Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 17:37 - ಕನ್ನಡ ಸತ್ಯವೇದವು J.V. (BSI)

37 ಈ ಮಾತಿಗೆ ಶಿಷ್ಯರು - ಸ್ವಾಮೀ, ಅದು ಎಲ್ಲಿ ಆಗುವದು ಎಂದು ಕೇಳಲು ಆತನು ಅವರಿಗೆ - ಹೆಣ ಎಲ್ಲಿಯೋ ಅಲ್ಲಿಯೇ ಹದ್ದುಗಳು ಕೂಡುವವು ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಈ ಮಾತಿಗೆ ಶಿಷ್ಯರು, “ಕರ್ತನೇ, ಅದು ಎಲ್ಲಿ ಆಗುವುದು?” ಎಂದು ಕೇಳಲು ಆತನು ಅವರಿಗೆ, “ಹೆಣ ಎಲ್ಲಿಯೋ ಅಲ್ಲಿಯೇ ರಣಹದ್ದುಗಳು ಬಂದು ಸೇರುವವು” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 “ಸ್ವಾಮೀ, ಇದು ಎಲ್ಲಿ ನಡೆಯುವುದು?” ಎಂದು ಶಿಷ್ಯರು ಕೇಳಿದಾಗ, ಯೇಸು, “ಹೆಣವಿದ್ದಲ್ಲಿ ರಣಹದ್ದುಗಳು ಬಂದು ಕೂಡುವುವು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಶಿಷ್ಯರು ಯೇಸುವಿಗೆ, “ಪ್ರಭುವೇ, ಇದೆಲ್ಲಾ ಎಲ್ಲಿ ಸಂಭವಿಸುವುದು?” ಎಂದು ಕೇಳಿದರು. ಯೇಸು ಅವರಿಗೆ, “ಹದ್ದುಗಳು ಎಲ್ಲಿ ಕೂಡಿಬಂದಿರುತ್ತವೆಯೋ ಅಲ್ಲಿ ಹೆಣ ಇದ್ದೇ ಇರುತ್ತದೆಯೆಂದು ಜನರು ತಿಳಿದುಕೊಳ್ಳುತ್ತಾರೆ” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಅವರು ಯೇಸುವಿಗೆ, “ಕರ್ತದೇವರೇ, ಇದು ಎಲ್ಲಿ ನಡೆಯುವುದು?” ಎಂದು ಕೇಳಲು ಯೇಸು ಅವರಿಗೆ, “ಹೆಣ ಎಲ್ಲಿದೆಯೋ, ಅಲ್ಲಿ ಹದ್ದುಗಳು ಬಂದು ಸೇರುತ್ತವೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

37 ಶಿಸಾನಿ ಜೆಜುಕ್, “ಹೆ ಸಗ್ಳೆ ಖೈ ಘಡ್ತಾ! ಧನಿಯಾ?” ಮನುನ್ ಇಚಾರ್‍ಲ್ಯಾನಿ. ಜೆಜುನ್ ತೆಂಕಾ “ಖೈ ಮಡಿ ಪಡಲ್ಲಿ ಹಾತ್, ಥೈಚ್ ಹಳಿಹಡ್ಡಾ ಗೊಳಾ ಹೊತ್ಯಾತ್” ಮನುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 17:37
8 ತಿಳಿವುಗಳ ಹೋಲಿಕೆ  

ಹೆಣ ಬಿದ್ದಲ್ಲಿ ಹದ್ದುಗಳು ಕೂಡುವವು.


ನಾನು ಸಕಲ ಜನಾಂಗಗಳನ್ನು ಯೆರೂಸಲೇವಿುಗೆ ವಿರುದ್ಧವಾಗಿ ಕೂಡಿಸುವೆನು; ಅವು ಪಟ್ಟಣವನ್ನು ಆಕ್ರವಿುಸಿಕೊಂಡು ಮನೆಗಳನ್ನು ಸೂರೆಮಾಡಿ ಹೆಂಗಸರನ್ನು ಕೆಡಿಸುವವು; ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು, ವಿುಕ್ಕವರೋ ಪಟ್ಟಣದಲ್ಲೇ ಉಳಿಯುವರು.


ಅನ್ಯಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೆ ಅಡ್ಡಿಮಾಡುತ್ತಾರೆ; ಹೀಗೆ ತಮ್ಮ ಪಾಪಕೃತ್ಯಗಳನ್ನು ಎಲ್ಲಾ ಕಾಲಗಳಲ್ಲಿಯೂ ಪರಿಪೂರ್ಣಮಾಡುವದಕ್ಕೆ ಹೋಗುತ್ತಾರೆ. ಆದರೆ ದೇವರ ಕೋಪವು ಅವರ ಮೇಲೆ ಸಂಪೂರ್ಣವಾಗುತ್ತಾ ಬಂತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು