ರೋಮಾಪುರದವರಿಗೆ 7:7 - ಕನ್ನಡ ಸತ್ಯವೇದವು J.V. (BSI)7 ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರವು ಪಾಪಸ್ವರೂಪವೋ? ಎಂದಿಗೂ ಅಲ್ಲ. ಧರ್ಮಶಾಸ್ತ್ರದಿಂದಲೇ ಹೊರತು ಪಾಪವೆಂಬದು ಏನೋ ನನಗೆ ಗೊತ್ತಾಗುತ್ತಿರಲಿಲ್ಲ. ದೃಷ್ಟಾಂತವಾಗಿ, ಆಶಿಸಬಾರದೆಂದು ಧರ್ಮಶಾಸ್ತ್ರವು ಹೇಳದಿದ್ದರೆ ದುರಾಶೆಯೆಂದರೆ ಏನೋ ನನಗೆ ತಿಳಿಯುತ್ತಿದ್ದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರವು ಪಾಪಸ್ವರೂಪವೋ? ಎಂದಿಗೂ ಅಲ್ಲ. ಧರ್ಮಶಾಸ್ತ್ರವಿಲ್ಲದಿದ್ದರೆ ಪಾಪವೆಂದರೆ ಏನೆಂದು ನನಗೆ ಗೊತ್ತಾಗುತ್ತಿರಲಿಲ್ಲ. ದೃಷ್ಟಾಂತವಾಗಿ “ದುರಾಶೆ ಪಾಪವೆಂದು” ಎಂದು ಧರ್ಮಶಾಸ್ತ್ರವು ಹೇಳದಿದ್ದರೆ ದುರಾಶೆಯಂದರೆ ಏನೆಂದು ನನಗೆ ತಿಳಿಯುತ್ತಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಹಾಗಾದರೆ ಧರ್ಮಶಾಸ್ತ್ರವೇ ಪಾಪ ಎಂದು ಹೇಳೋಣವೆ? ಖಂಡಿತವಾಗಿ ಇಲ್ಲ. ಧರ್ಮಶಾಸ್ತ್ರ ಇಲ್ಲದಿದ್ದರೆ ಪಾಪದ ಅರಿವು ನನಗಾಗುತ್ತಿರಲಿಲ್ಲ. ‘ದುರಾಶೆಪಡಬೇಡ’ ಎಂದು ಧರ್ಮಶಾಸ್ತ್ರ ವಿಧಿಸದೆಹೋಗಿದ್ದರೆ ದುರಾಶೆ ಎಂದರೆ ಏನೆಂಬುದೇ ನನಗೆ ತಿಳಿಯುತ್ತಿರಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಪಾಪ ಮತ್ತು ಧರ್ಮಶಾಸ್ತ್ರ ಇವೆರಡೂ ಒಂದೇ ಎಂದು ನಾನು ಹೇಳುತ್ತಿರುವುದಾಗಿ ನೀವು ಭಾವಿಸಬಹುದು. ಆದರೆ ಅದು ನಿಜವಲ್ಲ. ಪಾಪವೆಂದರೆ ಏನೆಂಬುದನ್ನು ಕಲಿತುಕೊಳ್ಳಲು ಧರ್ಮಶಾಸ್ತ್ರವೊಂದೇ ನನಗೆ ಏಕೈಕ ಮಾರ್ಗವಾಗಿದೆ. ಧರ್ಮಶಾಸ್ತ್ರವಿಲ್ಲದಿದ್ದರೆ, ದುರಾಶೆ ಎಂದರೆ ಏನೆಂಬುದೇ ನನಗೆ ತಿಳಿಯುತ್ತಿರಲಿಲ್ಲ. “ಬೇರೆಯವರ ವಸ್ತುಗಳನ್ನು ನೀವು ಆಶಿಸಕೂಡದು” ಎಂದು ಧರ್ಮಶಾಸ್ತ್ರವು ಹೇಳಿದ್ದರಿಂದಲೇ ಅದು ನನಗೆ ತಿಳಿಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಹಾಗಾದರೆ ನಾವು ಏನು ಹೇಳೋಣ? ನಿಯಮವೇ ಪಾಪವಾಗಿದೆಯೋ? ಎಂದಿಗೂ ಇಲ್ಲ. ಆದರೂ ನಿಯಮವನ್ನು ಬಿಟ್ಟು ಬೇರಾವುದರ ಮೂಲಕವೂ ಪಾಪವೆಂದರೆ ಏನೆಂದು ನನಗೆ ತಿಳಿದುಕೊಳ್ಳಲು ಸಾಧ್ಯವಿರಲಿಲ್ಲ. ನಿಯಮವು, “ದುರಾಶೆ ಪಡಬೇಡ,” ಎಂದು ಹೇಳದೆ ಇರುತ್ತಿದ್ದರೆ ದುರಾಶೆ ಎಂದರೆ ಏನೆಂದು ನಾನು ತಿಳಿಯಲು ಸಾಧ್ಯವಿರಲಿಲ್ಲ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್7 ತಸೆ ಹೊಲ್ಯಾರ್, ಅಮಿ ಖಾಯ್ದೊಚ್ ಪಾಪಾನಿ ಭರಲ್ಲೊ ಹಾಯ್ ಮನುಕ್ ಹೊತಾ ಕಾಯ್? ಕನ್ನಾಚ್ ನಾ! ಹ್ಯಾ ಖಾಯ್ದ್ಯಾನ್ ಮಾಕಾ ಪಾಪ್ ಮಟ್ಲ್ಯಾರ್ ಕಾಯ್ ಮನುನ್ ದಾಕ್ವುನ್ ದಿಲ್ಯಾನ್. ಜರ್ ತರ್ ಖಾಯ್ದ್ಯಾತ್, “ದುಸ್ರ್ಯಾಂಕ್ನಿ ಜೆ ಕಾಯ್ ಸಮಂದ್ ಪಡಲ್ಲೆ ಹಾಯ್ ತೆಚಿ ಅಶಾ ಕರುನಕೊ”, ಮನುನ್ ಸಾಂಗಲ್ಲೆ ರ್‍ಹಾಯ್‍ನಸಿ ಹೊತ್ತೆ, ತರ್ ಆಸ್ಲ್ಯಾ ಆಶೆಚ್ಯಾ ವಿಶಯಾತ್ ಮಾಕಾ ಗೊತ್ತುಚ್ ರ್‍ಹಾಯ್‍ನಸಿ ಹೊತ್ತೆ. ಅಧ್ಯಾಯವನ್ನು ನೋಡಿ |