ರೋಮಾಪುರದವರಿಗೆ 1:1 - ಕನ್ನಡ ಸತ್ಯವೇದವು J.V. (BSI)1 ಯೇಸು ಕ್ರಿಸ್ತನ ದಾಸನೂ ಅಪೊಸ್ತಲನಾಗುವದಕ್ಕೆ ಕರೆಯಲ್ಪಟ್ಟವನೂ ದೇವರ ಸುವಾರ್ತೆಯನ್ನು ಸಾರುವದಕ್ಕೆ ನೇವಿುಸಲ್ಪಟ್ಟವನೂ ಆಗಿರುವ ಪೌಲನು ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಯೇಸು ಕ್ರಿಸ್ತನ ದಾಸನೂ, ಅಪೊಸ್ತಲನಾಗುವುದಕ್ಕೆ ಕರೆಯಲ್ಪಟ್ಟವನೂ, ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಿಸಲ್ಪಟ್ಟವನೂ ಆಗಿರುವ ಪೌಲನು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1-7 ದೇವರಿಗೆ ಅತ್ಯಂತ ಪ್ರಿಯರು ಹಾಗು ದೇವಜನರಾಗಲು ಕರೆಹೊಂದಿದವರು ಆದ ರೋಮ್‍ನಗರ ನಿವಾಸಿಗಳೆಲ್ಲರಿಗೆ: ಕ್ರಿಸ್ತಯೇಸುವಿನ ದಾಸನೂ ಪ್ರೇಷಿತನಾಗಲು ಕರೆಹೊಂದಿದವನೂ ದೇವರ ಶುಭಸಂದೇಶವನ್ನು ಸಾರಲು ನೇಮಕಗೊಂಡವನೂ ಆದ ಪೌಲನು ಬರೆಯುವ ಪತ್ರ: ನಮ್ಮ ತಂದೆಯಾದ ದೇವರು ಹಾಗು ಪ್ರಭುವಾದ ಯೇಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಕ್ರಿಸ್ತ ಯೇಸುವಿನ ಸೇವಕನಾದ ಪೌಲನು ಬರೆಯುವ ಪತ್ರ. ದೇವರು ನನ್ನನ್ನು ಅಪೊಸ್ತಲನಾಗುವುದಕ್ಕೆ ಕರೆದನು. ದೇವರ ಸುವಾರ್ತೆಯನ್ನು ಎಲ್ಲಾ ಜನರಿಗೆ ತಿಳಿಸುವುದಕ್ಕಾಗಿ ನಾನು ಆರಿಸಲ್ಪಟ್ಟೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನಾಗುವುದಕ್ಕೆ ಕರೆಹೊಂದಿದವನೂ ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಗೊಂಡವನೂ ಆಗಿರುವ ಪೌಲನು ಬರೆಯುವ ಪತ್ರ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್1 ಮಿಯಾ ಪಾವ್ಲು ಜೆಜು ಕ್ರಿಸ್ತಾಚೊ ಎಕ್ ಸೆವಕ್ ಅನಿ ಅಪ್ನಾಚಿ ಬರಿ ಖಬರ್ ಸಾಂಗುಕ್ ಮನುನ್ ದೆವಾನ್ ಎಚುನ್ ಕಾಡಲ್ಲೊ ಎಕ್ ಅಪೊಸ್ತಲ್. ಅಧ್ಯಾಯವನ್ನು ನೋಡಿ |
ದೇವರ ದಾಸನೂ ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು ನಮ್ಮೆಲ್ಲರಿಗೆ ಹುದುವಾಗಿರುವ ನಂಬಿಕೆಯ ಸಂಬಂಧದಲ್ಲಿ ನನ್ನ ನಿಜಕುಮಾರನಾದ ತೀತನಿಗೆ ಬರೆಯುವದೇನಂದರೆ - ತಂದೆಯಾದ ದೇವರಿಂದಲೂ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಶಾಂತಿಯೂ ಆಗಲಿ. ದೇವರಾದುಕೊಂಡವರ ನಂಬಿಕೆಯೂ ಭಕ್ತಿಯನ್ನುಂಟುಮಾಡುವ ಸತ್ಯದ ಪರಿಜ್ಞಾನವೂ ವೃದ್ಧಿಯಾಗುವದಕ್ಕೋಸ್ಕರವೇ ಅಪೊಸ್ತಲನಾಗಿದ್ದೇನೆ. ಆ ನಂಬಿಕೆಗೂ ಸತ್ಯದ ಪರಿಜ್ಞಾನಕ್ಕೂ ನಿತ್ಯಜೀವದ ನಿರೀಕ್ಷೆಯೇ ಆಧಾರವಾಗಿದೆ. ಸುಳ್ಳಾಡದ ದೇವರು ಆ ನಿತ್ಯಜೀವವನ್ನು ಕೊಡುತ್ತೇನೆಂದು ಅನಾದಿಕಾಲದಲ್ಲಿ ವಾಗ್ದಾನಮಾಡಿ ತನ್ನ ಕ್ಲುಪ್ತ ಸಮಯದಲ್ಲಿ ವಾಗ್ದಾನ ನೆರವೇರಿಸಿ ಪ್ರಸಂಗದ ಮೂಲಕ ಪ್ರಕಟಿಸಿದನು. ಆ ಪ್ರಸಂಗೋದ್ಯೋಗವು ನಮ್ಮ ರಕ್ಷಕನಾದ ದೇವರ ಅಪ್ಪಣೆಯ ಪ್ರಕಾರ ನನಗೆ ಒಪ್ಪಿಸಲ್ಪಟ್ಟದೆ.
ಅನಾದಿಯಾಗಿ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಗಳ ಗ್ರಂಥಗಳ ಮೂಲಕ ಅನ್ಯಜನರೆಲ್ಲರಿಗೆ ನಂಬಿಕೆಯೆಂಬ ವಿಧೇಯತ್ವವನ್ನು ಉಂಟುಮಾಡುವದಕ್ಕೋಸ್ಕರ ತಿಳಿಸಲ್ಪಟ್ಟಿದೆ. ಪ್ರಕಾಶಕ್ಕೆ ಬಂದಿರುವ ಈ ಮರ್ಮಕ್ಕೆ ಅನುಸಾರ ಅಂದರೆ ಯೇಸು ಕ್ರಿಸ್ತನ ವಿಷಯವಾದಂಥ ನಾನು ಸಾರುವಂಥ ಸುವಾರ್ತೆಗನುಸಾರ ನಿಮ್ಮನ್ನು ಸ್ಥಿರಪಡಿಸುವದಕ್ಕೆ ಶಕ್ತನಾಗಿರುವ