Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೂತಳು 4:3 - ಕನ್ನಡ ಸತ್ಯವೇದವು J.V. (BSI)

3 ಆಗ ಅವನು ಆ ಸಮೀಪಬಂಧುವಿಗೆ - ಮೋವಾಬ್‍ದೇಶದಿಂದ ಹಿಂದಿರುಗಿ ಬಂದಿರುವ ನೊವೊವಿುಯು ಎಲೀಮೆಲೆಕನ ಪಾಲಿಗೆ ಬಂದ ಹೊಲವನ್ನು ಮಾರಿಬಿಡಬೇಕೆಂದಿರುತ್ತಾಳೆ. ನಾನು ನಿನಗೆ ಹೇಳಬೇಕೆಂದಿರುವದೇನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಗ ಅವನು ಆ ಸಮೀಪಬಂಧುವಿಗೆ, “ಮೋವಾಬ್ ದೇಶದಿಂದ ಹಿಂದಿರುಗಿ ಬಂದಿರುವ ನವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನ ಪಾಲಿಗೆ ಬಂದ ಹೊಲವನ್ನು ಮಾರಬೇಕೆಂದಿದ್ದಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಆಮೇಲೆ ಬೋವಜನು ಹಿರಿಯರಲ್ಲಿ ಹತ್ತುಮಂದಿಯನ್ನು ಕರೆಸಿದನು. ಅವರೂ ಅಲ್ಲಿಗೆ ಬಂದು ಕುಳಿತುಕೊಂಡರು. ಅನಂತರ ಬೋವಜನು ಆ ನೆಂಟನಿಗೆ, “ನಮಗೆ ಸ್ವಂತದವನಾದ ಎಲಿಮೆಲೆಕನಿಗೆ ಸೇರಿದ ಒಂದು ತುಂಡು ಹೊಲ ಇದೆಯಲ್ಲವೇ? ಅದನ್ನು ಮೋವಾಬ್ ನಾಡಿನಿಂದ ಹಿಂದಕ್ಕೆ ಬಂದಿರುವ ನವೊಮಿಯು ಮಾರಬೇಕೆಂದಿದ್ದಾಳೆ. ಇದನ್ನು ನಿನಗೆ ತಿಳಿಸಬೇಕೆನಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಆಗ ಬೋವಜನು ಆ ಸಮೀಪಬಂಧುವಿನೊಡನೆ ಮಾತಾಡಿ, “ನೊವೊಮಿಯು ಮೋವಾಬ್ ಬೆಟ್ಟಪ್ರದೇಶದಿಂದ ಹಿಂದಿರುಗಿ ಬಂದಿದ್ದಾಳೆ. ಅವಳು ನಮ್ಮ ಸಂಬಂಧಿಯಾದ ಎಲೀಮೆಲೆಕನ ಹೊಲವನ್ನು ಮಾರುತ್ತಿದ್ದಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆಗ ಬೋವಜನು ಆ ವಿಮೋಚಕ ಬಂಧುವಿಗೆ ಹೇಳಿದ್ದೇನೆಂದರೆ, “ಮೋವಾಬ್ ಸೀಮೆಯಿಂದ ತಿರುಗಿ ಬಂದ ನೊವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನಿಗೆ ಇದ್ದ ಹೊಲದ ಪಾಲನ್ನು ಮಾರಿಬಿಡಬೇಕೆಂದಿರುತ್ತಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೂತಳು 4:3
5 ತಿಳಿವುಗಳ ಹೋಲಿಕೆ  

ಹೆಮ್ಮೆಯ ಫಲವು ಕಲಹವೇ; ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ.


ದಯಾಳುವಾಗಿ ಧನಸಹಾಯಮಾಡುವವನೂ ತನ್ನ ಕಾರ್ಯಗಳನ್ನು ನೀತಿಯಿಂದ ನಡಿಸುವವನೂ ಭಾಗ್ಯವಂತನು.


ನಿಮ್ಮ ಸಹೋದರರಲ್ಲಿ ಒಬ್ಬನು ಬಡವನಾಗಿ ತನ್ನ ಭೂಸ್ಥಿತಿಯಲ್ಲಿ ಏನಾದರೂ ಮಾರಿಕೊಂಡರೆ ಅವನ ಸಮೀಪವಾದ ಬಂಧುವು ಅದನ್ನು ಬಿಡಿಸಿಕೊಳ್ಳಬೇಕು.


ಆ ಮನುಷ್ಯನಿಗೆ ಎಲೀಮೆಲೆಕನೆಂದೂ ಅವನ ಹೆಂಡತಿಗೆ ನೊವೊವಿುಯೆಂದೂ ಇಬ್ಬರು ಮಕ್ಕಳಿಗೆ ಮಹ್ಲೋನ್, ಕಿಲ್ಯೋನ್ ಎಂದೂ ಹೆಸರು. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇವಿುನವರಾದ ಇವರು ಬಂದು ಮೋವಾಬ್ ದೇಶದಲ್ಲಿ ಪ್ರವಾಸವಾಗಿದ್ದಾಗ


ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾಗಿರುವ ಹನಮೇಲನು ನಿನ್ನ ಬಳಿಗೆ ಬಂದು - ಅನಾತೋತಿನಲ್ಲಿರುವ ನನ್ನ ಹೊಲವನ್ನು ಕೊಂಡುಕೋ; ಪರಾಧೀನವಾಗದಂತೆ ಅದನ್ನು ಕೊಂಡುಕೊಳ್ಳುವ ಹಕ್ಕು ನಿನ್ನದೇ ಎಂದು ಹೇಳುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು