Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 19:20 - ಕನ್ನಡ ಸತ್ಯವೇದವು J.V. (BSI)

20 ಯೆಹೋವನು ಸೀನಾಯಿಬೆಟ್ಟದ ಶಿಖರಕ್ಕೆ ಇಳಿದು ಬಂದನು. ಆತನು - ಬೆಟ್ಟದ ತುದಿಗೆ ಬಾ ಎಂದು ಮೋಶೆಯನ್ನು ಕರೆಯಲು ಅವನು ಬೆಟ್ಟವನ್ನೇರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಯೆಹೋವನು ಸೀನಾಯಿ ಬೆಟ್ಟದ ಶಿಖರಕ್ಕೆ ಇಳಿದು ಬಂದನು. ಆತನು ಬೆಟ್ಟದ ತುದಿಗೆ ಬಾ ಎಂದು ಮೋಶೆಯನ್ನು ಕರೆಯಲು ಅವನು ಬೆಟ್ಟವನ್ನೇರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಸರ್ವೇಶ್ವರ ಸೀನಾಯಿ ಬೆಟ್ಟದ ಶಿಖರಕ್ಕೆ ಇಳಿದು ಬಂದರು. ಅವರು, “ಬೆಟ್ಟದ ತುದಿಗೆ ಬಾ,” ಎಂದು ಮೋಶೆಯನ್ನು ಕರೆಯಲು ಅವನು ಬೆಟ್ಟವನ್ನೇರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಯೆಹೋವನು ಸೀನಾಯಿ ಬೆಟ್ಟಕ್ಕೆ ಇಳಿದುಬಂದನು. ಬಳಿಕ ಯೆಹೋವನು ಮೋಶೆಯನ್ನು ಕರೆದು ಬೆಟ್ಟದ ತುದಿಗೆ ಬರಲು ಹೇಳಿದನು. ಆದ್ದರಿಂದ ಮೋಶೆ ಮೇಲಕ್ಕೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಯೆಹೋವ ದೇವರು ಸೀನಾಯಿ ಬೆಟ್ಟದ ತುದಿಯಲ್ಲಿ ಇಳಿದುಬಂದು ಮೋಶೆಯನ್ನು ಬೆಟ್ಟದ ತುದಿಗೆ ಕರೆದರು. ಮೋಶೆಯು ಮೇಲೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 19:20
12 ತಿಳಿವುಗಳ ಹೋಲಿಕೆ  

ಸೀನಾಯಿ ಬೆಟ್ಟದ ಮೇಲೆ ಇಳಿದು ಬಂದು ಆಕಾಶದ ಕಡೆಯಿಂದ ಅವರೊಡನೆ ಮಾತಾಡಿ ಅವರಿಗೆ ನೀತಿನಿಯಮಗಳನ್ನೂ ಯಥಾರ್ಥ ಧರ್ಮೋಪದೇಶವನ್ನೂ ಶ್ರೇಷ್ಠವಾದ ಆಜ್ಞಾವಿಧಿಗಳನ್ನೂ ಅನುಗ್ರಹಿಸಿದಿ.


ಕಷ್ಟದಲ್ಲಿ ಮೊರೆಯಿಟ್ಟ ನಿನ್ನನ್ನು ವಿಮೋಚಿಸಿದೆನು; ಗುಡುಗುವ ಮೋಡದಲ್ಲಿದ್ದು ನಿನಗೆ ಉತ್ತರವನ್ನು ಕೊಟ್ಟೆನು; ಮೆರೀಬಾ ಪ್ರವಾಹಗಳ ಬಳಿಯಲ್ಲಿ ನಿನ್ನನ್ನು ಪರೀಕ್ಷಿಸಿದೆನು. ಸೆಲಾ.


ಆದಕಾರಣ ಮೋಶೆ ಮೊದಲಿದ್ದ ಹಲಿಗೆಗಳಂತೆ ಎರಡು ಕಲ್ಲಿನ ಹಲಿಗೆಗಳನ್ನು ಸಿದ್ಧಪಡಿಸಿಕೊಂಡು ಯೆಹೋವನ ಅಪ್ಪಣೆಯ ಮೇರೆಗೆ ಬೆಳಿಗ್ಗೆ ಎದ್ದು ಆ ಎರಡು ಕಲ್ಲಿನ ಹಲಿಗೆಗಳನ್ನು ಕೈಯಲ್ಲಿ ತೆಗೆದುಕೊಂಡು ಸೀನಾಯಿಬೆಟ್ಟವನ್ನು ಹತ್ತಿದನು.


ಬೆಳಿಗ್ಗೆ ನೀನು ಸಿದ್ಧವಾಗಿದ್ದು ಸೀನಾಯಿ ಬೆಟ್ಟವನ್ನು ಹತ್ತಿ ಅಲ್ಲಿ ಬೆಟ್ಟದ ತುದಿಯ ಮೇಲೆ ನನ್ನ ಸನ್ನಿಧಿಯಲ್ಲಿ ನಿಂತಿರಬೇಕು.


ಮೋಶೆ ಆ ಮೇಘದೊಳಗೆ ಪ್ರವೇಶಿಸಿ ಬೆಟ್ಟವನ್ನೇರಿದನು. ಅವನು ಆ ಬೆಟ್ಟದಲ್ಲಿ ಹಗಲಿರುಳು ನಾಲ್ವತ್ತು ದಿವಸ ಇದ್ದನು.


ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಂಡು ಮೂರನೆಯ ದಿನದಲ್ಲಿ ಸಿದ್ಧರಾಗಿರಬೇಕು. ಮೂರನೆಯ ದಿನದಲ್ಲಿ ಯೆಹೋವನು ಸಮಸ್ತಜನರಿಗೂ ಪ್ರತ್ಯಕ್ಷನಾಗಿ ಸೀನಾಯಿ ಬೆಟ್ಟದ ಮೇಲಕ್ಕೆ ಇಳಿದುಬರುವನು.


ಮೋಶೆ ಬೆಟ್ಟವನ್ನೇರಿ ದೇವರ ಸನ್ನಿಧಿಗೆ ಹೋದಾಗ ಯೆಹೋವನು ಅವನಿಗೆ ಬೆಟ್ಟದ ಮೇಲಿನಿಂದ ಕೂಗಿ - ನೀನು ಯಾಕೋಬನ ಮನೆತನದವರಾದ ಇಸ್ರಾಯೇಲ್ಯರಿಗೆ ಈ ಮಾತುಗಳನ್ನು ಹೇಳಬೇಕು;


ಯೆಹೋವನು ನಿಮ್ಮ ಸಂಗಡ ಮಾಡಿದ ನಿಬಂಧನೆಯನ್ನು ಬರೆದ ಆ ಕಲ್ಲಿನ ಹಲಿಗೆಗಳನ್ನು ತೆಗೆದುಕೊಳ್ಳುವದಕ್ಕೆ ನಾನು ಬೆಟ್ಟವನ್ನು ಹತ್ತಿದ್ದಾಗ ನಾನು ಅನ್ನಪಾನಗಳನ್ನು ಬಿಟ್ಟು ಹಗಲಿರುಳು ನಾಲ್ವತ್ತು ದಿನ ಆ ಬೆಟ್ಟದಲ್ಲಿದ್ದೆನು.


ಯೆಹೋವನು ಸೀನಾಯಿಬೆಟ್ಟದಿಂದ ಬಂದು ಸೇಯೀರ್ ಎಂಬ ಬೆಟ್ಟದ ಸೀಮೆಯೊಳಗಿಂದ ಪ್ರಕಾಶಿಸಿ ಪಾರಾನ್ ಪರ್ವತದಿಂದ ಹೊಳೆದು ಲಕ್ಷಾಂತರ ಪರಿಶುದ್ಧದೂತರ ಮಧ್ಯದಿಂದ ಅವರಿಗೋಸ್ಕರ ದಯಮಾಡಿದನು; ಆತನ ಬಲಪಾರ್ಶ್ವದಲ್ಲಿ ಅಗ್ನಿಸದೃಶವಾದ ಧರ್ಮಶಾಸ್ತ್ರವಿತ್ತು.


ಆಗ ತಿರಿಗಿ - ನೀನು ಹೊರಗೆ ಬಂದು ಬೆಟ್ಟದ ಮೇಲೆ ಯೆಹೋವನ ಮುಂದೆ ನಿಲ್ಲು ಎಂಬ ವಾಣಿಯಾಯಿತು. ಆಹಾ, ಯೆಹೋವನು ಅಲ್ಲಿ ಹಾದುಹೋದನು. ಆತನ ಮುಂದೆ ಪರ್ವತಗಳನ್ನು ಭೇದಿಸಿ ಬಂಡೆಗಳನ್ನು ಪುಡಿಪುಡಿಮಾಡುವಂಥ ದೊಡ್ಡ ಬಿರುಗಾಳಿಯು ಬೀಸಿತು; ಯೆಹೋವನು ಅದರಲ್ಲಿ ಇರಲಿಲ್ಲ. ತರುವಾಯ ಭೂಕಂಪವುಂಟಾಯಿತು; ಅದರಲ್ಲಿಯೂ ಆತನಿರಲಿಲ್ಲ.


ಮೋಶೆ ಬೆಟ್ಟವನ್ನು ಹತ್ತಿದಾಗ ಮೇಘವು ಅದನ್ನು ಮುಚ್ಚಿಕೊಂಡಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು