಯೂ ನನ್ನ ಮೇಲಿನ ಭೀತಿಯನ್ನು ನಿಮ್ಮನ್ನು ಎದುರಿಸುವ ಜನರಲ್ಲಿ ಉಂಟುಮಾಡಿಸಿ, ಕಳವಳವನ್ನು ಉಂಟುಮಾಡುವೆನು ಮತ್ತು ನಿಮ್ಮನ್ನು ವಿರೋಧಿಸುವವರೆಲ್ಲಾ ನಿಮಗೆ ಬೆನ್ನು ತೋರಿಸುವಂತೆ ಮಾಡುವೆನು. ಅಧ್ಯಾಯವನ್ನು ನೋಡಿ |