Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 36:18 - ಕನ್ನಡ ಸತ್ಯವೇದವು J.V. (BSI)

18 ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕೀತು, ನೋಡಿಕೋ! ಕೊಡಬೇಕಾದ ಈಡು ದೊಡ್ಡದೆಂದು ಹಿಂದೆಗೆಯಬೇಡ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕದಂತೆ ನೋಡಿಕೋ! ಕೊಡಬೇಕಾದ ಈಡು ದೊಡ್ಡದೆಂದು ಹಿಂದೆಗೆಯಬೇಡ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಸಿರಿಸಂಪತ್ತು ನಿನ್ನನು ಕುಚೋದ್ಯಕ್ಕೆ ನೂಕೀತು, ಎಚ್ಚರಿಕೆ! ಹೆಚ್ಚು ಲಂಚಕೋರತನದಿಂದ ವಂಚಿತನಾಗಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಯೋಬನೇ, ಕೋಪವು ನಿನ್ನನ್ನು ಮೋಸಗೊಳಿಸದಿರಲಿ; ಹಣವು ನಿನ್ನ ಮನಸ್ಸನ್ನು ಮಾರ್ಪಡಿಸದಿರಲಿ, ನಿನ್ನನ್ನು ನಾಶನಕ್ಕೆ ನಡೆಸದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಯಾರೂ ನಿನ್ನನ್ನು ಸಂಪತ್ತಿನಿಂದ ಆಕರ್ಷಿಸದಂತೆ ಜಾಗರೂಕನಾಗಿರು; ದೊಡ್ಡ ಲಂಚತನವು ನಿನ್ನನ್ನು ವಂಚಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 36:18
17 ತಿಳಿವುಗಳ ಹೋಲಿಕೆ  

ದುಷ್ಟತನವನ್ನು ನಡಿಸಿ ಸತ್ಯವನ್ನು ಅಣಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆಯ ಮೇಲೆಯೂ ದುಷ್ಟತನದ ಮೇಲೆಯೂ ದೇವರ ಕೋಪವು ಪರಲೋಕದಿಂದ ತೋರಿಬರುತ್ತದೆ.


ದೇವರು ಒಂದು ವೇಳೆ ಆ ಮನುಷ್ಯನಿಗೆ ಮೆಚ್ಚಿ - ಈಡು ಸಿಕ್ಕಿತು, ಅಧೋಲೋಕಕ್ಕೆ ಇಳಿಯದಂತೆ ಇವನನ್ನು ರಕ್ಷಿಸು ಎಂದು ಅಪ್ಪಣೆಕೊಟ್ಟರೆ


ಹುರುಳಿಲ್ಲದ ಮಾತುಗಳನ್ನಾಡುವವರಿಗೆ ಕಿವಿಗೊಟ್ಟು ಮೋಸಹೋಗಬೇಡಿರಿ; ಅಂಥ ಕೃತ್ಯಗಳ ನಿವಿುತ್ತದಿಂದ ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ.


ಆತನು ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಬಿಟ್ಟನು. ಇದೇ ತಕ್ಕ ಸಮಯಗಳಲ್ಲಿ ಹೇಳಬೇಕಾದ ಸಾಕ್ಷಿಯು.


ನೀನು ನಿನ್ನ ಮೊಂಡತನವನ್ನೂ ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸುವದರಿಂದ ನಿನಗೋಸ್ಕರ ದೇವರ ಕೋಪವನ್ನು ಕೂಡಿಟ್ಟುಕೊಳ್ಳುತ್ತಾ ಇದ್ದೀ. ದೇವರ ಕೋಪವೂ ನ್ಯಾಯವಾದ ತೀರ್ಪು ಪ್ರಕಟವಾಗುವ ದಿವಸ ಬರುತ್ತದಷ್ಟೆ.


ಆದರೆ ಅವನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಸ್ನಾನಮಾಡಿಸಿಕೊಳ್ಳುವದಕ್ಕೆ ಬರುವದನ್ನು ಕಂಡು ಅವರಿಗೆ - ಎಲೈ ಸರ್ಪಜಾತಿಯವರೇ, ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮಗೆ ಉಪದೇಶ ಮಾಡಿದವರಾರು?


ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಯೆಹೋವನು ಮುರಿದುಬಿಟ್ಟನು.


ನಿನ್ನ ಬಲಗಡೆಯಲ್ಲಿರುವ ಕರ್ತನು ತನ್ನ ಕೋಪದ ದಿನದಲ್ಲಿ ರಾಜರನ್ನು ಖಂಡಿಸುವನು.


ನಿನ್ನ ದಂಡನೆಯನ್ನು ಪರಿಹರಿಸು; ನಿನ್ನ ಕೈಹೊಡೆತದಿಂದ ಸಾಯುವ ಹಾಗಿದ್ದೇನಲ್ಲಾ.


ಆತನ ಮಗನಿಗೆ ಮುದ್ದಿಡಿರಿ; ಇಲ್ಲವಾದರೆ ಆತನ ಕೋಪವು ಬೇಗನೆ ಪ್ರಜ್ವಲಿಸಲು ನೀವು ದಾರಿಯಲ್ಲೇ ನಾಶವಾದೀರಿ. ಆತನ ಮರೆಹೊಕ್ಕವರೆಲ್ಲರು ಧನ್ಯರು.


ಅನಂತರ ಆತನು ಸಿಟ್ಟಾಗಿ - ನಾನು ನೇವಿುಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು ಎಂದು ಹೇಳಿ


ಈ ಅತ್ಯಂತ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿಕೊಳ್ಳುವದು ಹೇಗೆ? ಇದು ಕರ್ತನಿಂದ ಮೊದಲು ಹೇಳಲ್ಪಟ್ಟಿತು; ಆತನಿಂದ ಕೇಳಿದವರು ಇದನ್ನು ನಮಗೆ ಸ್ಥಿರಪಡಿಸಿದರು;


ನರಪುತ್ರನೇ, ಇಗೋ, ಒಂದೇ ಏಟಿನಿಂದ ನಾನು ನಿನಗೆ ನೇತ್ರಾನಂದವಾಗಿರುವವಳನ್ನು ನಿನ್ನಿಂದ ತೆಗೆದುಬಿಡುವೆನು, ಆದರೂ ನೀನು ಗೋಳಾಡಬೇಡ, ಅಳಬೇಡ, ನಿನ್ನ ಕಣ್ಣೀರು ಸುರಿಯದಿರಲಿ, ಸದ್ದಿಲ್ಲದೆ ಮೊರೆಯಿಡು,


ಕಷ್ಟಾನುಭವವಿಲ್ಲದೆ ನಿನ್ನ ಐಶ್ವರ್ಯವೂ ಧನಸಾಮರ್ಥ್ಯವೂ ಈಡಾದಾವೇ?


ಅದಕ್ಕೆ ಯೆಹೋವನು - ನೀನು ಸಿಟ್ಟುಗೊಳ್ಳುವದು ಸರಿಯೋ ಎಂದು ಕೇಳಿದನು.


ಆಗ ದೇವರು ಯೋನನನ್ನು - ನೀನು ಸೋರೆಗಿಡಕ್ಕಾಗಿ ಸಿಟ್ಟುಗೊಳ್ಳುವದು ಸರಿಯೋ ಎಂದು ಕೇಳಲು ಯೋನನು - ಮರಣವಾಗುವಷ್ಟು ಸಿಟ್ಟುಗೊಳ್ಳುವದು ಸರಿಯೇ ಎಂದು ಉತ್ತರಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು