Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಯೇಲ 1:19 - ಕನ್ನಡ ಸತ್ಯವೇದವು J.V. (BSI)

19 ಯೆಹೋವಾ, ನಿನಗೆ ಮೊರೆಯಿಡುತ್ತೇನೆ; ಕಾಡಿನ ಹುಲ್ಗಾವಲನ್ನು ಕಿಚ್ಚು ನುಂಗಿಬಿಟ್ಟಿದೆಯಲ್ಲಾ; ವನವೃಕ್ಷಗಳನ್ನೆಲ್ಲಾ ಬೇಗೆಯು ಸುಟ್ಟುಹಾಕಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಯೆಹೋವನೇ, ನಿನಗೆ ಮೊರೆಯಿಡುತ್ತೇನೆ; ಕಾಡಿನ ಹುಲ್ಲುಗಾವಲನ್ನು ಬೆಂಕಿಯು ನುಂಗಿಬಿಟ್ಟಿದೆ, ವನವೃಕ್ಷಗಳನ್ನೆಲ್ಲಾ ಜ್ವಾಲೆಯು ಸುಟ್ಟುಬಿಟ್ಟಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಸರ್ವೇಶ್ವರಾ, ನಿನಗೆ ಮೊರೆಯಿಡುತ್ತೇನೆ. ಹುಲ್ಲುಗಾವಲನ್ನು ಕಾಳ್ಗಿಚ್ಚು ದಹಿಸಿಬಿಟ್ಟಿದೆ; ವನವೃಕ್ಷಗಳೆಲ್ಲ ಬೆಂಕಿಪಾಲಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಯೆಹೋವನೇ, ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುತ್ತಿದ್ದೇನೆ. ನಮ್ಮ ಹಸಿರು ಹೊಲಗದ್ದೆಗಳು ಬೆಂಕಿಯಿಂದ ಮರುಭೂಮಿಯಾದವು. ಹೊಲದಲ್ಲಿದ್ದ ಮರಗಳನ್ನೆಲ್ಲಾ ಬೆಂಕಿಯು ದಹಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ. ಬೆಂಕಿಯು ಹುಲ್ಲುಗಾವಲನ್ನು ದಹಿಸಿಬಿಟ್ಟಿದೆ; ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಯೇಲ 1:19
14 ತಿಳಿವುಗಳ ಹೋಲಿಕೆ  

ನಾನು ಪರ್ವತಗಳಿಗಾಗಿ ಅತ್ತು ಗೋಳಾಡುವೆನು, ಅಡವಿಯ ಕಾವಲುಗಳಿಗಾಗಿ ಶೋಕಗೀತವನ್ನು ಹಾಡುವೆನು; ಅವು ಸುಟ್ಟುಹೋಗಿವೆ, ಯಾರೂ ಹಾದುಹೋಗರು, ದನದ ಸದ್ದು ಕಿವಿಗೆ ಬೀಳದು, ಮೃಗಪಕ್ಷಿಗಳು ತೊಲಗಿಹೋಗಿವೆ.


ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ.


ಕರ್ತನಾದ ಯೆಹೋವನು ಇನ್ನೊಂದನ್ನು ನನಗೆ ತೋರಿಸಿದನು - ಆಹಾ, ಕರ್ತನಾದ ಯೆಹೋವನು ತನ್ನ ಪಕ್ಷವಾಗಿ ವ್ಯಾಜ್ಯವಾಡುವದಕ್ಕೆ ಅಗ್ನಿಯನ್ನು ಕರೆದನು.


ನಾನಂತು ಯೆಹೋವನನ್ನು ಎದುರು ನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು,


ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯ ತೀರಿಸುವನೆಂದು ನಿಮಗೆ ಹೇಳುತ್ತೇನೆ.


ಅದರ ಮುಂಗಡೆ ಬೆಂಕಿಯು ನುಂಗಿಕೊಂಡು ಬರುತ್ತದೆ, ಹಿಂಗಡೆ ಜ್ವಾಲೆಯು ಧಗಧಗಿಸುತ್ತದೆ; ಅದು ಬರುವದಕ್ಕೆ ಮುಂಚೆ ದೇಶವು ಏದೆನ್ ಉದ್ಯಾನದಂತೆ ಕಂಗೊಳಿಸುತ್ತದೆ; ದಾಟಿಹೋದ ಮೇಲೆ ಬೆಗ್ಗಾಡಾಗಿದೆ; ಅದಕ್ಕೆ ಯಾವದೂ ತಪ್ಪಿಸಿಕೊಳ್ಳಲಾರದು.


ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು; ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು;


ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.


ದೇಶದಲ್ಲಿ ಮಳೆಯಿಲ್ಲದೆ ಭೂವಿುಯು ಬಿರುಕುಬಿಟ್ಟಿರುವದರಿಂದ ರೈತರು ನಾಚಿಕೆಪಟ್ಟು ಮೋರೆಮುಚ್ಚಿಕೊಳ್ಳುತ್ತಾರೆ.


ಆಮೋಸನು ಹೀಗೆ ಪ್ರಕಟಿಸಿದನು - ಯೆಹೋವನು ಚೀಯೋನಿನಿಂದ ಗರ್ಜಿಸಿ ಯೆರೂಸಲೇವಿುನಿಂದ ದನಿಗೈಯುವನು; ಆಗ ಕುರುಬರ ಕಾವಲುಗಳು ಗೋಳಿಡುವವು, ಕರ್ಮೆಲ್ ಬೆಟ್ಟದ ತುದಿಯು ಒಣಗುವದು.


ಕಲ್ಲು ಮರಗಳೊಡನೆ ಹಾದರಮಾಡಿ ಲಘುವೆಂದು ಭಾವಿಸಿಕೊಂಡ ತನ್ನ ಸೂಳೆತನದಿಂದ ದೇಶವನ್ನು ಅಪವಿತ್ರಪಡಿಸಿದಳು.


ನಾನು ಅವರನ್ನು ಇವುಗಳಿಗಾಗಿ ದಂಡಿಸಬಾರದೋ? ಇಂಥಾ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು