Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 15:20 - ಕನ್ನಡ ಸತ್ಯವೇದವು J.V. (BSI)

20 ಹಿಂಸಕನಿಗೆ ಎಷ್ಟು ವರುಷಗಳು ನೇಮಕವಾಗಿವೆಯೋ ಅಷ್ಟು ಕಾಲವೂ ಆ ದುಷ್ಟನು ಪೀಡಿತನಾಗಿಯೇ ಇರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಹಿಂಸಕನಿಗೆ ಎಷ್ಟು ವರ್ಷಗಳು ನೇಮಕವಾಗಿವೆಯೋ, ಅಷ್ಟು ಕಾಲವೂ ಆ ದುಷ್ಟನು ಪೀಡಿತನಾಗಿಯೇ ಇರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಹಿಂಸಾತ್ಮಕನ ವರುಷಗಳು ಎಣಿಸಲಾಗಿವೆ ಆ ದುಷ್ಟನು ಜೀವಮಾನವೆಲ್ಲ ಬಾಧೆಪೀಡಿತನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ದುಷ್ಟನು ತನ್ನ ಜೀವಮಾನವೆಲ್ಲಾ ಯಾತನೆಯನ್ನು ಅನುಭವಿಸುವನು. ಕ್ರೂರಿಯು ತನಗೆ ನೇಮಕಗೊಂಡಿರುವ ವರ್ಷಗಳಲ್ಲೆಲ್ಲಾ ಕಷ್ಟಪಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಜ್ಞಾನಿಗಳು ಹೇಳಿದ್ದೇನೆಂದರೆ: ದುಷ್ಟನು ತನ್ನ ಜೀವಮಾನವೆಲ್ಲಾ ವೇದನೆಪಡುತ್ತಾನೆ; ನಿರ್ದಯನು ತನ್ನ ವರ್ಷಗಳೆಲ್ಲ ತೊಂದರೆಗಳನ್ನು ಸಂಗ್ರಹಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 15:20
11 ತಿಳಿವುಗಳ ಹೋಲಿಕೆ  

ದುಷ್ಟನಿಗೆ ದೇವರಿಂದ ದೊರೆಯುವ ಪಾಲೂ ಹಿಂಸಕನಿಗೆ ಸರ್ವಶಕ್ತನಿಂದ ಸಿಕ್ಕುವ ಸ್ವಾಸ್ತ್ಯವೂ ಹೀಗಿರುವದು: -


ಸರ್ವಶಕ್ತನು ಏಕೆ [ದಂಡನೆಯ] ಕಾಲಗಳನ್ನು ನೇವಿುಸಿ ಇಟ್ಟುಕೊಂಡಿಲ್ಲ? ಆತನನ್ನು ಅರಿತವರಿಗೆ ಆತನ [ನ್ಯಾಯ ತೀರ್ಪಿನ] ದಿನಗಳು ಏಕೆ ಗೋಚರವಾಗುವದಿಲ್ಲ?


ಜಗತ್ತೆಲ್ಲಾ ಇಂದಿನವರೆಗೂ ನರಳುತ್ತಾ ಪ್ರಸವ ವೇದನೆಪಡುತ್ತಾ ಇರುತ್ತದೆಂದು ನಾವು ಬಲ್ಲೆವು.


ಎಲ್ಲರಿಗೂ ಒಂದೇ ಗತಿಯೆಂಬ ಸಂಕಟವು ಲೋಕವ್ಯವಹಾರದಲ್ಲೆಲ್ಲಾ ಸೇರಿಕೊಂಡಿದೆ; ಇದಲ್ಲದೆ ನರವಂಶದವರ ಎದೆಯಲ್ಲಿ ಕೆಟ್ಟತನವು ತುಂಬಿದೆ; ಅವರು ಬದುಕಿರುವ ತನಕ ಮರುಳುತನವು ಅವರ ಮನಸ್ಸನ್ನು ಹಿಡಿದಿರುವದು. ಆಮೇಲೆ ಪ್ರೇತಲೋಕವೇ ಗತಿ.


ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡಕೊಳ್ಳುವೆವು.


ಇದೇ ಸಂಗತಿಯನ್ನು ತಮ್ಮ ಪಿತೃಗಳಿಂದ ಕೇಳಿ ಮರೆಮಾಜದೆ ಪ್ರಕಟಿಸಿದ್ದಾರೆ.


ಸಂಕಟವೂ ಪೇಚಾಟವೂ ಯುದ್ಧ ಸನ್ನದ್ಧರಾಜರಂತೆ ಅವನನ್ನು ಹೆದರಿಸಿ ಸೋಲಿಸುವವು.


ನೀನು ಈ ಹೊತ್ತು ನನ್ನನ್ನು ಸ್ವದೇಶದಿಂದ ಹೊರಡಿಸುತ್ತೀಯಲ್ಲಾ; ನಿನ್ನ ಸಾನ್ನಿಧ್ಯವು ತಪ್ಪಿತು; ನಾನು ಲೋಕದಲ್ಲಿ ಅಲೆಯುವವನೂ ದೇಶಭ್ರಷ್ಟನೂ ಆಗಬೇಕಾಯಿತು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು