Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 7:12 - ಕನ್ನಡ ಸತ್ಯವೇದವು J.V. (BSI)

12 ಮತ್ತು ಜನರ ಗುಂಪುಗಳಲ್ಲಿ ಆತನ ವಿಷಯವಾಗಿ ಬಹಳ ಗುಜುಗುಜು ಮಾತು ನಡೆಯುತ್ತಿತ್ತು. ಕೆಲವರು - ಆತನು ಒಳ್ಳೆಯವನು ಅಂದರು; ಇನ್ನು ಕೆಲವರು - ಅಲ್ಲ, ಜನರನ್ನು ತಪ್ಪಾದ ಮಾರ್ಗಕ್ಕೆ ಎಳೆಯುತ್ತಾನೆ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಜನರು ಗುಂಪುಗಳಲ್ಲಿ ಆತನ ವಿಷಯವಾಗಿ ಗೊಣಗುಟ್ಟುತಿದ್ದರು. ಕೆಲವರು “ಆತನು ಒಳ್ಳೆಯ ಮನುಷ್ಯನು” ಎಂದರು, ಇನ್ನು ಕೆಲವರು “ಇಲ್ಲ ಆತನು ಜನರಿಗೆ ಮೋಸ ಮಾಡುತ್ತಾನೆ” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ‘ಆತ ಒಳ್ಳೆಯ ವ್ಯಕ್ತಿ’ ಎಂದು ಕೆಲವರು ಹೇಳಿದರೆ, ‘ಇಲ್ಲ, ಆತನು ಜನರನ್ನು ಅಡ್ಡದಾರಿಗೆ ಎಳೆಯುತ್ತಿದ್ದಾನೆ,’ ಎನ್ನುತ್ತಿದ್ದರು ಇತರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಅಲ್ಲಿ ಜನರ ದೊಡ್ಡ ಗುಂಪೊಂದು ನೆರೆದಿದ್ದಿತು. ಆ ಜನರಲ್ಲಿ ಅನೇಕರು ಯೇಸುವಿನ ಬಗ್ಗೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿದ್ದರು. “ಆತನು ಒಳ್ಳೆಯವನು” ಎಂದು ಕೆಲವರು ಹೇಳಿದರು. ಇತರರು, “ಇಲ್ಲ, ಆತನು ಜನರನ್ನು ಮೋಸಗೊಳಿಸುತ್ತಿದ್ದಾನೆ” ಎಂದು ಟೀಕಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಜನರ ಗುಂಪುಗಳಲ್ಲಿ ಯೇಸುವಿನ ವಿಷಯವಾಗಿ ಬಹಳ ಗೊಣಗುಟ್ಟುವಿಕೆ ಇತ್ತು. ಏಕೆಂದರೆ ಕೆಲವರು, “ಆತ ಒಳ್ಳೆಯ ಮನುಷ್ಯ,” ಎಂದರು. ಬೇರೆ ಕೆಲವರು, “ಇಲ್ಲ ಆತ ಜನರಿಗೆ ಮೋಸಮಾಡುತ್ತಾನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ಥೈ ಲೊಕಾಂಚ್ಯಾ ತಾಂಡ್ಯಾತ್ ಜೆಜುಚ್ಯಾ ವಿಶಯಾತ್ ಲೈ ಪುಸ್ಪುಸುನ್ ಬೊಲುಲಾಗಲ್ಲ್ಯಾನಿ. ಉಲ್ಲ್ಯಾ ಲೊಕಾನಿ “ತೊ ಬರೊ ಮಾನುಸ್” ಮಟ್ಲ್ಯಾನಿ ಅನಿ ಹುರಲ್ಲ್ಯಾನಿ, “ನಾ, ತೊ ಲೊಕಾಕ್ನಿ ಪಸ್ವುಲಾ” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 7:12
20 ತಿಳಿವುಗಳ ಹೋಲಿಕೆ  

ಆ ಫರಿಸಾಯರಲ್ಲಿ ಕೆಲವರು - ಈ ಮನುಷ್ಯನು ದೇವರಿಂದ ಬಂದವನಲ್ಲ; ಅವನು ಸಬ್ಬತ್‍ದಿವಸವನ್ನು ಲಕ್ಷ್ಯಮಾಡುವದಿಲ್ಲವಲ್ಲಾ ಅಂದರು. ಇನ್ನು ಕೆಲವರು - ಇಂಥ ಮಹತ್ತುಗಳನ್ನು ಮಾಡುವದು ಭಕ್ತಿಹೀನನ ಕೈಯಿಂದ ಹೇಗಾದೀತು? ಅಂದರು. ಹೀಗೆ ಅವರಲ್ಲಿ ಭೇದವಾಯಿತು.


ಅದಕ್ಕೆ ಫರಿಸಾಯರು - ನೀವೂ ಮರುಳಾದಿರಾ?


ಜನರು ಆತನ ವಿಷಯವಾಗಿ ಗುಜುಗುಜು ಆಡಿದ ಈ ಮಾತುಗಳನ್ನು ಫರಿಸಾಯರು ಕೇಳಲು ಮಹಾಯಾಜಕರೂ ಫರಿಸಾಯರೂ ಆತನನ್ನು ಹಿಡಿಯುವದಕ್ಕೆ ಓಲೇಕಾರರನ್ನು ಕಳುಹಿಸಿದರು.


ಗುಣುಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ.


ನೀತಿವಂತರಿಗೋಸ್ಕರ ಯಾರಾದರೂ ಪ್ರಾಣಕೊಡುವದು ಅಪರೂಪ. ಉಪಕಾರಿಗೋಸ್ಕರ ಪ್ರಾಣಕೊಡುವದಕ್ಕೆ ಯಾವನಾದರೂ ಧೈರ್ಯಮಾಡಿದರೂ ಮಾಡಾನು.


ಅವರು - ನೀನೂ ಗಲಿಲಾಯದವನೋ? ಗಲಿಲಾಯದಲ್ಲಿ ಪ್ರವಾದಿ ಹುಟ್ಟುವದೇ ಇಲ್ಲ, ವಿಚಾರಿಸಿ ನೋಡು ಅಂದರು.


ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ - ಲೋಕಕ್ಕೆ ಬರಬೇಕಾದ ಪ್ರವಾದಿ ಈತನೇ ನಿಜ ಎಂದು ಹೇಳಿಕೊಂಡರು.


ಅರಿಮಥಾಯವೆಂಬ ಯೆಹೂದ್ಯರದೊಂದು ಪಟ್ಟಣದ ಒಬ್ಬ ಮನುಷ್ಯನಿದ್ದನು; ಅವನ ಹೆಸರು ಯೋಸೇಫನು. ಅವನು ಹಿರೀಸಭೆಯವನು, ಉತ್ತಮನು, ಸತ್ಪುರುಷನು, ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನು; ಅವನು ಹಿರೀಸಭೆಯವರ ಆಲೋಚನೆಗೂ ಕೃತ್ಯಕ್ಕೂ ಸಮ್ಮತಿ ಪಟ್ಟಿರಲಿಲ್ಲ.


ಶತಾಧಿಪತಿಯು ನಡೆದ ಸಂಗತಿಯನ್ನು ನೋಡಿ - ಈ ಮನುಷ್ಯನು ಸತ್ಪುರುಷನೇ ನಿಜ ಎಂದು ದೇವರನ್ನು ಕೊಂಡಾಡಿದನು.


ಯೇಸು ಅವನಿಗೆ - ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.


ಎಲ್ಲರು ಭಯಹಿಡಿದವರಾಗಿ - ಮಹಾ ಪ್ರವಾದಿಯು ನಮ್ಮಲ್ಲಿ ಎದ್ದಿದ್ದಾನೆ, ದೇವರು ತನ್ನ ಜನರಿಗೆ ದರ್ಶನವನ್ನು ಅನುಗ್ರಹಿಸಿದ್ದಾನೆ ಎಂದು ದೇವರನ್ನು ಕೊಂಡಾಡುವವರಾದರು.


ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.


ದೊರೆಯೇ, ಆ ಮೋಸಗಾರನು ಬದುಕಿದ್ದಾಗ ತಾನು ಮೂರು ದಿನದ ಮೇಲೆ ಏಳುತ್ತೇನೆ ಅಂತ ಹೇಳಿದ್ದು ನಮ್ಮ ನೆನಪಿಗೆ ಬಂತು;


ಆದರೆ ಜನರು ಆತನನ್ನು ಪ್ರವಾದಿಯೆಂದು ಎಣಿಸಿದ್ದರಿಂದ ಅವರಿಗೆ ಭಯಪಟ್ಟರು.


ಗುರುವಿನಂತೆ ಆಗುವದು ಶಿಷ್ಯನಿಗೆ ಸಾಕು, ಧಣಿಯಂತೆ ಆಗುವದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆ ಬೆಲ್ಜೆಬೂಲನೆಂದು ಹೆಸರಿಟ್ಟ ಮೇಲೆ ಆತನ ಮನೆಯವರನ್ನು ಏನಂದಾರು? ಆದರೂ ಅವರಿಗೆ ಹೆದರಬೇಡಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು