ವಿಮೋಚನಕಾಂಡ 18:21 - ಕನ್ನಡ ಸತ್ಯವೇದವು J.V. (BSI)21 ಆದರೆ ನೀನು ಸಮಸ್ತ ಜನರೊಳಗೆ ಸಮರ್ಥರೂ ದೇವಭಕ್ತರೂ ನಂಬಿಗಸ್ತರೂ ಲಂಚಮುಟ್ಟದವರೂ ಆಗಿರುವ ಪುರುಷರನ್ನು ಆರಿಸಿಕೊಂಡು ಅವರನ್ನು ಸಾವಿರ ಮಂದಿಯ ಮೇಲೆಯೂ ನೂರು ಮಂದಿಯ ಮೇಲೆಯೂ ಐವತ್ತು ಮಂದಿಯ ಮೇಲೆಯೂ ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇವಿುಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಆದರೆ ನೀನು ಸಮಸ್ತ ಜನರೊಳಗೆ ಸಮರ್ಥರೂ, ಭಕ್ತರೂ, ನಂಬಿಗಸ್ತರೂ, ಲಂಚಮುಟ್ಟದವರೂ ಆಗಿರುವ ಪುರುಷರನ್ನು ಆರಿಸಿಕೊಂಡು ಅವರನ್ನು ಸಾವಿರ ಮಂದಿಯ ಮೇಲೆಯೂ, ನೂರು ಮಂದಿಯ ಮೇಲೆಯೂ, ಐವತ್ತು ಮಂದಿಯ ಮೇಲೆಯೂ, ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಆದರೆ ನೀನು ಈ ಜನರಲ್ಲೆಲ್ಲಾ ಸಮರ್ಥರು, ದೇವಭಕ್ತರು, ನಂಬಿಗಸ್ಥರು ಹಾಗು ಲಂಚ ಮುಟ್ಟದವರು ಆಗಿರುವ ವ್ಯಕ್ತಿಗಳನ್ನು ಆರಿಸಿಕೊ. ಅಂಥವರನ್ನು ಸಾವಿರ, ನೂರು, ಐವತ್ತು ಹಾಗು ಹತ್ತು ಮಂದಿಗಳ ಅಧಿಪತಿಗಳನ್ನಾಗಿ ನೇಮಿಸು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಆದರೆ ನೀನು ಜನರೊಳಗೆ ದೇವಭಕ್ತರೂ ಲಂಚಮುಟ್ಟದವರೂ ಆಗಿರುವವರನ್ನು ಆರಿಸಿಕೊಳ್ಳಬೇಕು. ಅವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯಪಡುವವರೂ, ಸತ್ಯವಂತರೂ, ದುರಾಶೆಯನ್ನು ಹಗೆಮಾಡುವವರೂ ಆಗಿರುವವರನ್ನು ಸಾವಿರ ಮಂದಿಯ ಮೇಲೆಯೂ, ನೂರು ಮಂದಿಯ ಮೇಲೆಯೂ, ಐವತ್ತು ಮಂದಿಯ ಮೇಲೆಯೂ, ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸು. ಅಧ್ಯಾಯವನ್ನು ನೋಡಿ |