ಯೋಬ 36:16 - ಕನ್ನಡ ಸತ್ಯವೇದವು J.V. (BSI)16 ಇದೇ ಮೇರೆಗೆ ನಿನ್ನನ್ನೂ ಕಷ್ಟದೊಳಗಿಂದ ತಪ್ಪಿಸಿ ಇಕ್ಕಟ್ಟಿಲ್ಲದ ವಿಶಾಲಸ್ಥಳಕ್ಕೆ ಬರಮಾಡಬೇಕೆಂಬದೂ, ನಿನ್ನ ಮೇಜಿನ ಆಹಾರಗಳು ತುಪ್ಪದಿಂದ ತುಂಬಿರಬೇಕೆಂಬದೂ ಆತನ ಉದ್ದೇಶವಾಗಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಇದೇ ಮೇರೆಗೆ ನಿನ್ನನ್ನೂ ಕಷ್ಟದೊಳಗಿಂದ ತಪ್ಪಿಸಿ, ಇಕ್ಕಟ್ಟಿಲ್ಲದ ವಿಶಾಲ ಸ್ಥಳಕ್ಕೆ ಬರಮಾಡಬೇಕೆಂದೂ, ನಿನ್ನ ಮೇಜಿನ ಆಹಾರಗಳು ತುಪ್ಪದಿಂದ ತುಂಬಿರಬೇಕೆಂಬುದು ಆತನ ಉದ್ದೇಶವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಅಂತೆಯೆ, ಕಷ್ಟದಿಂದ ನಿನ್ನನ್ನು ತಪ್ಪಿಸಬೇಕೆಂಬುದು ಇಕ್ಕಟ್ಟಿಲ್ಲದ ಬಯಲಿಗೆ ನಿನ್ನನ್ನು ತರಬೇಕೆಂಬುದು ನಿನ್ನ ಊಟದ ಮೇಜು ಸಮೃದ್ಧಿಯಾಗಿರಬೇಕೆಂಬುದು ದೇವರ ಉದ್ದೇಶವಾಗಿರುವುದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 “ಯೋಬನೇ, ದೇವರು ನಿನ್ನನ್ನು ಕೇಡಿನಿಂದ ತಪ್ಪಿಸಿ ಸುರಕ್ಷಿತವೂ ಅಭಿವೃದ್ಧಿಕರವೂ ಆಗಿರುವ ಸ್ಥಳಕ್ಕೆ ಕರೆದುಕೊಂಡು ಬಂದು ನಿನಗೆ ಊಟವನ್ನು ಯಥೇಚ್ಛವಾಗಿ ಬಡಿಸಲು ಇಷ್ಟಪಡುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 “ದೇವರು ನಿನ್ನನ್ನು ಇಕ್ಕಟ್ಟಿನೊಳಗಿಂದ ಬಿಡಿಸುವರು; ಇಕ್ಕಟ್ಟಿಲ್ಲದ ವಿಶಾಲ ಸ್ಥಳವು ನಿನಗೆ ದೊರೆಯುವುದು; ನಿನ್ನ ಆದರಣೆಗಾಗಿ ನಿನ್ನ ಮೇಜು ಉತ್ತಮ ಆಹಾರಗಳಿಂದ ತುಂಬಿರುವುದು. ಅಧ್ಯಾಯವನ್ನು ನೋಡಿ |