ಇದಲ್ಲದೆ ತನ್ನ ತಂದೆಯಾದ ದಾವೀದನ ವಿಧಿಗನುಸಾರವಾಗಿ ಯಾಜಕವರ್ಗಗಳವರನ್ನೂ ಲೇವಿಯರನ್ನೂ ಅವರವರ ಸೇವಾವೃತ್ತಿಗೆ ನೇವಿುಸಿದನು. ಲೇವಿಯರು ಆಯಾ ದಿನದ ನೇಮದ ಪ್ರಕಾರ ದೇವಭಜನೆಮಾಡಿ ಯಾಜಕರ ಕೈಕೆಳಗೆ ಸೇವೆಮಾಡುತ್ತಲೂ ದ್ವಾರಪಾಲಕರು ತಮ್ಮ ತಮ್ಮ ವರ್ಗಗಳ ಸರತಿಯ ಮೇಲೆ ಆಯಾ ಬಾಗಲುಗಳನ್ನು ಕಾಯುತ್ತಲೂ ಇರಬೇಕಾಯಿತು. ಇದೇ ದೇವರ ಮನುಷ್ಯನಾದ ದಾವೀದ ರಾಜನ ಅಪ್ಪಣೆ.
ಹಿಜ್ಕೀಯನು ಯಾಜಕರ ಮತ್ತು ಲೇವಿಯರ ಆಯಾ ವರ್ಗಗಳವರನ್ನು ಅವರವರಿಗೆ ನೇಮಕವಾದ ಸೇವೆಗೆ ಅಂದರೆ ಸರ್ವಾಂಗಹೋಮ ಸಮಾಧಾನಯಜ್ಞ ಇವುಗಳನ್ನು ಸಮರ್ಪಿಸುವದಕ್ಕೂ ಯೆಹೋವನ ಪಾಳೆಯದ ದ್ವಾರಗಳಲ್ಲಿ ಸೇರಿ ಯೆಹೋವನನ್ನು ಆರಾಧಿಸುತ್ತಾ ಕೀರ್ತಿಸುತ್ತಾ ಕೃತಜ್ಞತಾಸ್ತುತಿ ಮಾಡುತ್ತಾ ಇರುವದಕ್ಕೂ ನೇವಿುಸಿದನು.
ಇದಲ್ಲದೆ ಆರೋನನ ಸಂತಾನದವರಾದ ಯಾಜಕರ ಆಯಾ ಪಟ್ಟಣಗಳಿಗೆ ಸೇರಿದ ಗೋಮಾಳಗಳಲ್ಲಿದ್ದವರಿಗೆ ಪಾಲುಕೊಡುತ್ತಿದ್ದರು. ಇವರು ಯಾಜಕ ಸಂತಾನದ ಎಲ್ಲಾ ಗಂಡಸರಿಗೂ ಪಟ್ಟಿಯಲ್ಲಿ ಲಿಖಿತರಾದ ಎಲ್ಲಾ ಲೇವಿಯರಿಗೂ ಸಿಕ್ಕತಕ್ಕ ಭಾಗಗಳನ್ನು ಹಂಚಿಕೊಡುವದಕ್ಕೆ ಹೆಸರು ಹೆಸರಾಗಿ ನೇವಿುಸಲ್ಪಟ್ಟ ಪುರುಷರಿದ್ದರು.
ನೀನೂ ನಿನ್ನ ಸಂತತಿಯವರೂ ಯಾಜಕೋದ್ಯೋಗವನ್ನು ಕೈಕೊಂಡವರಾಗಿ ಯಜ್ಞವೇದಿಯ ಮತ್ತು ತೆರೆಯೊಳಗಣ ಕಾರ್ಯಗಳನ್ನು ನಡಿಸಬೇಕು; ಅವುಗಳ ಪರಿಚರ್ಯವನ್ನು ನೀವೇ ಮಾಡಬೇಕು; ನಾನು ಯಾಜಕತ್ವವನ್ನು ನಿಮಗೇ ಅನುಗ್ರಹಿಸಿದ್ದೇನೆ; ಇತರರು ಅದಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು.
ಆರೋನನಿಗೂ ಅವನ ಮಕ್ಕಳಿಗೂ ನಡುಕಟ್ಟುಗಳನ್ನು ಕಟ್ಟಿಸಿ ಮುಂಡಾಸಗಳನ್ನು ಸುತ್ತಿಸಬೇಕು. ಆ ಹೊತ್ತಿನಿಂದ ಯಾಜಕತ್ವವು ಶಾಶ್ವತವಾದ ನಿಯಮದಿಂದ ಅವರಿಗೆ ಉಂಟಾಗುವದು. ಹೀಗೆ ಆರೋನನನ್ನೂ ಅವನ ಮಕ್ಕಳನ್ನೂ ಯಾಜಕೋದ್ಯೋಗಕ್ಕೆ ಸೇರಿಸಬೇಕು.
ಇದಲ್ಲದೆ ನನಗೆ ಯಾಜಕಸೇವೆ ಮಾಡುವದಕ್ಕೆ ನೀನು ನಿನ್ನ ಅಣ್ಣನಾದ ಆರೋನನನ್ನೂ ಅವನ ಮಕ್ಕಳಾದ ನಾದಾಬ್ ಅಬೀಹೂ ಎಲ್ಲಾಜಾರ್ ಈತಾಮಾರ್ ಎಂಬವರನ್ನೂ ಇಸ್ರಾಯೇಲ್ಯರಲ್ಲಿಂದ ನಿನ್ನ ಹತ್ತಿರಕ್ಕೆ ಕರಿಸಬೇಕು.