Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 7:8 - ಕನ್ನಡ ಸತ್ಯವೇದವು J.V. (BSI)

8 ನನ್ನನ್ನು ನೋಡುವವನ ಕಣ್ಣಿಗೆ ನಾನು ಕಾಣಿಸುವದಿಲ್ಲ; ನಿನ್ನ ಕಣ್ಣುಗಳು ನನ್ನ ಕಡೆ ಇದ್ದರೂ ನಾನು ಇರುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನನ್ನನ್ನು ನೋಡುವವನ ಕಣ್ಣಿಗೆ ನಾನು ಕಾಣಿಸುವುದಿಲ್ಲ, ನಿನ್ನ ಕಣ್ಣುಗಳು ನನ್ನ ಕಡೆ ಇದ್ದರೂ ನಾನು ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ನನ್ನನು ನೋಡುವ ಕಣ್ಣಿಗೆ ನಾನಿನ್ನು ಕಾಣಿಸುವುದಿಲ್ಲ. ನಿನ್ನ ಕಣ್ಣು ನನ್ನ ಕಡೆಗೆ ತಿರುಗಿದ್ದರೂ ನಾನು ಬದುಕಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನೀನು ನನ್ನನ್ನು ಮತ್ತೆಂದೂ ಕಾಣುವುದಿಲ್ಲ. ನೀನು ನನಗಾಗಿ ಹುಡುಕುವೆ, ಆದರೆ ನಾನು ಅಷ್ಟರಲ್ಲೇ ಹೊರಟುಹೋಗಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನನ್ನನ್ನು ನೋಡುವವನ ಕಣ್ಣು, ಇನ್ನು ಮೇಲೆ ನನ್ನನ್ನು ನೋಡದು; ನೀವು ನನ್ನನ್ನು ನೋಡಿದರೂ, ನಾನು ಬದುಕಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 7:8
14 ತಿಳಿವುಗಳ ಹೋಲಿಕೆ  

ಕಂಡವನ ಕಣ್ಣಿಗೆ ಮತ್ತೆ ಕಾಣಿಸನು, ಅವನ ನಿವಾಸವು ಅವನನ್ನು ತಿರಿಗಿ ನೋಡುವದೇ ಇಲ್ಲ.


ತರುವಾಯ ನಾನು ಆ ದಾರಿಯಲ್ಲಿ ಹೋಗಿ ನೋಡಲಾಗಿ ಅವನು ಇಲ್ಲದೆ ಹೋಗಿದ್ದನು; ಅವನನ್ನು ಹುಡುಕಿದರೂ ಸಿಕ್ಕಲೇ ಇಲ್ಲ.


ನೀನು ನರನನ್ನು ಪಾಪದ ನಿವಿುತ್ತ ಗದರಿಸಿ ಶಿಕ್ಷಿಸುವಾಗ ಅವನ ಚೆಲುವಿಕೆಯು ನುಸಿಹತ್ತಿತೋ ಎಂಬಂತೆ ಹಾಳಾಗಿ ಹೋಗುತ್ತದೆ. ಮನುಷ್ಯನೆಂಬವನು ಬರೀ ಉಸಿರೇ. ಸೆಲಾ.


ನೀನು ಇಂಥವನಾದ ನನ್ನ ಮೇಲೆ ಕಣ್ಣಿಟ್ಟು ನಿನ್ನ ನ್ಯಾಯಸ್ಥಾನಕ್ಕೆ ನನ್ನನ್ನು ಬರಮಾಡುವಿಯಾ?


ನೀನು ನನ್ನ ಕಾಲುಗಳನ್ನು ಕೋಳಕ್ಕೆ ಹಾಕಿದ್ದೀ; ನನ್ನ ದಾರಿಗಳನ್ನೆಲ್ಲಾ ಮಂದಟ್ಟುಮಾಡಿ ನನ್ನ ಹೆಜ್ಜೆಗಳ ಸುತ್ತಲೂ ಗೆರೆಯೆಳೆದಿದ್ದೀ.


ಅವನನ್ನು ಅಲ್ಲಿಂದ ಕಿತ್ತುಹಾಕಿದರೆ ಆ ಸ್ಥಳವು - ನಿನ್ನನ್ನು ಕಾಣೆ ಎಂದು ಬೊಂಕುವದು.


ಈಗ ಸತ್ತಿದ್ದಾನಲ್ಲಾ, ನಾನೇಕೆ ಉಪವಾಸಮಾಡಬೇಕು? ಅವನನ್ನು ಹಿಂದಕ್ಕೆ ತರುವದು ನನ್ನಿಂದಾದೀತೇ? ನಾನಾಗಿ ಅವನ ಬಳಿಗೆ ಹೋಗಬೇಕೇ ಹೊರತು ಅವನು ನನ್ನ ಬಳಿಗೆ ಬರುವದಿಲ್ಲ ಎಂದು ಉತ್ತರ ಕೊಟ್ಟನು.


ಹಾಗಿಲ್ಲದಿದ್ದರೆ ನಾನು ಮಲಗಿ ಸುಮ್ಮನಿದ್ದು ನಿದ್ರೆಮಾಡುತ್ತಿದ್ದೆನು;


ನೀನು ನನ್ನ ಅಪರಾಧವನ್ನು ಕ್ಷವಿುಸಿ ನನ್ನ ದೋಷವನ್ನು ಏಕೆ ಪರಿಹರಿಸುವದಿಲ್ಲ? ನಾನು ಈಗ ಮಣ್ಣಿನಲ್ಲಿ ಮಲಗಿಕೊಳ್ಳುವೆನು; ನೀನು ನನ್ನನ್ನು ಹುಡುಕುವಾಗ ನಾನು ಇಲ್ಲದೆ ಹೋಗಿರುವೆನು.


ಅವನು ಧನಿಕನಾಗಿ ನಿದ್ರಿಸಿದರೂ ಮತ್ತೆ ನಿದ್ರೆಯನ್ನು ಕಾಣದೆ ಹೋಗುವನು, ತನ್ನ ಕಣ್ಣನ್ನು ತೆರೆಯುತ್ತಲೇ ಇಲ್ಲವಾಗುವನು.


ಮನುಷ್ಯನಾದರೋ ಸತ್ತು ಬೋರಲ ಬೀಳುವನು, ಪ್ರಾಣಹೋಗಲು ಅವನು ಎಲ್ಲಿಯೋ!


ಅವನು ಸ್ವಪ್ನದಂತೆ ಹಾರಿಹೋಗಿ ಸಿಕ್ಕುವದಿಲ್ಲ, ರಾತ್ರಿಯ ಕನಸಿನ ಹಾಗೆ ಓಡಿಹೋಗುವನು.


ಗಾಳಿಬಡಿಯುತ್ತಲೇ ಅದು ಹೋಗುವದು; ಅದರ ಸ್ಥಳವು ಅದನ್ನು ತಿರುಗಿ ಕಾಣುವದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು