Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 38:15 - ಕನ್ನಡ ಸತ್ಯವೇದವು J.V. (BSI)

15 ಮತ್ತು ದುಷ್ಟರಿಗೆ ಬೆಳಕಿಲ್ಲವಾಗುವದು, ಎತ್ತಿದ ಕೈ ಮುರಿಯುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಮತ್ತು ದುಷ್ಟರಿಗೆ ಬೆಳಕಿಲ್ಲವಾಗುವುದು, ಎತ್ತಿದ ಕೈ ಮುರಿಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ದುರುಳರಿಂದ ಬೆಳಕನು ಹಿಂತೆಗೆದುಕೊಳ್ಳಲಾಗುವುದು ಅವರು ಎತ್ತಿದ ಕೈಯನು ಮುರಿಯಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ದುಷ್ಟರು ಹಗಲುಬೆಳಕನ್ನು ಇಷ್ಟಪಡುವುದಿಲ್ಲ. ಅದು ಪ್ರಕಾಶಮಾನವಾಗಿ ಹೊಳೆಯುವಾಗ, ದುಷ್ಕೃತ್ಯಗಳನ್ನು ಮಾಡದಂತೆ ಅದು ಅವರನ್ನು ತಡೆಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಅದರಂತೆ ದುಷ್ಟರಿಗೆ ಬೆಳಕು ನಿರಾಕರಿಸಲಾಗುವುದು; ಅವರ ಹಿಂಸಾಚಾರವೂ ಮುರಿದು ಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 38:15
17 ತಿಳಿವುಗಳ ಹೋಲಿಕೆ  

ದುಷ್ಟನ ಭುಜಬಲವನ್ನು ಮುರಿದುಹಾಕು; ಕೆಡುಕನ ದುಷ್ಟತ್ವವನ್ನು ಶೋಧಿಸಿ ನಿರ್ಮೂಲ ಮಾಡಿಬಿಡು.


ದುಷ್ಟರ ತೋಳುಗಳು ಮುರಿದುಹೋಗುವವು; ನೀತಿವಂತರನ್ನು ಯೆಹೋವನೇ ಉದ್ಧರಿಸುವನು.


ಹೇಗಾದರೂ ದುಷ್ಟನ ದೀಪವು ಆರುವದು, ಅವನ ಒಲೆಯು ಉರಿಯುವದಿಲ್ಲ.


ದುಷ್ಟರ ಮಾರ್ಗವೋ ಕತ್ತಲಿನಂತಿದೆ; ತಾವು ಯಾವದಕ್ಕೆ ಎಡವಿಬಿದ್ದೆವೆಂದು ಅವರಿಗೆ ಗೊತ್ತಾಗದು.


ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಐಗುಪ್ತದ ಅರಸನಾದ ಫರೋಹನಿಗೆ ವಿರುದ್ಧನಾಗಿ ಅವನ ಕೈಗಳನ್ನು, ಅಂದರೆ ಸರಿಯಾಗಿರುವದನ್ನೂ, ಮುರಿದದನ್ನೂ ತೀರಾ ಮುರಿದುಬಿಟ್ಟು ಖಡ್ಗವು ಅವನ ಕೈಯೊಳಗಿಂದ ಬೀಳುವಂತೆ ಮಾಡುವೆನು.


ಅವನನ್ನು ಬೆಳಕಿನಿಂದ ಕತ್ತಲೆಗೆ ನೂಕಿ ಲೋಕದಿಂದಲೇ ಅಟ್ಟಿಬಿಡುವರು.


ಅವರು ಹಗಲಿನಲ್ಲಿ ಕತ್ತಲೆಗೊಳಗಾಗಿ ಮಧ್ಯಾಹ್ನದಲ್ಲೂ ರಾತ್ರಿಯಲ್ಲಿರುವಂತೆ ತಡವಾಡುತ್ತಾರೆ.


ನಿಮ್ಮ ದೇವರಾದ ಯೆಹೋವನನ್ನು ಘನಪಡಿಸಿರಿ; ಇಲ್ಲದಿದ್ದರೆ ಸ್ವಲ್ಪಕಾಲದೊಳಗೆ ಆತನು ಕತ್ತಲನ್ನು ಉಂಟುಮಾಡುವನು, ನಿಮ್ಮ ಕಾಲುಗಳು ಮೊಬ್ಬಿನ ಬೆಟ್ಟಗಳಲ್ಲಿ ಮುಗ್ಗರಿಸುವವು; ನೀವು ಬೆಳಕನ್ನು ನಿರೀಕ್ಷಿಸುತ್ತಿರುವಾಗ ಆತನು ಅದನ್ನು ಮರಣಾಂಧಕಾರದ ಕಾರ್ಗತ್ತಲನ್ನಾಗಿ ಮಾಡುವನು.


ಶತ್ರುಗಳು ಸಮೀಪಕ್ಕೆ ಬಂದಾಗ ಎಲೀಷನು - ಸ್ವಾಮೀ, ಈ ಜನರನ್ನು ಕುರುಡರನ್ನಾಗಿಮಾಡು ಎಂದು ಯೆಹೋವನನ್ನು ಪ್ರಾರ್ಥಿಸಿದನು. ಆತನು ಅವನ ಮೊರೆಯನ್ನು ಲಾಲಿಸಿ ಅವರನ್ನು ಕುರುಡರನ್ನಾಗಿ ಮಾಡಿದನು.


ಆದರೆ ಸ್ವದೇಶದವನಾಗಲಿ ಅನ್ಯದೇಶದವನಾಗಲಿ ಯಾವನಾದರೂ ಮನಃಪೂರ್ವಕವಾಗಿ ಹಟದಿಂದ ಪಾಪವನ್ನು ಮಾಡಿದರೆ ಅವನು ಯೆಹೋವನನ್ನು ದೂಷಿಸಿದವನಾದ್ದರಿಂದ ಕುಲದಿಂದ ತೆಗೆದುಹಾಕಲ್ಪಡಬೇಕು.


ಇಂಥವರ ಬಾಯೆಂಬ ಕತ್ತಿಯಿಂದಲೂ ಬಲಿಷ್ಠರ ಕೈಯಿಂದಲೂ ದಿಕ್ಕಿಲ್ಲದವರನ್ನು ರಕ್ಷಿಸುತ್ತಾನೆ.


ಹೀಗಿದ್ದರೆ ನನ್ನ ಹೆಗಲಿನ ಕೀಲು ತಪ್ಪಲಿ! ತೋಳು ಸಂದಿನಿಂದ ಮುರಿದು ಬೀಳಲಿ.


ಮುದ್ರೆ ಒತ್ತಿದ ಜೇಡಿಮಣ್ಣಿನಂತೆ [ಬೆಳಗಾಗುವಾಗ] ಭೂವಿುಯು ರೂಪಗಾಣುವವು. [ಎಲ್ಲಾ ವಸ್ತುಗಳು] ಮುಂಗೊಂಡು ಹೊದಿಕೆಯೋಪಾದಿಯಲ್ಲಿ ಕಾಣಿಸುವವು.


ಬೆಳಕಿನ ಮೇಲೆ ತಿರುಗಿಬಿದ್ದವರು ಇದ್ದಾರೆ; ಇವರು ಹಗಲಿನ ದಾರಿಗಳನ್ನು ತಿಳಿಯದವರಾಗಿ ಅದರ ಹಾದಿಗಳಲ್ಲಿ ಇರುವದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು