Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 24:5 - ಕನ್ನಡ ಸತ್ಯವೇದವು J.V. (BSI)

5 ಇಗೋ, ಅಡವಿಯಲ್ಲಿ ಕಾಡುಕತ್ತೆಗಳು ಹೇಗೋ ಹಾಗೆಯೇ ಇವರು ತಮ್ಮ ಹೊಟ್ಟೇಪಾಡಿಗಾಗಿ ಹೊರಟು ಕೂಳನ್ನು ಆತುರವಾಗಿ ಹುಡುಕುವರು; ಅರಣ್ಯವೇ ಇವರ ಮಕ್ಕಳಿಗಾಗಿ ಕೂಳನ್ನು ಒದಗಿಸುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಇಗೋ, ಅಡವಿಯಲ್ಲಿ ಕಾಡುಕತ್ತೆಗಳು ಹೇಗೋ ಹಾಗೆಯೇ, ಇವರು ತಮ್ಮ ಹೊಟ್ಟೇ ಪಾಡಿಗಾಗಿ ಹೊರಟು ಆಹಾರವನ್ನು ಆತುರವಾಗಿ ಹುಡುಕುವರು; ಅರಣ್ಯವೇ ಇವರ ಮಕ್ಕಳಿಗಾಗಿ ಆಹಾರವನ್ನು ಒದಗಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಆ ಬಡವರ ಪಾಡು ಅಡವಿಯ ಕಾಡುಕತ್ತೆಗಳಿಗೆ ಸಮಾನ ಹೊಟ್ಟೆಪಾಡಿಗಾಗಿ ಕೂಳನ್ನು ಹುಡುಕುತ್ತಾರೆ ಬೆಳಗಿನಿಂದ ಅವರ ಮಕ್ಕಳಿಗೆ ಆಹಾರ ಒದಗಿಸುತ್ತದೆ ಅರಣ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 “ಬಡವರು ಅಡವಿಯಲ್ಲಿನ ಕಾಡುಕತ್ತೆಗಳೋ ಎಂಬಂತೆ ತಮ್ಮ ಆಹಾರಕ್ಕಾಗಿ ದಿನವೆಲ್ಲಾ ದುಡಿಯುವರು; ಕೂಳೆಬಿಟ್ಟ ಹೊಲಗಳೇ ಅವರ ಮಕ್ಕಳಿಗೆ ಆಹಾರವನ್ನು ಒದಗಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಕಾಡುಕತ್ತೆಗಳ ಹಾಗೆ ಬಡವರು ತಮ್ಮ ಆಹಾರಕ್ಕಾಗಿ ಅಲೆಯುತ್ತಾರೆ; ಪಾಳುಭೂಮಿಯಿಂದ ಅವರಿಗೂ, ಅವರ ಮಕ್ಕಳಿಗೂ ಆಹಾರ ಸಿಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 24:5
16 ತಿಳಿವುಗಳ ಹೋಲಿಕೆ  

ಮನುಷ್ಯನು ತನ್ನ ಕೆಲಸಕ್ಕೆ ಹೊರಟುಹೋಗುತ್ತಾನೆ; ಸಾಯಂಕಾಲದವರೆಗೆ ದುಡಿಯುತ್ತಾನೆ.


ಬೆಳಗಾದ ಮೇಲೆ ಯೆಹೂದ್ಯರು ಒಳಸಂಚು ಮಾಡಿ - ನಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವದಿಲ್ಲವೆಂದು ಶಪಥಮಾಡಿಕೊಂಡರು.


ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ಅರಮನೆಗೆ ಕರಕೊಂಡು ಹೋದರು. ಆಗ ಮುಂಜಾನೆ ಆಗಿತ್ತು. ಅವರು ತಮಗೆ ಮೈಲಿಗೆ ತಟ್ಟಿ ಪಸ್ಕದ ಊಟವನ್ನು ಮಾಡುವದಕ್ಕೆ ಅಡ್ಡಿಯಾದೀತೆಂದು ಅರಮನೆಯೊಳಕ್ಕೆ ಹೋಗಲಿಲ್ಲ.


ಅದರಲ್ಲಿನ ಮುಖ್ಯಾಧಿಕಾರಿಗಳು ಗರ್ಜಿಸುವ ಸಿಂಹಗಳು; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳು; ಮರುದಿನ ಕಡಿಯುವದಕ್ಕೆ ಎಲುಬು ಕೂಡಾ ವಿುಗದು.


ತಮ್ಮ ಹಾಸಿಗೆಗಳಲ್ಲೇ ಅನ್ಯಾಯವನ್ನು ಯೋಚಿಸಿ ಕೇಡನ್ನು ಕಲ್ಪಿಸುವವರ ಗತಿಯನ್ನು ಏನು ಹೇಳಲಿ! ಉದಯದ ಬೆಳಕಿನಲ್ಲಿ ಅದನ್ನು ನಡಿಸುವರು, ಅದು ಅವರ ಕೈವಶವಷ್ಟೆ.


ಅದು ಒಂಟಿಯಾದ ಕಾಡುಕತ್ತೆಯಂತೆ ಮನಸ್ಸು ಬಂದ ಹಾಗೆ ನಡೆದು ಅಶ್ಶೂರಕ್ಕೆ ಹೋಗಿದೆ; ಎಫ್ರಾಯೀಮು ಹಣತೆತ್ತು ವಿುಂಡರನ್ನು ಸಂಪಾದಿಸಿಕೊಂಡಿದೆ.


ಅವರು ಹೊಂಚಿಕೊಂಡಿರುವಾಗ ಆಹಾ, ತಮ್ಮ ಹೃದಯವನ್ನು ಒಲೆಯಂತೆ ಸಿದ್ಧಮಾಡಿರುತ್ತಾರೆ; ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ; ಬೆಳಿಗ್ಗೆ ಧಗಧಗನೆ ಉರಿಯುತ್ತದೆ.


ಅಡವಿಯಲ್ಲಿ ಪಳಗಿದ್ದು ಮದದಿಂದ ಗಾಳಿಯನ್ನು ಬುಸುಬುಸನೆ ಮೂಸಿನೋಡುವ ಹೆಣ್ಣು ಕಾಡುಕತ್ತೆಯ ಹಾಗಿದ್ದೀ; ಅದಕ್ಕೆ ಬೆದೆ ಏರಿದಾಗ ಯಾವ ಗಂಡುಕತ್ತೆಯು ನೂಕಿಬಿಟ್ಟೀತು? ಆಯಾ ತಿಂಗಳಿನಲ್ಲಿ ಅದನ್ನು ಹುಡುಕುವವುಗಳೆಲ್ಲಾ ಆಯಾಸಗೊಳ್ಳದೆ ಅದನ್ನು ದೊರಕಿಸಿಕೊಳ್ಳುವವು.


ಕೇಡುಮಾಡದಿದ್ದರೆ ಅವರಿಗೆ ನಿದ್ರೆಹತ್ತದು; ಯಾರನ್ನಾದರೂ ಎಡವಿಬೀಳಿಸದಿದ್ದರೆ ಅವರ ನಿದ್ರೆಗೆ ಭಂಗವಾಗುವದು.


ಕೊಲೆಪಾತಕನು ಮುಂಜಾನೆ ಎದ್ದು ದಿಕ್ಕಿಲ್ಲದ ಬಡವರನ್ನು ಕೊಂದು ರಾತ್ರಿಯಲ್ಲಿ ಕಳ್ಳನಂತಿರುವನು.


ಜಾರಿಬಿದ್ದವರಿಗೆ ಅಪಮಾನವು ಕಾದಿರುತ್ತದೆ. ಕಳ್ಳರ ಗುಡಾರಗಳಾದರೋ ಸಮೃದ್ಧಿವಾಗಿರುವವು, ಕೈಯಲ್ಲಿರುವದನ್ನೇ ದೇವರನ್ನಾಗಿ ಮಾಡಿಕೊಂಡು ದೇವರನ್ನು ರೇಗಿಸುವವರು ಸುರಕ್ಷಿತರಾಗಿದ್ದಾರೆ.


ಹಸಿದವನು ಅವರ ಬೆಳೆಯನ್ನು ಮುಳ್ಳು ಬೇಲಿಯೊಳಗಿಂದಲೇ ತಿಂದುಬಿಡುವನು. ಅವರ ಸೊತ್ತನ್ನು ನುಂಗಲು ಬೋನು ಬಾಯಿ ತೆರೆದಿದೆ.


ನೀನು ಕತ್ತಿಯಿಂದಲೇ ಜೀವನ ಮಾಡುವಿ. ನಿನ್ನ ತಮ್ಮನಿಗೆ ಸೇವಕನಾಗಿರುವಿ. ಆದರೂ ನೀನು ಕೊಸರಿಕೊಳ್ಳುವಾಗ ಅವನು ನಿನ್ನ ಹೆಗಲಿನ ಮೇಲೆ ಹಾಕಿರುವ ನೊಗವನ್ನು ಮುರಿದುಹಾಕುವಿ ಎಂದು ಹೇಳಿದನು.


ಅವನು ಕಾಡುಗತ್ತೆಯಂತೆ ಇರುವನು. ಅವನು ಎಲ್ಲರ ಮೇಲೆ ಕೈಯೆತ್ತುವನು; ಹಾಗೆಯೇ ಅವನ ಮೇಲೆ ಎಲ್ಲರೂ ಕೈಯೆತ್ತುವರು. ತನ್ನ ಅಣ್ಣತಮ್ಮಂದಿರ ಎದುರುಗಡೆಯೇ ವಾಸವಾಗಿರುವನು ಎಂದು ಹೇಳಿ ಹೋದನು.


ತಮ್ಮ ಹೊಟ್ಟೆಗಾಗಿ ಬೈಲಿನಲ್ಲಿ ಸೊಪ್ಪುಸೆದೆಯನ್ನು ಕೊಯ್ದುಕೊಳ್ಳುವರು, ದುಷ್ಟನ ದ್ರಾಕ್ಷೇತೋಟದಲ್ಲಿ ಹಕ್ಕಲಾಯುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು