ವಿಮೋಚನಕಾಂಡ 19:23 - ಕನ್ನಡ ಸತ್ಯವೇದವು J.V. (BSI)23 ಅದಕ್ಕೆ ಮೋಶೆ - ಸೀನಾಯಿಬೆಟ್ಟವನ್ನೇರುವದಕ್ಕೆ ಜನರಿಂದಾಗದು; ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿ ನಿನಗಾಗಿ ಪ್ರತ್ಯೇಕಿಸಲಿಕ್ಕೆ ನೀನು ಆಜ್ಞಾಪಿಸಿದಿಯಲ್ಲಾ ಅಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201923 ಅದಕ್ಕೆ ಮೋಶೆ ಯೆಹೋವನಿಗೆ, “ಜನರು ಸೀನಾಯಿ ಬೆಟ್ಟವನ್ನೇರುವುದಕ್ಕೆ ಆಗುವುದಿಲ್ಲ. ಯಾಕೆಂದರೆ ‘ಬೆಟ್ಟದ ಸುತ್ತಲೂ ಗಡಿಯನ್ನು ಹಾಕಿ ನಿನಗಾಗಿ ಶುದ್ಧಮಾಡು’” ಎಂದು ಆಜ್ಞಾಪಿಸಿರುವೆಯಲ್ಲಾ ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)23 ಅದಕ್ಕೆ ಮೋಶೆ, “ಸೀನಾಯಿ ಬೆಟ್ಟವನ್ನೇರುವುದಕ್ಕೆ ಜನರಿಂದಾಗದು. ನೀವು ಆಜ್ಞಾಪಿಸಿದಂತೆ ನಿಮಗಾಗಿ ಪ್ರತ್ಯೇಕಿಸಿಡಲು ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿಸಿದ್ದೇನೆ,” ಎಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್23 ಮೋಶೆಯು ಯೆಹೋವನಿಗೆ, “ಜನರು ಬೆಟ್ಟವನ್ನೇರಿ ಬರಲಾರರು. ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿ ಅದನ್ನು ಪವಿತ್ರ ಸ್ಧಳವನ್ನಾಗಿ ಪ್ರತ್ಯೇಕಿಸಬೇಕೆಂದು ನೀನೇ ನಮಗೆ ಎಚ್ಚರಿಕೆ ನೀಡಿದೆಯಲ್ಲಾ!” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ23 ಮೋಶೆಯು ಯೆಹೋವ ದೇವರಿಗೆ, “ಜನರು ಸೀನಾಯಿ ಬೆಟ್ಟವನ್ನು ಏರಲಾರರು. ಬೆಟ್ಟಕ್ಕೆ ಮೇರೆಗಳನ್ನು ಹಾಕಿ ಅದನ್ನು ಶುದ್ಧಮಾಡೆಂದು ನೀವೇ ನಮ್ಮನ್ನು ಎಚ್ಚರಿಸಿದ್ದೀರಿ,” ಎಂದನು. ಅಧ್ಯಾಯವನ್ನು ನೋಡಿ |