Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಯೇಲ 1:6 - ಕನ್ನಡ ಸತ್ಯವೇದವು J.V. (BSI)

6 ಇಗೋ, ನನ್ನ ದೇಶದ ಮೇಲೆ ಅಸಂಖ್ಯಾತ ಪ್ರಬಲಸೈನ್ಯವು ಬಂದಿದೆ; ಅದರ ಹಲ್ಲುಗಳು ಸಿಂಹದ ಹಲ್ಲುಗಳೇ, ಅದರ ಕೋರೆಗಳು ಮೃಗರಾಜನ ಕೋರೆಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ನನ್ನ ದೇಶದ ಮೇಲೆ ಬಲಿಷ್ಠವಾದ ಹಾಗೂ ಅಸಂಖ್ಯಾತವಾದ ಒಂದು ಜನಾಂಗವು ಏರಿ ಬಂದಿದೆ; ಅದರ ಹಲ್ಲುಗಳು ಸಿಂಹದ ಹಲ್ಲುಗಳೇ; ಅದರ ಕೋರೆ ಹಲ್ಲುಗಳು ಮೃಗರಾಜನ ಕೋರೆಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಶತ್ರುರಾಷ್ಟ್ರ ನನ್ನ ನಾಡನ್ನು ಆಕ್ರಮಿಸಿದೆ. ಆ ರಾಷ್ಟ್ರ ಪ್ರಬಲವಾದುದು; ಅದರ ಸೈನ್ಯ ಅಸಂಖ್ಯಾತವಾದುದು; ಅದರ ಹಲ್ಲುಗಳು ಸಿಂಹದ ಹಲ್ಲುಗಳು; ಅದರ ಕೋರೆಗಳು ಮೃಗರಾಜನ ಕೋರೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನನ್ನ ಜನಾಂಗಕ್ಕೆ ವಿರುದ್ಧವಾಗಿ ಬಲಶಾಲಿಯಾದ ದೊಡ್ಡ ರಾಜ್ಯವು ಯುದ್ಧಕ್ಕೆ ಬರುವದು. ಅವರು ಸೈನಿಕರನ್ನು ಲೆಕ್ಕಿಸಲು ಸಾಧ್ಯವಿಲ್ಲ. ಆ ಮಿಡತೆಗಳಂತಿರುವ ಸೈನಿಕರು ನಿಮ್ಮನ್ನು ಸೀಳಿಬಿಡುವರು. ಅವರ ಹಲ್ಲುಗಳು ಸಿಂಹದ ಹಲ್ಲಿನಂತಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು. ಅದು ಬಲವಾದದ್ದೂ, ಲೆಕ್ಕವಿಲ್ಲದ್ದೂ; ಅದರ ಕೋರೆಗಳು ಸಿಂಹದ ಹಲ್ಲುಗಳು, ಸಿಂಹಿಣಿಯ ಹಲ್ಲುಗಳು ಅದಕ್ಕೆ ಇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಯೇಲ 1:6
9 ತಿಳಿವುಗಳ ಹೋಲಿಕೆ  

ಗುಂಪುವಿುಡತೆ, ಸಣ್ಣವಿುಡತೆ, ದೊಡ್ಡವಿುಡತೆ, ಚೂರಿವಿುಡತೆ, ಅಂತು ನಾನು ನಿಮ್ಮ ಮೇಲೆ ಕಳುಹಿಸಿದ ನನ್ನ ದೊಡ್ಡ ದಂಡು ತಿಂದುಬಿಟ್ಟ ವರುಷಗಳನ್ನು ನಾನು ನಿಮಗೆ ಕಟ್ಟಿಕೊಡುವೆನು.


ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ ಭೂವಿುಯೊಳಗಿಂದ ಬಡವರನ್ನೂ ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ ಅಗಿದು ನುಂಗಿಬಿಡುವ ಮತ್ತೊಂದು ತರದವರುಂಟು.


ಅವರು ಯೆಹೋವನ ದೇಶದಲ್ಲಿ ಇನ್ನು ವಾಸಿಸರು. ಎಫ್ರಾಯೀಮ್ಯರು ಐಗುಪ್ತಕ್ಕೆ ಹಿಂದಿರುಗುವರು, ಅಶ್ಶೂರದಲ್ಲಿ ಅವರು ತಿನ್ನುವ ಆಹಾರವು ಹೊಲಸಾಗುವದು.


ನನ್ನ ಜನರ ಭೂವಿುಯ ಮೇಲೂ ಉತ್ಸಾಹಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆಗಳ ಮೇಲೂ ಮುಳ್ಳುಗಿಳ್ಳು ಹತ್ತಿಕೊಳ್ಳುವದು;


ಅದು ತನ್ನ ಪಾತ್ರವನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ಮೀರಿ ಯೆಹೂದದಲ್ಲಿಯೂ ನುಗ್ಗಿ ತುಂಬಿತುಳುಕಿ ಹಬ್ಬಿಕೊಂಡು ಕತ್ತಿನವರೆಗೂ ಏರುವದು; ಇಮ್ಮಾನುವೇಲನೇ! ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲದಲ್ಲೆಲ್ಲಾ ಮುತ್ತಿಬಿಡುವವು.


ಬುಗ್ಗೆಗಳನ್ನು ಒಣನೆಲವಾಗುವಂತೆಯೂ ಫಲಭೂವಿುಯನ್ನು ಉಪ್ಪುನೆಲವಾಗುವಂತೆಯೂ ಮಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು