Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 3:8 - ಕನ್ನಡ ಸತ್ಯವೇದವು J.V. (BSI)

8 ಘಟಸರ್ಪವನ್ನು ಎಬ್ಬಿಸುವದರಲ್ಲಿಯೂ ದಿನಗಳನ್ನು ಶಪಿಸುವದರಲ್ಲಿಯೂ ಜಾಣರಾದ [ಮಾಂತ್ರಿಕರು] ಅದಕ್ಕೆ ಶಾಪ ಕೊಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ, ದಿನಗಳನ್ನು ಶಪಿಸುವುದರಲ್ಲಿಯೂ ಜಾಣರಾದ (ಮಾಂತ್ರಿಕರು) ಅದಕ್ಕೆ ಶಾಪಕೊಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಮಾಟಮಂತ್ರಗಾರರು ಅದಕ್ಕೆ ಶಾಪಹಾಕಲಿ ಘಟಸರ್ಪವೆಬ್ಬಿಸಬಲ್ಲ ಗಾರುಡಿಗರು ಅದನು ಧಿಕ್ಕರಿಸಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಲಿವ್ಯಾತಾನನನ್ನು ಎಬ್ಬಿಸಬಲ್ಲ ಹಾಗೂ ದಿನಗಳನ್ನು ಶಪಿಸುವ ಮಾಂತ್ರಿಕರು ನಾನು ಹುಟ್ಟಿದ ರಾತ್ರಿಯನ್ನು ಶಪಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ ದಿನಗಳನ್ನು ಶಪಿಸುವುದರಲ್ಲಿಯೂ ನಿಪುಣರಾದವರು ಆ ದಿನವನ್ನು ಶಪಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 3:8
11 ತಿಳಿವುಗಳ ಹೋಲಿಕೆ  

ನೀನು ಮೊಸಳೆಯನ್ನು ಗಾಳದಿಂದ ಎಳೆದು ಹುರಿಯಿಂದ ಅದರ ನಾಲಿಗೆಯನ್ನು ಅದುವಿು ಬಿಗಿಯುವಿಯೋ?


ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆಯು ಯಾರಲ್ಲಿಯೂ ಇಲ್ಲ; ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು?


ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಆತನು ಗದ್ದಲವನ್ನೂ ಕೆಲವರು ಬಹಳವಾಗಿ ಅಳುವದನ್ನೂ ಗೋಳಾಡುವದನ್ನೂ ಕಂಡನು.


ನಿಮಗೋಸ್ಕರ ಕೊಳಲೂದಿದೆವು, ನೀವು ಕುಣಿಯಲಿಲ್ಲ. ಗೋಳಾಡಿದೆವು, ನೀವು ಎದೆಬಡಕೊಳ್ಳಲಿಲ್ಲ ಎಂದು ಕೂಗಿಹೇಳುವಂಥ ಹುಡುಗರನ್ನು ಹೋಲುತ್ತದೆ.


ಸೇನಾಧೀಶ್ವರದೇವರಾದ ಯೆಹೋವಕರ್ತನು ಇಂತೆನ್ನುತ್ತಾನೆ - ಎಲ್ಲಾ ಚೌಕಗಳಲ್ಲಿ ಕಿರಿಚಾಟವಾಗುವದು, ಸಕಲ ಬೀದಿಗಳಲ್ಲಿ ಅಯ್ಯಯ್ಯೋ ಎಂದು ಅರಚಿಕೊಳ್ಳುವರು; ರೈತರನ್ನು ಪ್ರಲಾಪಿಸುವದಕ್ಕೂ ಗೋಳಾಟದವರನ್ನು ಗೋಳಿಡುವದಕ್ಕೂ ಕರೆಯುವರು.


ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು.


ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತವನ್ನು ರಚಿಸಿದನು. ಎಲ್ಲಾ ಗಾಯಕರೂ ಗಾಯಕಿಯರೂ ಅವನನ್ನು ಇಂದಿನವರೆಗೆ ತಮ್ಮ ಶೋಕಗೀತಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತಗಳನ್ನು ಹಾಡುವದು ಇಸ್ರಾಯೇಲ್ಯರಲ್ಲಿ ಒಂದು ಪದ್ಧತಿಯಾಯಿತು.


ಹಾ, ಆ ರಾತ್ರಿಯು ಬಂಜೆಯಾಗಿ ಅದರಲ್ಲಿ ಉತ್ಸಾಹಧ್ವನಿಯು ಉಂಟಾಗದಿರಲಿ.


ಆ ದಿನದಲ್ಲಿ ಮುಂಜಾನೆಯ ನಕ್ಷತ್ರಗಳೂ ವಿುಣುಕದೆ ಹೋಗಲಿ, ಅದು ಬೆಳಕನ್ನು ಎದುರುನೋಡಿದರೂ ಹೊಂದದಿರಲಿ, ಅರುಣೋದಯವೆಂಬ ರೆಪ್ಪೆ ತೆರೆಯುವದನ್ನು ಅದು ಕಾಣದಿರಲಿ.


ಆ ದಿನದಲ್ಲಿ ಯೆಹೋವನು ಕಠಿನವೂ ಮಹತ್ತೂ ಬಲವೂ ಆಗಿರುವ ತನ್ನ ಖಡ್ಗದಿಂದ ವೇಗವಾಗಿ ಓಡುವ ಸರ್ಪ, ಡೊಂಕಾಗಿ ಹರಿಯುವ ಸರ್ಪ, ಈ ಎರಡು ಹೆಬ್ಬಾವುಗಳನ್ನು ಹೊಡೆದು ಮಹಾ ನದಿಯಲ್ಲಿನ ಘಟಸರ್ಪವನ್ನೂ ಕೊಂದುಹಾಕುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು