Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 20:25 - ಕನ್ನಡ ಸತ್ಯವೇದವು J.V. (BSI)

25 ಅವನು ಬಾಣವನ್ನು ಕೀಳಲು ಅದು ಬೆನ್ನಿನಿಂದ ಬರುವದು, ಥಳಥಳಿಸುತ್ತಾ ಅವನ ಪಿತ್ತಕೋಶದೊಳಗಿಂದ ಹೊರಡುತ್ತಿರುವದು, ಭಯಭ್ರಾಂತಿಗಳು ಅವನನ್ನು ಮುತ್ತಿಕೊಳ್ಳುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅವನು ಬಾಣವನ್ನು ಕೀಳಲು ಅದು ಬೆನ್ನಿನಿಂದ ಹೊರಬರುವುದು, ಥಳಥಳಿಸುತ್ತಾ ಅವನ ಪಿತ್ತಕೋಶದೊಳಗಿಂದ ಹೊರಡುತ್ತಿರುವುದು, ಭಯಭ್ರಾಂತಿಗಳು ಅವನನ್ನು ಮುತ್ತಿಕೊಳ್ಳುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಆ ಬಾಣವನು ಕೀಳಲು ಅದು ಹೊರಬಂತು ಅವನ ಬೆನ್ನಿನಿಂದ ಅದರ ಮಿಂಚುಮೊನೆ ಆಚೆಬಂತು ಅವನ ಪಿತ್ತಕೋಶದಿಂದ ಅವನನು ಆವರಿಸಿಕೊಂಡಿತು ಭಯಭ್ರಾಂತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಅವನು ಅದನ್ನು ಕೀಳಲು ಅದು ಬೆನ್ನಿನಿಂದ ಬರುವುದು; ಥಳಥಳಿಸುವ ಬಾಣದ ತುದಿಯು ಪಿತ್ತಕೋಶದೊಳಗಿಂದ ಬರುವುದು. ಅವನು ಅಪಾಯದಿಂದ ದಿಗ್ಭ್ರಾಂತನಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಅವನು ಆ ಬಾಣವನ್ನು ಎಳೆದರೆ, ಅದು ಬೆನ್ನಿನಿಂದ ಹೊರಡುವುದು; ಅವನ ಪಿತ್ತಕೋಶದಿಂದ ಅದರ ಮಿಂಚುವ ಮೊನೆ ಬರುವುದು; ಸಾವಿನ ಭಯವು ಅವನನ್ನೂ ಆವರಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 20:25
13 ತಿಳಿವುಗಳ ಹೋಲಿಕೆ  

ಎಲ್ಲಾ ಕಡೆಯಲ್ಲಿಯೂ ಅಪಾಯಗಳು ಅವನನ್ನು ಅಂಜಿಸಿ ಹಿಮ್ಮಡಿತುಳಿಯುತ್ತಾ ಬೆನ್ಹತ್ತುವವು.


ಆತನ ಬಾಣಗಳು ನನ್ನನ್ನು ಮುತ್ತಿಕೊಂಡಿವೆ. ಆತನು ಕರುಣವಿಲ್ಲದೆ ನನ್ನ ಅಂತರಂಗಗಳನ್ನು ಇರಿದು ಭೂವಿುಯ ಮೇಲೆ ನನ್ನ ಪಿತ್ತವನ್ನು ಸುರಿಸುತ್ತಾನೆ.


ಥಳಥಳಿಸುವ ನನ್ನ ಕತ್ತಿಯನ್ನು ನಾನು ಹದಮಾಡಿ ನ್ಯಾಯವನ್ನು ಸ್ಥಾಪಿಸುವದಕ್ಕೆ ಮುಂಗೊಂಡಾಗ ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು, ನನ್ನನ್ನು ದ್ವೇಷಿಸಿದವರಿಗೆ ಪ್ರತಿದಂಡನೆ ಮಾಡುವೆನು;


ಅಪಾಯಗಳ ಸಪ್ಪಳವು ಅವನ ಕಿವಿಯಲ್ಲೇ ಇರುವದು, ತಾನು ಸುಖವಾಗಿರುವಾಗಲೂ ಸೂರೆಗಾರನು ತನ್ನ ಮೇಲೆ ಬೀಳುವನೆಂದು ಭಯಪಡುವನು.


ಕರ್ತನ ಭಯವು ನಮಗಿರುವದರಿಂದ ನಾವು ಮನುಷ್ಯರನ್ನು ಒಡಂಬಡಿಸುತ್ತೇವೆ. ನಾವು ಯಥಾರ್ಥರೆಂಬದು ದೇವರಿಗೆ ಗೊತ್ತುಂಟು; ನಿಮ್ಮ ಮನಸ್ಸಿಗೆ ಕೂಡ ಗೊತ್ತಾಗಿದೆ ಎಂದು ನಂಬಿಕೊಂಡಿದ್ದೇನೆ.


ಯೌವನಾರಭ್ಯ ಕುಗ್ಗಿದವನೂ ಮೃತಪ್ರಾಯನೂ ನಿನ್ನ ಗದರಿಕೆಯಿಂದ ದೆಸೆಗೆಟ್ಟವನೂ ಆಗಿದ್ದೇನಲ್ಲಾ.


ಅವರು ನಿವಿುಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ; ಭಯಂಕರರೀತಿಯಿಂದ ಸಂಹಾರವಾಗಿ ಮುಗಿದು ಹೋಗುತ್ತಾರೆ.


ದೋಷಿಯು ಮನಸ್ಸನ್ನು ಬೇರೆಮಾಡಿಕೊಳ್ಳದೆ ಹೋದರೆ ಆತನು ತನ್ನ ಕತ್ತಿಯನ್ನು ಮಸೆಯುವನು. ತನ್ನ ಬಿಲ್ಲನ್ನು ಬೊಗ್ಗಿಸಿ ಸಿದ್ಧಮಾಡಿದ್ದಾನೆ.


ವಿಪತ್ತಿನ ಹೊಳೆಗಳು ಅವನನ್ನು ಹಿಂದಟ್ಟಿ ಹಿಡಿಯುವವು, ರಾತ್ರಿಯಲ್ಲಿ ಬಿರುಗಾಳಿಯು ಅವನನ್ನು ಅಪಹರಿಸುವದು;


ಸರ್ವಶಕ್ತನ ಬಾಣಗಳು ನನ್ನಲ್ಲಿ ನಾಟಿರುತ್ತವೆ; ನನ್ನ ಆತ್ಮವು ಅವುಗಳ ವಿಷವನ್ನು ಹೀರಿಕೊಳ್ಳುತ್ತದೆ; ದೇವರು ಕಳುಹಿಸಿದ ಅಪಾಯಗಳು ನನಗೆ ವಿರೋಧವಾಗಿ ವ್ಯೂಹಕಟ್ಟಿವೆ.


ಆಗ ಯೋವಾಬನು - ಇಲ್ಲಿ ನಿಂತು ತಡ ಮಾಡುವದೇಕೆ ಎಂದು ಹೇಳಿ ಕೂಡಲೆ ಕೈಯಲ್ಲಿ ಮೂರು ಈಟಿಗಳನ್ನು ತೆಗೆದುಕೊಂಡು ಹೋಗಿ ಅಬ್ಷಾಲೋಮನ ಎದೆಗೆ ತಿವಿದನು. ಅವನು ಇನ್ನೂ ಜೀವದಿಂದ ಮರದಲ್ಲಿ ನೇತಾಡುತ್ತಿರುವಾಗಲೇ


ಅವನ ನಿರ್ಭಯದ ಗುಡಾರದಿಂದ ಅವನನ್ನು ಎಳೆದು ಮಹಾಭೀತಿಗಳ ರಾಜನ ಸನ್ನಿಧಿಗೆ ಸಾಗಿಸಿಕೊಂಡು ಹೋಗುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು