Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 10:5 - ಕನ್ನಡ ಸತ್ಯವೇದವು J.V. (BSI)

5 ಅವು ಭೂವಿುಯನ್ನೆಲ್ಲಾ ಮುಚ್ಚಿಕೊಳ್ಳುವವು; ನೆಲವೇ ಕಾಣಿಸದೆ ಹೋಗುವದು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದದ್ದೆಲ್ಲವನ್ನು ವಿುಡಿತೆಗಳು ತಿಂದುಬಿಡುವವು; ಹೊಲದಲ್ಲಿರುವ ನಿಮ್ಮ ಎಲ್ಲಾ ಮರಗಳ ಎಲೆಚಿಗುರುಗಳನ್ನೂ ತಿಂದು ಬಿಡುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅವು ಭೂಮಿಯನ್ನೆಲ್ಲಾ ಆವರಿಸಿಕೊಳ್ಳುವವು. ನೆಲವೇ ಕಾಣಿಸದೆ ಹೋಗುವುದು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದೆಲ್ಲವನ್ನು ಮಿಡತೆಗಳು ತಿಂದುಬಿಡುವವು. ಹೊಲದಲ್ಲಿರುವ ನಿಮ್ಮ ಎಲ್ಲಾ ಮರಗಳ ಎಲೆ ಚಿಗುರುಗಳನ್ನೂ ತಿಂದುಬಿಡುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ನೆಲ ಕರ್ರಗೆ ಕಾಣಿಸುವಷ್ಟು ಅವು ಭೂಮಿಯನ್ನೆಲ್ಲಾ ಆವರಿಸಿಕೊಳ್ಳುವುವು; ಆನೆಕಲ್ಲಿನ ಮಳೆಯಿಂದ ನಾಶ ಆಗದೆ ಉಳಿದದ್ದೆಲ್ಲವನ್ನು ಮಿಡತೆಗಳು ತಿಂದುಬಿಡುವವು. ಹೊಲದಲ್ಲಿರುವ ನಿಮ್ಮ ಎಲ್ಲ ಮರಗಳ ಎಲೆಚಿಗುರುಗಳನ್ನು ತಿಂದುಬಿಡುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಮಿಡತೆಗಳು ಬಂದು ಭೂಮಿಯನ್ನು ಮುಚ್ಚಿಕೊಳ್ಳುವವು; ನೆಲವೇ ಕಾಣಿಸದೆ ಹೋಗುವುದು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವುದನ್ನು ಮಿಡತೆಗಳು ತಿಂದುಬಿಡುತ್ತವೆ; ಹೊಲದಲ್ಲಿರುವ ಎಲ್ಲಾ ಮರಗಳ ಎಲೆಗಳನ್ನು ತಿಂದುಬಿಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಒಬ್ಬನು ಭೂಮಿಯನ್ನು ಕಾಣುವುದಕ್ಕಾಗದಷ್ಟು ಅವು ಭೂಮಿಯನ್ನೆಲ್ಲಾ ಮುಚ್ಚಿಕೊಳ್ಳುವುವು. ಇದಲ್ಲದೆ ಅವು ಆಲಿಕಲ್ಲಿನ ಮಳೆಯಿಂದ ಹಾಳಾಗದೆ ನಿಮಗಾಗಿ ಉಳಿದಿರುವುದೆಲ್ಲವನ್ನೂ, ಹೊಲಗಳಲ್ಲಿ ಚಿಗುರಿರುವ ಪ್ರತಿಯೊಂದು ಮರವನ್ನೂ ತಿಂದುಬಿಡುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 10:5
7 ತಿಳಿವುಗಳ ಹೋಲಿಕೆ  

ಚೂರಿವಿುಡತೆ ತಿಂದು ವಿುಕ್ಕದ್ದನ್ನು ಗುಂಪುವಿುಡತೆ ತಿಂದುಬಿಟ್ಟಿತು; ಗುಂಪುವಿುಡತೆ ತಿಂದು ವಿುಕ್ಕದ್ದನ್ನು ಸಣ್ಣವಿುಡತೆ ತಿಂದುಬಿಟ್ಟಿತು; ಸಣ್ಣವಿುಡತೆ ತಿಂದು ವಿುಕ್ಕದ್ದನ್ನು ದೊಡ್ಡವಿುಡತೆ ತಿಂದುಬಿಟ್ಟಿತು.


ಗೋದಿಯೂ ಕಡಲೆಯೂ ಹಿಂದಿನ ಬೆಳೆಯಾದದರಿಂದ ಅದಕ್ಕೆ ನಷ್ಟವಾಗಲಿಲ್ಲ.


ಗುಂಪುವಿುಡತೆ, ಸಣ್ಣವಿುಡತೆ, ದೊಡ್ಡವಿುಡತೆ, ಚೂರಿವಿುಡತೆ, ಅಂತು ನಾನು ನಿಮ್ಮ ಮೇಲೆ ಕಳುಹಿಸಿದ ನನ್ನ ದೊಡ್ಡ ದಂಡು ತಿಂದುಬಿಟ್ಟ ವರುಷಗಳನ್ನು ನಾನು ನಿಮಗೆ ಕಟ್ಟಿಕೊಡುವೆನು.


ಅಪ್ಪಣೆ ಕೊಡದೆ ಹೋದರೆ ನಾಳೆ ನಿನ್ನ ರಾಜ್ಯದೊಳಕ್ಕೆ ವಿುಡಿತೆಗಳನ್ನು ಬರಮಾಡುವೆನು.


ಆಗ ಯೆಹೋವನು ಮೋಶೆಗೆ - ಐಗುಪ್ತದೇಶದ ಮೇಲೆ ನಿನ್ನ ಕೈಚಾಚಿ ವಿುಡಿತೆಗಳನ್ನು ಬರಮಾಡು; ಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವ ಪೈರುಗಳನ್ನೆಲ್ಲಾ ವಿುಡಿತೆಗಳು ತಿಂದುಬಿಡಲಿ ಎಂದು ಹೇಳಿದನು.


ಅವು ಭೂವಿುಯನ್ನೆಲ್ಲಾ ಮುಚ್ಚಿಕೊಂಡದ್ದರಿಂದ ನೆಲವು ಕಾಣದೆಹೋಯಿತು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದ ಎಲ್ಲಾ ಪೈರುಗಳನ್ನೂ ಮರಗಳಲ್ಲಿದ್ದ ಎಲ್ಲಾ ಕಾಯಿಗಳನ್ನೂ ತಿಂದುಬಿಟ್ಟವು. ಐಗುಪ್ತ ದೇಶದಲ್ಲೆಲ್ಲಾ ಮರಗಳಲ್ಲಾಗಲಿ ಅಡವಿಯ ಗಿಡಗಳಲ್ಲಾಗಲಿ ಹಸುರಾದದ್ದು ಒಂದೂ ಉಳಿಯಲಿಲ್ಲ.


ಅದರ ಮುಂಗಡೆ ಬೆಂಕಿಯು ನುಂಗಿಕೊಂಡು ಬರುತ್ತದೆ, ಹಿಂಗಡೆ ಜ್ವಾಲೆಯು ಧಗಧಗಿಸುತ್ತದೆ; ಅದು ಬರುವದಕ್ಕೆ ಮುಂಚೆ ದೇಶವು ಏದೆನ್ ಉದ್ಯಾನದಂತೆ ಕಂಗೊಳಿಸುತ್ತದೆ; ದಾಟಿಹೋದ ಮೇಲೆ ಬೆಗ್ಗಾಡಾಗಿದೆ; ಅದಕ್ಕೆ ಯಾವದೂ ತಪ್ಪಿಸಿಕೊಳ್ಳಲಾರದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು