ರೋಮಾಪುರದವರಿಗೆ 7:6 - ಕನ್ನಡ ಸತ್ಯವೇದವು J.V. (BSI)6 ಈಗಲಾದರೋ ನಮ್ಮನ್ನು ವಶಮಾಡಿಕೊಂಡಿದ್ದ ಧರ್ಮಶಾಸ್ತ್ರದ ಪಾಲಿಗೆ ನಾವು ಸತ್ತಕಾರಣ ಆ ಧರ್ಮಶಾಸ್ತ್ರದಿಂದ ವಿಮುಕ್ತರಾಗಿದ್ದೇವೆ. ಹೀಗಿರಲಾಗಿ ಶಾಸ್ತ್ರದ ಹೊರಗಣ ಅರ್ಥಕ್ಕೆ ಅನುಕೂಲವಾದ ಹಳೇ ರೀತಿಯಲ್ಲಿ ನಾವು ದೇವರನ್ನು ಸೇವಿಸುವವರಲ್ಲ. ಪವಿತ್ರಾತ್ಮಪ್ರೇರಿತವಾದ ಹೊಸ ರೀತಿಯಲ್ಲಿ ಆತನನ್ನು ಸೇವಿಸುವವರಾಗಿದ್ದೇವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಈಗಲಾದರೋ ನಮ್ಮನ್ನು ಬಂಧಿಸಿಟ್ಟಿದ್ದ ಧರ್ಮಶಾಸ್ತ್ರದ ಪಾಲಿಗೆ ನಾವು ಸತ್ತವರಾದ ಕಾರಣ ಆ ಧರ್ಮಶಾಸ್ತ್ರದಿಂದ ಬಿಡುಗಡೆಹೊಂದಿದ್ದೇವೆ. ಹೀಗಿರಲಾಗಿ ಬರಹರೂಪದ ಹಿಂದಿನ ಶಾಸ್ತ್ರದ ರೀತಿಯಲ್ಲಿ ನಾವು ದೇವರಿಗೆ ಸೇವೆ ಸಲ್ಲಿಸದೆ, ಪವಿತ್ರಾತ್ಮ ಪ್ರೇರಿತವಾದ ಹೊಸ ರೀತಿಯಲ್ಲಿ ಆತನ ಸೇವೆ ಮಾಡುವವರಾಗಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಈಗಲಾದರೋ ನಮ್ಮನ್ನು ಬಂಧನದಲ್ಲಿಟ್ಟಿದ್ದ ಆ ಧರ್ಮಶಾಸ್ತ್ರದ ಪಾಲಿಗೆ ನಾವು ಸತ್ತು, ಬಿಡುಗಡೆ ಹೊಂದಿದ್ದೇವೆ. ಆದ್ದರಿಂದ ಲಿಖಿತವಾದ ಹಳೆಯ ಶಾಸ್ತ್ರಕ್ಕೆ ಬದ್ಧರಾಗದೆ ಪವಿತ್ರಾತ್ಮಪ್ರೇರಿತವಾದ ನವೀನ ಮಾರ್ಗದಲ್ಲಿ ನಡೆಯುತ್ತಾ ಇದ್ದೇವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಹಿಂದಿನ ಕಾಲದಲ್ಲಿ, ಧರ್ಮಶಾಸ್ತ್ರವು ನಮ್ಮನ್ನು ಸೆರೆಯಾಳುಗಳಂತೆ ಬಂಧಿಸಿತ್ತು. ಆದರೆ ನಮ್ಮ ಹಳೆಯ ಸ್ವಭಾವವು ಸತ್ತುಹೋದ ಕಾರಣ ನಾವು ಧರ್ಮಶಾಸ್ತ್ರದಿಂದ ಬಿಡುಗಡೆಯಾದೆವು. ಆದ್ದರಿಂದ ಈಗ ನಾವು ಲಿಖಿತ ನಿಯಮಗಳೊಡನೆ ಹಳೇ ರೀತಿಯಲ್ಲಿ ದೇವರ ಸೇವೆಮಾಡದೆ ಪವಿತ್ರಾತ್ಮ ಪ್ರೇರಿತವಾದ ಹೊಸ ರೀತಿಯಲ್ಲಿ ದೇವರ ಸೇವೆ ಮಾಡುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಈಗಲಾದರೋ ಒಂದು ಕಾಲದಲ್ಲಿ ನಮ್ಮನ್ನು ಯಾವುದು ಬಂಧನದಲ್ಲಿರಿಸಿತ್ತೋ ಅದಕ್ಕೆ ಸತ್ತವರಾಗಿದ್ದು ನಿಯಮದಿಂದ ಬಿಡುಗಡೆ ಹೊಂದಿದವರಾಗಿರುತ್ತೇವೆ. ಹೀಗೆ ನಾವು ಲಿಖಿತವಾದ ಹಳೆಯ ನಿಯಮದಂತೆ ನಡೆಯದೆ ಆತ್ಮದಿಂದ ನವಜೀವನದಲ್ಲಿ ನಡೆಯುವರಾಗಿದ್ದೇವೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್6 ಅತ್ತಾ ಕಶೆ ತರ್ ಹೊಯ್ನಾ, ಅಮಿ ಖಾಯ್ಧ್ಯಾತ್ನಾ ಸ್ವತಂತ್ರ್, ಹಾಂವ್, ಕಶ್ಯಾಕ್ ಮಟ್ಲ್ಯಾರ್ ಅಮ್ಕಾ ಅದ್ದಿ ಧರುನ್ ಅಪ್ನಾಚ್ಯಾ ಬಂಧಿಖಾನ್ಯಾತ್ ಥವಲ್ಲ್ಯಾ ಖಾಯ್ದ್ಯಾಕ್ ಅಮಿ ಮರ್ಲಾಂವ್, ತೆಚೆಸಾಟ್ನಿ ಅನಿ ಫಿಡೆ ಅಮಿ ಲಿವಲ್ಲ್ಯಾ ಖಾಯ್ಧ್ಯಾಚ್ಯಾ ಪರ್‍ಕಾರ್ ನ್ಹಯ್, ಪವಿತ್ರ್ ಆತ್ಮ್ಯಾಚ್ಯಾ ನ್ಹವ್ಯಾ ವಾಟೆಚ್ಯಾ ಪರ್‍ಕಾರ್ ದೆವಾಚಿ ಸೆವಾ ಕರ್ತಾಂವ್. ಅಧ್ಯಾಯವನ್ನು ನೋಡಿ |