Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 30:29 - ಕನ್ನಡ ಸತ್ಯವೇದವು J.V. (BSI)

29 ನಾನು ನರಿಗಳ ತಮ್ಮನೂ ಉಷ್ಟ್ರಪಕ್ಷಿಗಳ ಗೆಳೆಯನೂ ಆಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ನಾನು ನರಿಗಳ ತಮ್ಮನೂ, ಉಷ್ಟ್ರಪಕ್ಷಿಗಳ ಗೆಳೆಯನೂ ಆಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ನರಿಗಳಿಗೆ ಸಹೋದರನಾಗಿರುವೆ ಗೂಬೆಗಳಿಗೆ ನಾನು ಗೆಳೆಯನಾಗಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ನಾನು ನರಿಗಳಂತೆಯೂ ಉಷ್ಟ್ರಪಕ್ಷಿಗಳಂತೆಯೂ ಒಬ್ಬಂಟಿಗನಾಗಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ನಾನು ನರಿಗಳಿಗೆ ಸಹೋದರನಾದೆನು; ಗೂಬೆಗಳಿಗೆ ನಾನು ಜೊತೆಯವನಾದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 30:29
9 ತಿಳಿವುಗಳ ಹೋಲಿಕೆ  

ಇದಕ್ಕಾಗಿ ನಾನು ಅರಿಚಾಟ ಕಿರಿಚಾಟ ಮಾಡುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ನಡೆಯುವೆನು; ನರಿಗಳಂತೆ ಅರಚಿಕೊಳ್ಳುವೆನು, ಉಷ್ಟ್ರಪಕ್ಷಿಗಳ ಹಾಗೆ ಕಿರಚಿಕೊಳ್ಳುವೆನು.


ಅಡವಿಯ ಬಕದಂತಿದ್ದೇನೆ; ಹಾಳೂರಿನ ಗೂಗೆಯಂತಿದ್ದೇನೆ.


ಆದರೆ ನಾನು ಯಾಕೋಬನನ್ನು ಪ್ರೀತಿಸಿ ಏಸಾವನನ್ನು ದ್ವೇಷಿಸಿ ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಕಾಡುನರಿಗಳ ಪಾಲುಮಾಡಿದೆನಷ್ಟೆ; ಇದು ಯೆಹೋವನ ನುಡಿ.


ನೀನು ನಮ್ಮನ್ನು ಪರಾಜಯಪಡಿಸಿ ನಮ್ಮ ದೇಶವನ್ನು ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? ಕಾರ್ಗತ್ತಲು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ?


ಶ್ಮಶಾನವನ್ನು, ನೀನು ನನ್ನ ತಂದೆ ಎಂದೂ ಹುಳವನ್ನು, ನನ್ನ ತಾಯಿ, ನನ್ನ ತಂಗಿ ಎಂದೂ ಕರೆಯುವದಾದರೆ


ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು, ಪಾರಿವಾಳದಂತೆ ಮೊರೆಯಿಟ್ಟೆನು, ಯೆಹೋವನೇ, ನಾನು ಬಾಧೆಪಡುತ್ತಿದ್ದೇನೆ, ನನಗೆ ಹೊಣೆಯಾಗು ಎಂದು ಮೇಲೆ ಮೇಲೆ ದೃಷ್ಟಿಸುತ್ತಾ ಕಂಗೆಟ್ಟೆನು.


ಅಲ್ಲಿನ ಅರಮನೆಗಳಲ್ಲಿ ದಬ್ಬೆಗಳ್ಳಿಗಳೂ ಕೋಟೆಗಳಲ್ಲಿ ಮುಳ್ಳುಗಿಳ್ಳುಗಳೂ ಹಬ್ಬಿಕೊಳ್ಳುವವು; ಅದು ನರಿಗಳಿಗೆ ಹಕ್ಕೆಯಾಗಿಯೂ ಉಷ್ಟ್ರಪಕ್ಷಿಗಳಿಗೆ ಎಡೆಯಾಗಿಯೂ ಇರುವದು.


ನಿದ್ರೆಯಿಲ್ಲದವನಾಗಿ ಮನೆಮಾಳಿಗೆ ಮೇಲಿರುವ ಒಂಟಿಯಾದ ಪಕ್ಷಿಯಂತಿರುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು