ರೋಮಾಪುರದವರಿಗೆ 2:29 - ಕನ್ನಡ ಸತ್ಯವೇದವು J.V. (BSI)29 ಆದರೆ ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮ ಸಂಬಂಧಪಟ್ಟದ್ದೇ; ಇಂಥಾ ಸುನ್ನತಿಯಿದ್ದವನಿಗೆ ಬರುವ ಹೊಗಳಿಕೆಯು ದೇವರಿಂದಲೇ ಹೊರತು ಮನುಷ್ಯರಿಂದ ಬರುವದಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಆದರೆ ಆಂತರಿಕವಾಗಿ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಸುನ್ನತಿಯನ್ನು ಹೃದಯದಲ್ಲಿ ಹೊಂದಿರುವವನೇ ಸುನ್ನತಿಯುಳ್ಳವನು. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ, ಆತ್ಮಸಂಬಂಧಪಟ್ಟದ್ದೇ; ಇಂಥ ಮನುಷ್ಯನಿಗೆ ಬರುವ ಪ್ರಶಂಸೆಯು, ದೇವರಿಂದಲೇ ಹೊರತು ಮನುಷ್ಯರಿಂದ ಬರುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಯಾರು ಅಂತರಂಗದಲ್ಲಿ ಯೆಹೂದ್ಯನಾಗಿರುತ್ತಾನೋ ಅವನೇ ನಿಜವಾದ ಯೆಹೂದ್ಯನು. ಅಂಥವನಿಗೆ ಅಂತರ್ಯದಲ್ಲಿ ಸುನ್ನತಿಯಾಗಿರುತ್ತದೆ. ಇದು ಲಿಖಿತ ಧರ್ಮಶಾಸ್ತ್ರದಿಂದ ಆದದ್ದಲ್ಲ, ದೇವರಾತ್ಮ ಅವರಿಂದ ಆದ ಕಾರ್ಯ; ಇಂಥವನು ಮೆಚ್ಚುಗೆಯನ್ನು ಪಡೆಯುವುದು ಮನುಷ್ಯನಿಂದಲ್ಲ, ದೇವರಿಂದ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್29 ಅಂತರಂಗದಲ್ಲಿ ಯೆಹೂದ್ಯನಾಗಿರುವವನು ಮಾತ್ರ ನಿಜವಾದ ಯೆಹೂದ್ಯನು. ಹೃದಯದಲ್ಲಿ ಆದ ಸುನ್ನತಿಯೇ ನಿಜವಾದ ಸುನ್ನತಿ. ಈ ಸುನ್ನತಿಯಾದದ್ದು ಪವಿತ್ರಾತ್ಮನಿಂದಲೇ ಹೊರತು ಲಿಖಿತ ಧರ್ಮಶಾಸ್ತ್ರದಿಂದಲ್ಲ. ಪವಿತ್ರಾತ್ಮನಿಂದ ಹೃದಯದಲ್ಲಿ ಸುನ್ನತಿ ಹೊಂದಿರುವ ವ್ಯಕ್ತಿಯು ಹೊಗಳಿಕೆಯನ್ನು ಪಡೆಯುವುದು ದೇವರಿಂದಲೇ ಹೊರತು ಮನುಷ್ಯರಿಂದಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಆದರೆ, ಆಂತರ್ಯದಲ್ಲಿ ಯೆಹೂದ್ಯನಾಗಿರುವವನೇ ಯೆಹೂದ್ಯನು. ಹಾಗೆಯೇ ಸುನ್ನತಿಯು ಆತ್ಮನಿಂದ ಹೃದಯದಲ್ಲಿ ಆಗುವಂಥದ್ದಾಗಿದೆ. ಇದು ಲಿಖಿತ ನಿಯಮದಿಂದ ಆಗುವಂಥದಲ್ಲ. ಅಂಥವನಿಗೆ ಮೆಚ್ಚುಗೆಯು ಮನುಷ್ಯರಿಂದ ಬರುವಂಥದಲ್ಲ, ದೇವರಿಂದಲೇ ಬರುವಂಥದ್ದಾಗಿದೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್29 ಖರೊ ಜುದೆವ್ ಮಟ್ಲ್ಯಾರ್, ಭುತ್ತುರ್‍ಲ್ಯಾ ಬಾಜುನ್ ಖರೊ ಹೊವ್ನ್ ರ್‍ಹಾವ್ಕ್ ಪಾಜೆ, ತೆಚೊ ಮನ್ ಸುನ್ನತ್ ಕರಲ್ಲೊ ರ್‍ಹಾತಾ, ಅನಿ ಹೆ ದೆವಾಚ್ಯಾ ಆತ್ಮ್ಯಾಚೆ ಕಾಮ್, ಲಿವಲ್ಲ್ಯಾ ಖಾಯ್ದ್ಯಾಚೆ ಕಾಮ್ ನ್ಹಯ್ ಹೆ ಅಸ್ಲ್ಯಾ ಮಾನ್ಸಾಕ್ ದೆವಾಕ್ನಾ ಶಬಾಸ್ಕಿ ಗಾವ್ತಾ, ಮಾನ್ಸಾನಿಕ್ನಾ ನ್ಹಯ್. ಅಧ್ಯಾಯವನ್ನು ನೋಡಿ |