Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೂತಳು 3:9 - ಕನ್ನಡ ಸತ್ಯವೇದವು J.V. (BSI)

9 ಅವನು ಆಕೆಯನ್ನು - ನೀನು ಯಾರು ಎಂದು ಕೇಳಲು ಆಕೆಯು - ನಾನು ನಿನ್ನ ದಾಸಿಯಾದ ರೂತಳು. ನೀನು ಸಮೀಪಬಂಧುವಾಗಿರುವದರಿಂದ ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಹೆದರಿ ಆಕೆಯನ್ನು “ನೀನು ಯಾರು?” ಎಂದು ಕೇಳಲು ಆಕೆಯು “ನಾನು ನಿನ್ನ ದಾಸಿಯಾದ ರೂತಳು, ನೀನು ಸಮೀಪಬಂಧುವಾಗಿರುವುದರಿಂದ ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು” ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ನೀನು ಯಾರು?” ಎಂದು ಬೋವಜನು ಕೇಳಿದನು. “ನಾನು ನಿಮ್ಮ ದಾಸಿಯಾದ ರೂತಳು. ನೀನು ನನ್ನ ಸಂರಕ್ಷಕ. ನಿನ್ನ ಹೊದಿಕೆಯನ್ನು ನನ್ನ ಮೇಲೆ ಹಾಕು” ಎಂದು ಅವಳು ಬೇಡಿಕೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಆಗ ಅವನು, “ನೀನು ಯಾರು?” ಎಂದನು. ಅದಕ್ಕವಳು, “ನಾನು ನಿಮ್ಮ ದಾಸಿಯಾದ ರೂತಳು. ನೀವು ನಿಮ್ಮ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕಿರಿ. ಏಕೆಂದರೆ ನೀವು ನನ್ನನ್ನು ವಿಮೋಚಿಸತಕ್ಕ ಹತ್ತಿರ ಸಂಬಂಧಿಕನು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೂತಳು 3:9
10 ತಿಳಿವುಗಳ ಹೋಲಿಕೆ  

ನಾನು ಹಾದುಹೋಗುತ್ತಾ ನಿನ್ನನ್ನು ನೋಡಲು ಇಗೋ, ನೀನು ಮದುವೆಗೆ ಸಿದ್ಧಳಾಗಿದ್ದಿ; ಆಗ ನಾನು ನನ್ನ ಹೊದಿಕೆಯ ನೆರಿಗೆಯನ್ನು ನಿನ್ನ ಮೇಲೆ ಹಾಕಿ ನಿನ್ನ ಮಾನವನ್ನು ಕಾಪಾಡಿದೆನು; ಇದಲ್ಲದೆ ನಾನು ನಿನಗೆ ಮಾತುಕೊಟ್ಟು ಒಡಂಬಡಿಕೆ ಮಾಡಿಕೊಂಡದರಿಂದ ನೀನು ನನ್ನವಳಾದಿ; ಇದು ಕರ್ತನಾದ ಯೆಹೋವನ ನುಡಿ.


ಆಗ ನೊವೊವಿುಯು - ಸತ್ತವರಿಗೂ ಬದುಕುವವರಿಗೂ ಬಿಡದೆ ದಯೆತೋರಿಸುತ್ತಿರುವ ಇವನು ಯೆಹೋವನಿಂದ ಆಶೀರ್ವಾದ ಹೊಂದಲಿ ಎಂದು ಹೇಳಿ, ಆ ಮನುಷ್ಯನು ತಮ್ಮ ಸಂಬಂಧಿಕನೆಂದೂ ಸಮೀಪಬಂಧುಗಳಲ್ಲೊಬ್ಬನೆಂದೂ ರೂತಳಿಗೆ ತಿಳಿಸಿದಳು.


ನಾನು ಸಮೀಪ ಬಂಧುವೆಂಬದು ನಿಜ; ಆದರೂ ನನಗಿಂತ ಸಮೀಪನಾದವನು ಒಬ್ಬನಿರುತ್ತಾನೆ.


ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.


ಆಕೆ ಎದ್ದು ನಮಸ್ಕಾರಮಾಡಿ ಮಾತಾಡಿಸಿದವನಿಗೆ - ನಿನ್ನ ದಾಸಿಯಾದ ನಾನು ನನ್ನ ಸ್ವಾವಿುಯ ಸೇವಕರ ಪಾದಗಳನ್ನು ತೊಳೆಯುವ ಸೇವಕಿಯಾಗುವದಕ್ಕೆ ಸಿದ್ಧಳಾಗಿದ್ದೇನೆ ಎಂದು ಉತ್ತರಕೊಟ್ಟು


ಮಧ್ಯರಾತ್ರಿಯಲ್ಲಿ ಆ ಮನುಷ್ಯನು ಹೆದರಿ ಬೊಗ್ಗಿನೋಡಿ ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವ ಹೆಂಗಸನ್ನು ಕಂಡನು.


ಆಗ ಅವನು - ನನ್ನ ಮಗಳೇ, ಯೆಹೋವನಿಂದ ನಿನಗೆ ಆಶೀರ್ವಾದವಾಗಲಿ; ನೀನು ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರನ್ನು ನೋಡಿ ಹೋಗಲಿಲ್ಲ. ಈಗ ನಿನ್ನ ಪತಿಭಕ್ತಿಯು ಮುಂಚಿಗಿಂತ ವಿಶೇಷವಾಗಿ ಪ್ರತ್ಯಕ್ಷವಾಯಿತು.


ನಿನಗೆ ಅದನ್ನು ಕೊಂಡುಕೊಳ್ಳುವ ಮನಸ್ಸಿದ್ದರೆ ಇಲ್ಲಿ ಕೂತಿರುವ ಊರಿನ ಹಿರಿಯರ ಮುಂದೆಯೇ ಕೊಂಡುಕೋ. ಇಲ್ಲದಿದ್ದರೆ ನನಗೆ ತಿಳಿಸು; ನನಗೆ ಗೊತ್ತಾಗಬೇಕು. ನೀನೂ ನಿನ್ನ ತರುವಾಯ ನಾನೂ ಅಲ್ಲದೆ ಅದನ್ನು ಕೊಂಡುಕೊಳ್ಳತಕ್ಕ ಬಾಧ್ಯರು ಬೇರೆ ಯಾರೂ ಇಲ್ಲ ಎಂದು ಹೇಳಲು ಅವನು - ನಾನೇ ಕೊಂಡುಕೊಳ್ಳುತ್ತೇನೆ ಅಂದನು.


ಆ ಸಮೀಪಬಂಧುವು - ಹಾಗಾದರೆ ಅದನ್ನು ಕೊಂಡುಕೊಂಡು ನನ್ನ ಆಸ್ತಿಯನ್ನು ನಷ್ಟಪಡಿಸಿಕೊಳ್ಳಲಾರೆನು; ಆ ಬಾಧ್ಯತೆಯನ್ನು ನೀನೇ ವಹಿಸಿಕೋ; ನನ್ನಿಂದಾಗದು ಅಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು