Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 9:6 - ಕನ್ನಡ ಸತ್ಯವೇದವು J.V. (BSI)

6 ದೇವರು ಹೇಳಿದ ಮಾತು ತಪ್ಪಿತೆಂದು ನಾವು ಭಾವಿಸಕೂಡದು. ಯಾಕಂದರೆ ಇಸ್ರಾಯೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ಇಸ್ರಾಯೇಲ್ಯರಲ್ಲ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ದೇವರ ವಾಕ್ಯವು ವ್ಯರ್ಥವಾಯಿತೆಂದು ನಾವು ಭಾವಿಸಬಾರದು. ಯಾಕೆಂದರೆ ಇಸ್ರಾಯೇಲ ವಂಶದಲ್ಲಿ ಹುಟ್ಟಿದವರೆಲ್ಲರೂ ಇಸ್ರಾಯೇಲ್ಯರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ದೇವರ ವಾಗ್ದಾನ ವಿಫಲವಾಯಿತೆಂದು ನಾನು ಹೇಳುತ್ತಿಲ್ಲ. ಇಸ್ರಯೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ನಿಜವಾದ ಇಸ್ರಯೇಲರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಹೌದು, ನಾನು ಯೆಹೂದ್ಯರ ವಿಷಯದಲ್ಲಿ ದುಃಖಿಸುತ್ತೇನೆ. ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದರಲ್ಲಿ ವಿಫಲನಾದನೆಂದು ನಾನು ಹೇಳುತ್ತಿಲ್ಲ. ಏಕೆಂದರೆ ಇಸ್ರೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಇದು ದೇವರ ವಾಕ್ಯವು ನೆರವೇರಲಿಲ್ಲ ಎಂಬಂತೆ ಅಲ್ಲ. ಏಕೆಂದರೆ ಇಸ್ರಾಯೇಲ್ ವಂಶದಲ್ಲಿ ಬಂದವರೆಲ್ಲರೂ ಇಸ್ರಾಯೇಲರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

6 ದೆವಾನ್ ಗೊಸ್ಟ್ ದಿವ್ನ್ ಸಾಂಗಲ್ಲೆ ಪುರಾ ಹೊವ್ಕ್ ನಾ ಮನುನ್ ಮಿಯಾ ಸಾಂಗಿನಾ; ಕಶ್ಯಾಕ್ ಮಟ್ಲ್ಯಾರ್ ಇಸ್ರಾಯೆಲಾಚಿ ಸಗ್ಳಿ ಲೊಕಾಬಿ ದೆವಾಚಿ ಲೊಕಾ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 9:6
14 ತಿಳಿವುಗಳ ಹೋಲಿಕೆ  

ಈ ಸೂತ್ರಕ್ಕೆ ಸರಿಯಾಗಿ ನಡೆಯುವವರೆಲ್ಲರಿಗೆ ಅಂದರೆ ದೇವರ ಇಸ್ರಾಯೇಲ್ಯರಿಗೆ ಶಾಂತಿಯೂ ಕರುಣೆಯೂ ಆಗಲಿ.


ಅವರಲ್ಲಿ ಕೆಲವರು ನಂಬದೆ ಹೋಗಿದ್ದರೇನು? ಅವರು ನಂಬದೆ ಹೋದದರಿಂದ ದೇವರು ವಚನಕ್ಕೆ ತಪ್ಪುವವನಾದನೋ? ಎಂದಿಗೂ ಇಲ್ಲ;


ಯೇಸು ತನ್ನ ಕಡೆಗೆ ಬರುವ ನತಾನಯೇಲನನ್ನು ಕಂಡು ಅವನ ವಿಷಯವಾಗಿ - ಇಗೋ ಇವನು ನಿಜವಾದ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ ಅಂದನು.


ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ.


ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ.


ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.


ನಾವು ಅಪನಂಬಿಗಸ್ತರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು; ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಏನೂ ಮಾಡಲಾರನು.


ಹಾಗಾದರೆ ದೇವರ ವಾಕ್ಯವನ್ನು ಹೊಂದಿದವರನ್ನು ದೇವರುಗಳೆಂದು ಆತನು ಹೇಳಿರುವಲ್ಲಿ


ಅವರು ಇಸ್ರಾಯೇಲನ ವಂಶದವರೂ ದೇವರು ಪುತ್ರರಾಗಿ ಸ್ವೀಕರಿಸಿದವರೂ ಆಗಿದ್ದಾರೆ. ಅವರಲ್ಲಿ ದೇವರ ತೇಜಸ್ಸಾನ್ನಿಧ್ಯವು ಇದೆ; ಅವರ ಸಂಗಡ ದೇವರು ಒಡಂಬಡಿಕೆಗಳನ್ನು ಮಾಡಿಕೊಂಡನು; ಅವರಿಗೆ ಧರ್ಮಶಾಸ್ತ್ರವೂ ದೇವಾಲಯದಲ್ಲಿ ನಡೆಯುವ ಆರಾಧನೆಯೂ ವಾಗ್ದಾನಗಳೂ ಕೊಡೋಣವಾದವು.


ನಿಜವಾದ ಸುನ್ನತಿಯವರು ಯಾರಂದರೆ - ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ನಾವೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು