ವಿಮೋಚನಕಾಂಡ 15:11 - ಕನ್ನಡ ಸತ್ಯವೇದವು J.V. (BSI)11 ಯೆಹೋವನೇ, ದೇವರುಗಳಲ್ಲಿ ನಿನ್ನ ಸಮಾನನು ಯಾವನು? ಪರಿಶುದ್ಧತ್ವದಿಂದ ಸರ್ವೋತ್ತಮನೂ ಪ್ರಖ್ಯಾತ ಕೃತ್ಯಗಳನ್ನು ಮಾಡಿರುವದರಿಂದ ಭಯಂಕರನೂ ಅದ್ಭುತಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನನು ಎಲ್ಲಿ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು? ನಿನ್ನ ಹಾಗೆ ಪರಿಶುದ್ಧತ್ವದಲ್ಲಿ ಸರ್ವೋತ್ತಮನು ಮಹಿಮೆ ಹೊಂದಿದವನು, ಭಯಂಕರನೂ, ಅದ್ಭುತ ಕೃತ್ಯಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನರು ಯಾರಿದ್ದಾರೆ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಹೇ ಸರ್ವೇಶ್ವರಾ, ದೇವರುಗಳಲ್ಲಿ ನಿನಗಾರು ಸಮಾನನು? ಎಲ್ಲಿ ನಿನ್ನಂತೆ ಪವಿತ್ರತೆಯಲ್ಲಿ ಸರ್ವೋತ್ತಮನು? ಪ್ರಖ್ಯಾತ ಕಾರ್ಯವೆಸಗುವುದರಲ್ಲಿ ನಿನ್ನಂತೆ ಭಯಂಕರನು? ಅದ್ಭುತಗಳ ನಡೆಸುವುದರಲ್ಲಿ ನಿನ್ನ ಹೋಲುವವನು? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 “ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು? ಪರಿಶುದ್ಧತೆಯಲ್ಲಿ ನೀನೇ ಸರ್ವೋತ್ತಮನು. ಭಯಂಕರ ಕಾರ್ಯಗಳನ್ನು ಮಾಡಿ ಪ್ರಖ್ಯಾತಿಹೊಂದಿದವನೂ ನೀನೇ. ಅದ್ಭುತಕಾರ್ಯಗಳನ್ನು ಮಾಡುವಾತನೂ ನೀನೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಯೆಹೋವ ದೇವರೇ, ನಿಮ್ಮ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ವೈಭವ ಹೊಂದಿದವರೂ, ಮಹಿಮೆಯಲ್ಲಿ ಅತಿಶಯರೂ, ಅದ್ಭುತಗಳನ್ನು ಮಾಡುವವರೂ ಆದ ನಿಮ್ಮ ಹಾಗೆ ಯಾರಿದ್ದಾರೆ? ಅಧ್ಯಾಯವನ್ನು ನೋಡಿ |
ಆಹಾ, ಒಬ್ಬನು ಸಿಂಹದೋಪಾದಿಯಲ್ಲಿ ಯೊರ್ದನಿನ ದಟ್ಟಡವಿಯಿಂದ [ಎದೋಮ್ಯರಿಗೆ] ನಿತ್ಯನೆಲೆಯಾದ ಗೋಮಾಳಕ್ಕೆ ಏರಿಬರುವನು; ಕ್ಷಣಮಾತ್ರದಲ್ಲಿ ನಾನು ಅವರನ್ನು ಅಲ್ಲಿಂದ ಓಡಿಸಿಬಿಡುವೆನು; ನಾನು ಆರಿಸಿಕೊಂಡವನನ್ನೇ ಅದನ್ನು ಕಾಯುವದಕ್ಕೆ ನೇವಿುಸುವೆನು; ನನ್ನ ಸಮಾನನು ಯಾವನು? ನನ್ನನ್ನು ನ್ಯಾಯವಿಚಾರಣೆಗೆ ಯಾವನು ಕರೆದಾನು? ಮಂದೆಯನ್ನು ಕಾಯುವ ಯಾವನು ನನ್ನೆದುರಿಗೆ ನಿಲ್ಲಬಲ್ಲನು?