Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಯೇಲ 1:20 - ಕನ್ನಡ ಸತ್ಯವೇದವು J.V. (BSI)

20 ಭೂಜಂತುಗಳೂ ನಿನ್ನ ಕಡೆಗೆ ತಲೆಯೆತ್ತುತ್ತವೆ; ತೊರೆಗಳು ಬತ್ತಿಹೋಗಿವೆ, ಕಾಡಿನ ಹುಲ್ಗಾವಲನ್ನು ಕಿಚ್ಚು ನುಂಗಿಬಿಟ್ಟಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. ನೀರಿನ ಹೊಳೆಗಳು ಬತ್ತಿಹೋಗಿವೆ. ಕಾಡಿನ ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಕಾಡುಮೃಗಗಳು ನಿನ್ನ ಕಡೆಗೆ ತಲೆಯೆತ್ತಿವೆ; ಹಳ್ಳಕೊಳ್ಳಗಳು ಬತ್ತಿಹೋಗಿವೆ; ಹುಲ್ಲುಗಾವಲನ್ನು ಕಾಳ್ಗಿಚ್ಚು ದಹಿಸಿಬಿಟ್ಟಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಕಾಡುಪ್ರಾಣಿಗಳೂ ಬಾಯಾರಿ ನಿನ್ನ ಕಡೆಗೆ ನೋಡುತ್ತಿವೆ. ನೀರಿನ ತೊರೆಗಳು ಬತ್ತಿಹೋಗಿವೆ. ನೀರೇ ಇಲ್ಲ. ನಮ್ಮ ಹಸಿರು ಹುಲ್ಲುಗಾವಲು ಬೆಂಕಿಯ ದೆಸೆಯಿಂದ ಮರುಭೂಮಿಯಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಕಾಡುಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. ನೀರಿನ ಹೊಳೆಗಳು ಬತ್ತಿ ಹೋಗಿವೆ. ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಯೇಲ 1:20
9 ತಿಳಿವುಗಳ ಹೋಲಿಕೆ  

ಪ್ರಾಯದ ಸಿಂಹಗಳು ಬೇಟೆಗಾಗಿ ಗರ್ಜಿಸುತ್ತವೆ; ದೇವರಿಂದ ಆಹಾರವನ್ನು ಕೇಳಿಕೊಳ್ಳುತ್ತವೆ.


ದೇಶದಲ್ಲಿ ಮಳೆಯಿಲ್ಲದ್ದರಿಂದ ಕೆಲವು ದಿವಸಗಳಾದನಂತರ ಹಳ್ಳವು ಬತ್ತಿಹೋಯಿತು.


ಆತನು ಪಶುಗಳಿಗೂ ಕೂಗುತ್ತಿರುವ ಕಾಗೇಮರಿಗಳಿಗೂ ಬೇಕಾದ ಆಹಾರಕೊಡುತ್ತಾನೆ.


[ಯೆಹೋವನೇ,] ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ; ನೀನು ಅವುಗಳಿಗೆ ಹೊತ್ತುಹೊತ್ತಿಗೆ ಆಹಾರಕೊಡುತ್ತೀ.


ತಮ್ಮ ಮರಿಗಳು ಗುಟುಕಿಲ್ಲದೆ ಅಲೆಯುತ್ತಾ ದೇವರಿಗೆ ಮೊರೆಯಿಡುವಾಗ ಕಾಗೆಗಳಿಗೆ ಆಹಾರವನ್ನು ಯಾರು ಒದಗಿಸುವರು?


ಅಹಾಬನು ಅವನಿಗೆ - ನಾವು ದೇಶಸಂಚಾರಮಾಡುತ್ತಾ ಎಲ್ಲಾ ಬುಗ್ಗೆ ಹಳ್ಳಗಳಿಗೆ ಹೋಗಿ ಅವುಗಳಲ್ಲಿ ಹುಲ್ಲು ಸಿಕ್ಕುತ್ತದೋ ನೋಡೋಣ; ಸಿಕ್ಕುವದಾದರೆ ನಮ್ಮ ಕುದುರೆಗಳೂ ಹೇಸರಕತ್ತೆಗಳೂ ಉಳಿಯುವವು; ಇಲ್ಲವಾದರೆ ಎಲ್ಲಾ ಸತ್ತುಹೋಗುವವು ಎಂದು ಹೇಳಿ


ದೇಶದಲ್ಲಿ ಮಳೆಯಿಲ್ಲದೆ ಭೂವಿುಯು ಬಿರುಕುಬಿಟ್ಟಿರುವದರಿಂದ ರೈತರು ನಾಚಿಕೆಪಟ್ಟು ಮೋರೆಮುಚ್ಚಿಕೊಳ್ಳುತ್ತಾರೆ.


ನನಗೂ ನಿನಗೂ ಮುಂಚೆ ಪುರಾತನ ಕಾಲದಿಂದಿದ್ದ ಪ್ರವಾದಿಗಳು ಅನೇಕದೇಶಗಳಿಗೂ ದೊಡ್ಡ ದೊಡ್ಡ ರಾಜ್ಯಗಳಿಗೂ ಯುದ್ಧ, ವಿಪತ್ತು, ವ್ಯಾಧಿ, ಇವುಗಳ ವಿಷಯವಾಗಿ ಸಾರುತ್ತಿದ್ದರಷ್ಟೆ.


ಅಯ್ಯೋ, ಪಶುಗಳು ಎಷ್ಟೋ ನರಳುತ್ತವೆ! ಮೇವಿಲ್ಲದ ಕಾರಣ ದನದ ಮಂದೆಗಳು ಭ್ರಮೆಗೊಂಡಿವೆ, ಕುರಿಯ ಹಿಂಡುಗಳು ದಂಡನೆಗೆ ಗುರಿಯಾಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು