Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 12:9 - ಕನ್ನಡ ಸತ್ಯವೇದವು J.V. (BSI)

9 ಯೆಹೂದ್ಯರ ಜನಸಮೂಹವು ಆತನು ಅಲ್ಲಿ ಇದ್ದಾನೆಂದು ತಿಳಿದು ಯೇಸುವನ್ನು ನೋಡುವದಕ್ಕಾಗಿ ಮಾತ್ರವಲ್ಲದೆ ಆತನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನು ಸಹ ನೋಡಬೇಕೆಂಬದಾಗಿ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಯೆಹೂದ್ಯರ ಗುಂಪು ಆತನು ಅಲ್ಲಿ ಇದ್ದಾನೆಂದು ತಿಳಿದು, ಯೇಸುವನ್ನು ನೋಡುವುದಕ್ಕಾಗಿ ಮಾತ್ರವಲ್ಲದೆ, ಆತನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನೂ ಸಹ ನೋಡಬೇಕೆಂಬುದಾಗಿ ಅಲ್ಲಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಯೇಸು ಸ್ವಾಮಿ ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒಂದು ದೊಡ್ಡ ಗುಂಪು ಬಂದಿತು. ಯೇಸುವನ್ನು ಮಾತ್ರವಲ್ಲ, ಅವರು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಲಾಸರನನ್ನೂ ಕಾಣಲು ಆ ಜನರು ಅಲ್ಲಿಗೆ ಬಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೇಸು ಬೆಥಾನಿಯಲ್ಲಿದ್ದಾನೆ ಎಂಬ ಸುದ್ದಿಯನ್ನು ಅನೇಕ ಯೆಹೂದ್ಯರು ಕೇಳಿ ಆತನನ್ನೂ ಲಾಜರನನ್ನೂ ನೋಡಬೇಕೆಂದು ಅಲ್ಲಿಗೆ ಹೋದರು. ಯೇಸುವಿನಿಂದ ಜೀವಂತವಾಗಿ ಎಬ್ಬಿಸಲ್ಪಟ್ಟವನೇ ಲಾಜರನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯೇಸು ಅಲ್ಲಿರುವುದನ್ನು ಯೆಹೂದ್ಯರ ದೊಡ್ಡ ಗುಂಪು ತಿಳಿದು, ಅವರನ್ನು ಮಾತ್ರವಲ್ಲ, ಯೇಸು ಮರಣದಿಂದ ಎಬ್ಬಿಸಿದ ಲಾಜರನನ್ನೂ ಕಾಣಲು ಬಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

9 ಲೈ ಲೊಕಾನಿ ಜೆಜು ಬೆಥನಿಯಾತ್ ಹಾಯ್ ಮನ್ತಲೆ ಆಯ್ಕಲ್ಯಾನಿ ತಸೆಮನುನ್ ತ್ಯಾನಿ ಥೈ ಗೆಲ್ಯಾನಿ, ಖಾಲಿ ಜೆಜುಸಾಟ್ನಿ ಎವ್ಡೆಚ್ ನ್ಹಯ್ ಲಾಜರಾಕ್ ಬಗುಕ್ ಮನುನ್ ಥೈ ಗೆಲ್ಲ್ಯಾನಿ, ತೆಕಾ ಜೆಜುನ್ ಮರಲ್ಲ್ಯಾಕ್ ಝಿತ್ತೊ ಕರುನ್ ಉಟ್ವಲ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 12:9
8 ತಿಳಿವುಗಳ ಹೋಲಿಕೆ  

ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು; ಮತ್ತು ಕ್ಷೇಮಹೊಂದಿದ ಆ ಮನುಷ್ಯನು ಅವರ ಕೂಡ ನಿಂತಿರುವದನ್ನು ನೋಡಿ ಪ್ರತಿಯಾಗಿ ಏನೂ ಮಾತಾಡಲಾರದೆ ಇದ್ದರು.


ದಾವೀದನೇ ಆತನನ್ನು ಒಡೆಯನೆಂದು ಹೇಳಿರುವಲ್ಲಿ ಆತನು ಅವನಿಗೆ ಮಗನಾಗುವದು ಹೇಗೆ? ಎಂದು ಕೇಳಿದನು.


ಪಸ್ಕಹಬ್ಬವು ಇನ್ನು ಆರು ದಿವಸ ಮುಂದೆ ಇರಲಾಗಿ ಯೇಸು ಬೇಥಾನ್ಯಕ್ಕೆ ಬಂದನು. ಯೇಸುವು ಸತ್ತವರೊಳಗಿಂದ ಎಬ್ಬಿಸಿದ ಲಾಜರನು ಅಲ್ಲಿದ್ದನು.


ಆದರೆ ಮಹಾಯಾಜಕರು ಲಾಜರನನ್ನೂ ಕೊಲ್ಲಬೇಕೆಂದು ಆಲೋಚಿಸಿದರು.


ಮರುದಿವಸ ಜಾತ್ರೆಗೆ ಬಂದಿದ್ದ ಜನಸಮೂಹವು ಯೇಸು ಯೆರೂಸಲೇವಿುಗೆ ಬರುತ್ತಾನೆಂದು ಕೇಳಿ ಖರ್ಜೂರದ ಗರಿಗಳನ್ನು ತಕ್ಕೊಂಡು


ಇದಲ್ಲದೆ ಆತನು ಲಾಜರನನ್ನು ಸಮಾಧಿಯೊಳಗಿಂದ ಕರೆದು ಬದುಕಿಸಿದ ವೇಳೆಯಲ್ಲಿ ಆತನ ಸಂಗಡ ಇದ್ದ ಜನರು ಅದನ್ನು ಸಾರುತ್ತಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು