Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:4 - ಕನ್ನಡ ಸತ್ಯವೇದವು J.V. (BSI)

4 ಹಣದ ಚೀಲವನ್ನಾಗಲಿ ಹಸಿಬೆಯನ್ನಾಗಲಿ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ; ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನೋಡಿರಿ, ನೀವು ಹೋಗುವಾಗ ಹಣದ ಚೀಲವನ್ನಾಗಲಿ, ಪ್ರವಾಸದ ಚೀಲವನ್ನಾಗಲಿ, ಕಾಲಿಗೆ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಕೈಚೀಲವನ್ನಾಗಲಿ ಹಣವನ್ನಾಗಲಿ ಅಥವಾ ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ನಿಂತುಕೊಂಡು ಜನರೊಡನೆ ಮಾತನಾಡಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಹಣದ ಚೀಲವನ್ನಾಗಲಿ, ಪ್ರಯಾಣದ ಚೀಲವನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ; ದಾರಿಯಲ್ಲಿ ಯಾರನ್ನೂ ಕುಶಲ ವಿಚಾರ ಮಾಡಿಕೊಂಡಿರಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

4 ಪಯ್ಸ್ಯಾಂಚಿ ಪಿಸ್ವಿ ಹೊಂವ್ದಿ, ಪಿಸ್ವಿ ಹೊಂವ್ದಿ ಚಪ್ಲಾ ಹೊಂವ್ದಿ ಘೆವ್‍ಕಾಶಿ; ವಾಟೆರ್ ಕೊನಾಕ್ಬಿ ನಮಸ್ಕಾರ್ ಕರುಕ್ ಇಬೆ ರಾವ್ನಕಾಶಿ”.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:4
13 ತಿಳಿವುಗಳ ಹೋಲಿಕೆ  

ಮತ್ತು ಆತನು - ನಿಮ್ಮನ್ನು ನಾನು ಹಮ್ಮೀಣಿ ಹಸಿಬೆ ಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು.


ಆಗ ಎಲೀಷನು ಗೇಹಜಿಗೆ - ನೀನು ನಡು ಕಟ್ಟಿಕೊಂಡು ನನ್ನ ಕೋಲನ್ನು ತೆಗೆದುಕೊಂಡು ಹೋಗಿ ಹುಡುಗನ ಮೋರೆಯ ಮೇಲಿಡು; ಹೋಗುವಾಗ ದಾರಿಯಲ್ಲಿ ಯಾರನ್ನೂ ವಂದಿಸಬೇಡ; ಅವರ ವಂದನೆಯನ್ನೂ ಸ್ವೀಕರಿಸಬೇಡ ಎಂದು ಹೇಳಿ ಕಳುಹಿಸಿದನು.


ನೆಟ್ಟಗೆ ದೃಷ್ಟಿಸು; ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ.


ಆಕೆಯು ಚಿಂತೆಯಿಲ್ಲ ಎಂದು ಹೇಳಿ ಕತ್ತೆಗೆ ತಡಿಹಾಕಿಸಿ ಕೂತುಕೊಂಡು ಸೇವಕನಿಗೆ - ಹೊಡೆ, ಓಡಿಸುತ್ತಾ ಬಾ; ನಾನು ಅಪ್ಪಣೆ ಮಾಡುವವರೆಗೂ ನಿಲ್ಲಿಸಬೇಡ ಎಂದು ಆಜ್ಞಾಪಿಸಿದಳು.


ದಾವೀದನು ಅಹೀಮೆಲೆಕನನ್ನು - ಅರಸನ ಕಾರ್ಯವು ಅವಸರವಾಗಿದ್ದದರಿಂದ ಕತ್ತಿಯನ್ನಾಗಲಿ ಬೇರೆ ಆಯುಧವನ್ನಾಗಲಿ ತೆಗೆದುಕೊಂಡು ಬರಲು ಆಗಲಿಲ್ಲ; ನಿನ್ನ ಬಳಿಯಲ್ಲಿ ಬರ್ಜಿಯಾಗಲಿ ಕತ್ತಿಯಾಗಲಿ ಇಲ್ಲವೋ ಎಂದು ಕೇಳಲು ಅವನು -


ಅವನು ಅವರಿಗೆ - ಯೆಹೋವನು ನನ್ನ ಪ್ರಯಾಣವನ್ನು ಸಫಲ ಮಾಡಿದ್ದಾನೆ; ಆದದರಿಂದ ನನ್ನನ್ನು ತಡೆಯಬೇಡಿರಿ; ನನ್ನ ದಣಿಯ ಬಳಿಗೆ ಹೋಗುವದಕ್ಕೆ ನನಗೆ ಅಪ್ಪಣೆಯಾಗಬೇಕೆಂದು ಹೇಳಲು


ಆದರೆ ಅವನಿಗೆ ಊಟಕ್ಕೆ ಬಡಿಸಿದಾಗ ಅವನು - ನಾನು ಬಂದ ಕೆಲಸವನ್ನು ಹೇಳದೆ ಊಟ ಮಾಡುವದಿಲ್ಲ ಅನ್ನಲು ಲಾಬಾನನು - ಹೇಳು ಅಂದನು.


ಆತನು ಹಳ್ಳಿಪಳ್ಳಿಗಳನ್ನು ಸುತ್ತಿಕೊಂಡು ಉಪದೇಶ ಮಾಡುತ್ತಾ ಬಂದನು. ಮತ್ತು ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರನ್ನು ಇಬ್ಬರಿಬ್ಬರಾಗಿ ಕಳುಹಿಸಲಾರಂಭಿಸಿದನು. ಕಳುಹಿಸುವಾಗ ಅವರಿಗೆ ದೆವ್ವಗಳ ಮೇಲೆ ಅಧಿಕಾರಕೊಟ್ಟು -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು