Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:44 - ಕನ್ನಡ ಸತ್ಯವೇದವು J.V. (BSI)

44 ನಿಮ್ಮ ಗತಿಯನ್ನು ಏನು ಹೇಳಲಿ; ನೆಲಸಮವಾದ ಸಮಾಧಿಗಳ ಹಾಗಿದ್ದೀರಿ; ಅವುಗಳ ಮೇಲೆ ತಿರುಗಾಡುವ ಜನರಿಗೆ ಇವು ಸಮಾಧಿಗಳೆಂದು ತಿಳಿಯದು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44 ನಿಮ್ಮ ಗತಿಯನ್ನು ಏನು ಹೇಳಲಿ, ನೆಲಸಮವಾದ ಸಮಾಧಿಗಳ ಹಾಗಿದ್ದೀರಿ. ಅವುಗಳ ಮೇಲೆ ತಿರುಗಾಡುವ ಜನರಿಗೆ ಇವು ಸಮಾಧಿಗಳೆಂದು ತಿಳಿಯದು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 ನೀವು ಮರೆಯಾಗಿರುವ ಸಮಾಧಿಗಳಂತಿದ್ದೀರಿ. ಜನರು ಸಮಾಧಿಗಳೆಂದು ತಿಳಿಯದೆ ಅವುಗಳ ಮೇಲೆ ನಡೆಯುತ್ತಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 “ನಿಮಗೆ ಕಷ್ಟ, ಏಕೆಂದರೆ ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ, ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

44 ತುಮ್ಚಿ ಗತ್ ಕಾಯ್ ಸಾಂಗು! ತುಮಿ ಕಾಯ್ಬಿ ವಳಕ್ ನಸಲ್ಲ್ಯಾ ಸಾರಿಯಾಂಚ್ಯಾ ಸರ್ಕೆ, ಲೊಕಾ ತೆಂಕಾ ಗೊತ್ತ್ ನಸ್ತಾನಾ ತೆಂಚ್ಯಾ ವೈನಾ ಫಿರುನ್ ಖೆಳ್ತ್ಯಾತ್”.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:44
7 ತಿಳಿವುಗಳ ಹೋಲಿಕೆ  

ಪೌಲನು ಅವನಿಗೆ - ಎಲೈ ಸುಣ್ಣಾ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು. ನೀನು ಧರ್ಮಶಾಸ್ತ್ರಾನುಸಾರವಾಗಿ ನನ್ನ ವಿಚಾರಣೆ ಮಾಡುವದಕ್ಕೆ ಕೂತುಕೊಂಡು ಧರ್ಮಶಾಸ್ತ್ರ ವಿರುದ್ಧವಾಗಿ ನನ್ನನ್ನು ಹೊಡೆಯುವದಕ್ಕೆ ಅಪ್ಪಣೆಕೊಡುತ್ತೀಯೋ? ಅಂದನು.


ಅವರ ಬಾಯಲ್ಲಿ ಯಥಾರ್ಥತ್ವವಿಲ್ಲ; ಅವರು ನಾಲಿಗೆಯಿಂದ ಸವಿಮಾತಾಡಿದರೂ ಅವರ ಹೃದಯವು ನಾಶಕರವಾದ ಗುಂಡಿ, ಅವರ ಗಂಟಲು ತೆರೆದಿರುವ ಸಮಾಧಿ.


ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚುಹಾಕುತ್ತದೆ; ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಯ ಬಲೆಯು ಒಡ್ಡಿದೆ, ಅವನ ದೇವರ ಆಲಯದಲ್ಲಿಯೂ ಶತ್ರುವಿರೋಧವು ಕಾದಿದೆ.


ಬೈಲಿನಲ್ಲಿರುವ ಯಾವನಿಗಾದರೂ ಶಸ್ತ್ರಹತನ ಶವವಾಗಲಿ ಬೇರೆ ಯಾವ ಮನುಷ್ಯ ಶವವಾಗಲಿ ಮನುಷ್ಯನ ಎಲುಬಾಗಲಿ ಸಮಾಧಿಯಾಗಲಿ ಸೋಂಕಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.


ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ, ಬೆಳೆದ ಮೇಲೆ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ; ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ.


ದಾರಿಗಳಲ್ಲಿ ಯಾವನೇ ಆಗಲಿ ಪ್ರಯಾಣಮಾಡುತ್ತಿರುವಾಗ ಮನುಷ್ಯರ ಎಲುಬನ್ನು ಕಂಡರೆ ಅಲ್ಲಿ ಒಂದು ಗುರುತನ್ನು ನಿಲ್ಲಿಸುವನು; ಹೂಣಿಡುವವರು ಗೋಗನ ಸಮೂಹದ ತಗ್ಗಿನಲ್ಲಿ ಅದನ್ನು ಹೂಣುವ ತನಕ ಆ ಗುರುತು ಹಾಗೇ ನಿಂತಿರುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು