Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 18:40 - ಕನ್ನಡ ಸತ್ಯವೇದವು J.V. (BSI)

40 ಅದಕ್ಕೆ ಅವರು - ಇವನನ್ನು ಬೇಡ, ಬರಬ್ಬನನ್ನು ಬಿಟ್ಟುಕೊಡಬೇಕು ಎಂದು ತಿರಿಗಿ ಕೂಗಿ ಹೇಳಿದರು. ಈ ಬರಬ್ಬನು ಕಳ್ಳನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಅದಕ್ಕೆ ಅವರೆಲ್ಲರೂ, “ಆತನನ್ನು ಬೇಡ ನಮಗೆ ಬರಬ್ಬನನ್ನು ಬಿಟ್ಟುಕೊಡಬೇಕು” ಎಂದು ಪುನಃ ಕೂಗಿಕೊಂಡರು. ಈ ಬರಬ್ಬನು ದರೋಡೆಗಾರನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಅದಕ್ಕೆ ಅವರು, “ಬೇಡ, ಇವನು ಬೇಡ. ನಮಗೆ ಬರಬ್ಬನನ್ನು ಬಿಟ್ಟುಕೊಡಿ,” ಎಂದು ಬೊಬ್ಬೆಹಾಕಿದರು. ಬರಬ್ಬನೋ ಒಬ್ಬ ದರೋಡೆಕೋರನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಯೆಹೂದ್ಯರು, “ಇಲ್ಲ, ಅವನನ್ನಲ್ಲ! ಬರಬ್ಬನಿಗೆ ಬಿಡುಗಡೆಯಾಗಲಿ!” ಎಂದು ಕೂಗಿದರು. (ಬರಬ್ಬನು ಒಬ್ಬ ದರೋಡೆಕೋರ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಅದಕ್ಕೆ ಅವರೆಲ್ಲರೂ ತಿರುಗಿ, “ಇವನು ಬೇಡ, ನಮಗೆ ಬರಬ್ಬನನ್ನು ಬಿಟ್ಟುಕೊಡು,” ಎಂದು ಕೂಗಿಕೊಂಡರು. ಆ ಬರಬ್ಬನು ದರೋಡೆಕೋರನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

40 ತನ್ನಾ ತೆನಿ,“ನಕ್ಕೊ, ತೆಕಾ ನಕ್ಕೊ ಅಮ್ಕಾ ಬಾರಾಬ್ಬಾಸ್ ಪಾಜೆ!” ಮನುನ್ ಬೊಬ್ ಮಾರುಂಗೆತ್ ಜಬಾಬ್ ದಿಲ್ಯಾನಿ, ಬಾರಾಬ್ಬಾಸ್ ಎಕ್ ಹೊರಾಟ್ ಕರ್‍ತಲೊ ಮಾನುಸ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 18:40
8 ತಿಳಿವುಗಳ ಹೋಲಿಕೆ  

ದಂಗೆ ಕೊಲೆಗಳ ನಿವಿುತ್ತವಾಗಿ ಸೆರೆಮನೆಯಲ್ಲಿ ಬಿದ್ದ ಆ ಮನುಷ್ಯನನ್ನು ಅವರು ಕೇಳಿಕೊಳ್ಳುತ್ತಿದ್ದ ಪ್ರಕಾರ ಬಿಟ್ಟುಕೊಟ್ಟು ಯೇಸುವನ್ನು ಅವರ ಚಿತ್ತಾನುಸಾರ ಒಪ್ಪಿಸಿದನು.


ಅದಕ್ಕೆ ಪಿಲಾತನು ಜನರ ಮನಸ್ಸನ್ನು ಸಮಾಧಾನಪಡಿಸಬೇಕೆಂದು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿದನು.


ಆಗ ಬರಬ್ಬನೆಂಬವನೊಬ್ಬನಿದ್ದನು; ಇವನನ್ನು ದಂಗೆಯಲ್ಲಿ ಕೊಲೆಪಾತಕ ಮಾಡಿದ ದಂಗೆಗಾರರ ಕೂಡ ಕಟ್ಟಿಹಾಕಿದ್ದರು.


ಆಗ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿದನು.


ಆ ಕಾಲದಲ್ಲಿ ಬರಬ್ಬನೆಂಬ ಪ್ರಸಿದ್ಧನಾದ ಒಬ್ಬ ಸೆರೆಯವನು ಸಿಕ್ಕಿಬಿದ್ದನು.


ಅದೇ ಗಳಿಗೆಯಲ್ಲಿ ಯೇಸು ಗುಂಪುಗುಂಪಾಗಿ ಕೂಡಿದ್ದ ಜನರಿಗೆ - ಕಳ್ಳನನ್ನು ಹಿಡಿಯುವದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ನನ್ನನ್ನು ಹಿಡಿಯುವದಕ್ಕೆ ಬಂದಿರಾ? ನಾನು ದಿನಾಲು ದೇವಾಲಯದಲ್ಲಿ ಕೂತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು