ರೋಮಾಪುರದವರಿಗೆ 11:3 - ಕನ್ನಡ ಸತ್ಯವೇದವು J.V. (BSI)3 ಅವನು ದೇವರ ಮುಂದೆ - ಕರ್ತನೇ, ಅವರು ನಿನ್ನ ಪ್ರವಾದಿಗಳನ್ನು ಸಂಹರಿಸಿದ್ದಾರೆ, ನಿನ್ನ ಯಜ್ಞವೇದಿಗಳನ್ನು ಒಡೆದುಹಾಕಿದ್ದಾರೆ, ನಾನೊಬ್ಬನೇ ಉಳಿದಿದ್ದೇನೆ, ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಅವನು ದೇವರ ಮುಂದೆ, “ಕರ್ತನೇ ಅವರು ನಿನ್ನ ಪ್ರವಾದಿಗಳನ್ನು ಸಂಹರಿಸಿದ್ದಾರೆ, ನಿನ್ನ ಯಜ್ಞವೇದಿಗಳನ್ನು ಒಡೆದು ಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಅವರು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ” ಎಂದು ಇಸ್ರಾಯೇಲ್ಯರ ಮೇಲೆ ದೂರು ಹೇಳಿದ್ದಕ್ಕೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಆತನು ಇಸ್ರಯೇಲರ ವಿರುದ್ಧ, “ಸರ್ವೇಶ್ವರಾ, ಈ ಜನರು ನಿಮ್ಮ ಪ್ರವಾದಿಗಳನ್ನು ಸಂಹರಿಸಿದ್ದಾರೆ. ನಿಮ್ಮ ಬಲಿಪೀಠಗಳನ್ನು ಕೆಡವಿಹಾಕಿದ್ದಾರೆ; ಉಳಿದಿರುವವನು ನಾನೊಬ್ಬನೇ. ನನ್ನನ್ನೂ ಕೊಲ್ಲಲು ಯತ್ನಿಸುತ್ತಿದ್ದಾರೆ,” ಎಂದು ದೇವರಿಗೆ ದೂರಿತ್ತನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಎಲೀಯನು, “ಪ್ರಭುವೇ, ಜನರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು; ನಿನ್ನ ಯಜ್ಞವೇದಿಕೆಗಳನ್ನು ನಾಶಮಾಡಿದರು. ಪ್ರವಾದಿಗಳಲ್ಲಿ ನಾನೊಬ್ಬನು ಮಾತ್ರ ಇನ್ನೂ ಬದುಕಿದ್ದೇನೆ. ಈಗ ಜನರು ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ” ಎಂದು ಪ್ರಾರ್ಥಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 “ಕರ್ತಾ, ಅವರು ನಿಮ್ಮ ಪ್ರವಾದಿಗಳನ್ನು ಕೊಂದಿದ್ದಾರೆ. ನಿಮ್ಮ ಬಲಿಪೀಠವನ್ನು ಒಡೆದುಹಾಕಿದ್ದಾರೆ, ನಾನು ಒಬ್ಬನೇ ಉಳಿದಿದ್ದೇನೆ. ಅವರು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ,” ಎಂದು ಇಸ್ರಾಯೇಲರಿಗೆ ವಿರೋಧವಾಗಿ ದೇವರಲ್ಲಿ ವಿಜ್ಞಾಪನೆ ಮಾಡಿಕೊಂಡನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್3 “ಸರ್ವೆಸ್ವರಾ ತೆನಿ ತುಜ್ಯಾ ಪ್ರವಾದ್ಯಾಕ್ನಿ ಜಿವಾನಿ ಮಾರ್ಲ್ಯಾನಾತ್ ಅನಿ ತುಜ್ಯಾ ಅಲ್ತಾರಾ ಕೊಸ್ಳುನ್ ಘಾಟ್ಲ್ಯಾನಾತ್; ಮಿಯಾ ಎಕ್ಲೊಚ್ ಅತ್ತಾ ಹುರ್‍ಲಾ, ಅನಿ ಮಾಕಾಬಿ ಜಿವಾನಿ ಮಾರುಕ್ ತೆನಿ ಖಟ್ಪಟುಲ್ಯಾತ್. ಅಧ್ಯಾಯವನ್ನು ನೋಡಿ |