Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 1:29 - ಕನ್ನಡ ಸತ್ಯವೇದವು J.V. (BSI)

29 ಹೇಗಂದರೆ ಅವರು ಸಕಲವಿಧವಾದ ಅನ್ಯಾಯ ದುರ್ಮಾರ್ಗತನ ಲೋಲುಪ್ತಿ ದುಷ್ಟತ್ವಗಳಿಂದಲೂ ಹೊಟ್ಟೇಕಿಚ್ಚು ಕೊಲೆ ಜಗಳ ಮೋಸ ಹಗೆತನಗಳಿಂದಲೂ ತುಂಬಿದವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಹೇಗೆಂದರೆ ಅವರು ಸಕಲವಿಧವಾದ ಅನ್ಯಾಯ, ದುರ್ಮಾರ್ಗತನ, ಲೋಭ ದುಷ್ಟತ್ವಗಳಿಂದಲೂ ಹೊಟ್ಟೆಕಿಚ್ಚು, ಕೊಲೆ, ಜಗಳ, ಮೋಸ, ಹಗೆತನಗಳಿಂದ ತುಂಬಿದವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಸಕಲ ವಿಧವಾದ ಅನ್ಯಾಯ, ಅಕ್ರಮ, ದುರಾಶೆ, ದುರ್ನಡತೆ ಅವರಲ್ಲಿ ತುಂಬಿಕೊಂಡವು. ಮತ್ಸರ, ಕೊಲೆ, ಕಲಹ, ಕಪಟತನ, ಹಗೆತನ, ಇವೆಲ್ಲವೂ ಅವರಲ್ಲಿ ತುಂಬಿಹೋಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಅವರಲ್ಲಿ ಪ್ರತಿಯೊಂದು ಬಗೆಯ ಪಾಪ, ದುಷ್ಟತನ, ಸ್ವಾರ್ಥ, ದ್ವೇಷ, ಹೊಟ್ಟೆಕಿಚ್ಚು, ಕೊಲೆ, ಹೊಡೆದಾಟ, ಸುಳ್ಳುನುಡಿ ಮತ್ತು ಕೆಟ್ಟ ಆಲೋಚನೆ ಇವುಗಳೆಲ್ಲಾ ತುಂಬಿಕೊಂಡಿವೆ. ಅವರು ಹರಟೆ ಹೊಡೆಯುತ್ತಾರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಅವರು ಸಕಲ ವಿಧವಾದ ಅನ್ಯಾಯ, ದುರ್ಮಾರ್ಗತನ, ಲೋಭ, ದುಷ್ಟತ್ವ, ಹೊಟ್ಟೆಕಿಚ್ಚು, ಕೊಲೆ, ಜಗಳ, ಕಪಟ, ಹಗೆತನಗಳಿಂದಲೂ ತುಂಬಿದವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

29 ತೆನಿ ಅನ್ನ್ಯಾಯ್, ಬುರ್ಶೆಪಾನ್, ಅಸ್ಬುರ್ಕೆಪಾನ್, ದ್ವೆಸ್, ಅನಿ ಕುಸ್ಡೆಪಾನ್, ಜಿವಾನಿ ಮಾರ್‍ತಲೆ, ಝಗ್ಡೆ ಕರ್‍ತಲೆ, ವಿಶ್ವಾಸ್ ಘಾತ್, ದುರ್‍ಬುದ್, ಅಸ್ಲ್ಯಾ ಸಗ್ಳ್ಯಾ ರಿತಿಚ್ಯಾ ಬುರ್ಶೆಪಾನಾನಿ ಭರುನ್ ಗೆಲ್ಲೆ ಹಾತ್. ತೆನಿ ಚಾಡ್ಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 1:29
8 ತಿಳಿವುಗಳ ಹೋಲಿಕೆ  

ನಾನು ಬಂದಾಗ ಒಂದು ವೇಳೆ ನೀವು ನನ್ನ ಇಷ್ಟದ ಪ್ರಕಾರ ಇರುವದಿಲ್ಲವೇನೋ, ನಾನು ನಿಮ್ಮ ಇಷ್ಟದ ಪ್ರಕಾರ ತೋರುವದಿಲ್ಲವೇನೋ, ಒಂದು ವೇಳೆ ನಿಮ್ಮಲ್ಲಿ ಜಗಳ ಹೊಟ್ಟೆಕಿಚ್ಚು ದ್ವೇಷ ಸ್ವಾರ್ಥಬುದ್ಧಿ ಚಾಡಿಹೇಳುವದು ಕಿವಿಯೂದುವದು ಉಬ್ಬಿಕೊಳ್ಳುವದು ಕಲಹ ಎಬ್ಬಿಸುವದು ಇವುಗಳು ಕಾಣಬರುವದೋ ಏನೋ ನನಗೆ ಸಂಶಯ ಉಂಟು.


ತುಂಟನು ಜಗಳ ಬಿತ್ತುತ್ತಾನೆ; ಚಾಡಿಕೋರನು ವಿುತ್ರರನ್ನು ಅಗಲಿಸುತ್ತಾನೆ.


ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು; ಚಾಡಿಕೋರನು ಇಲ್ಲದಿದ್ದರೆ ಜಗಳ ಶಮನವಾಗುವದು.


ನನ್ನ ಹಗೆಯವರೆಲ್ಲರು ನನಗೆ ವಿರೋಧವಾಗಿ ಕಿವಿಗಳಲ್ಲಿ ಗುಜುಗುಜು ಮಾತಾಡಿಕೊಳ್ಳುತ್ತಾರೆ; ನನಗೆ ಕೇಡನ್ನು ಕಲ್ಪಿಸುತ್ತಾರೆ.


ಇದು ಶಾಸ್ತ್ರದಲ್ಲಿ ಬರೆದಿರುವ ಮಾತುಗಳಿಗೆ ಸರಿಯಾಗಿದೆ; ಅವು ಯಾವವಂದರೆ - ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ;


ಆದರೆ ನಾನು ನಿಮಗೆ ಹೇಳುವದೇನಂದರೆ - ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವದಕ್ಕೆ ಕಾರಣನಾಗುತ್ತಾನೆ ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರಮಾಡಿದವನಾಗಿದ್ದಾನೆ.


ಹಾಗೆಯೇ ಸಭಾಸೇವಕಿಯರಾದ ಸ್ತ್ರೀಯರೂ ಗೌರವವುಳ್ಳವರಾಗಿರಬೇಕು; ಚಾಡಿ ಹೇಳುವವರಾಗಿರದೆ ಮದ್ಯಾಸಕ್ತಿಯಿಲ್ಲದವರಾಗಿಯೂ ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು.


ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಕಾಲಕಳೆಯುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆಮಾಡುವವರೂ ಆಗಿದ್ದೆವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು