Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 9:17 - ಕನ್ನಡ ಸತ್ಯವೇದವು J.V. (BSI)

17 ಹೇಗಂದರೆ - ಇಸ್ರಾಯೇಲ್ಯರು ಮೂರನೆಯ ದಿನದಲ್ಲಿ ಹೊರಟು ಸೇರಿದಂಥ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಊರುಗಳು ಅವರವೇ ಆಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಹೇಗೆಂದರೆ ಇಸ್ರಾಯೇಲ್ಯರು ಮೂರನೆಯ ದಿನದಲ್ಲಿ ಹೊರಟು ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಊರುಗಳನ್ನು ಸೇರಿದರು. ಆಗ ಆ ಊರುಗಳು ಆ ಜನರದ್ದೇ ಎಂದು ಗೊತ್ತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಹೇಗೆಂದರೆ - ಮೂರನೆಯ ದಿನದಂದು ಇಸ್ರಯೇಲರು ಹೊರಟು ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಊರುಗಳನ್ನು ಸೇರಿದರು. ಆಗ ಆ ಊರುಗಳು ಆ ಜನರದ್ದೇ ಎಂದು ಗೊತ್ತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಆದ್ದರಿಂದ ಇಸ್ರೇಲರು ಅವರಿದ್ದ ಸ್ಥಳಕ್ಕೆ ಹೋದರು. ಮೂರನೆಯ ದಿನ ಇಸ್ರೇಲರು ಗಿಬ್ಯೋನ್, ಕೆಫೀರಾ, ಬೇರೋತ್ ಮತ್ತು ಕಿರ್ಯತ್ಯಾರೀಮ್ ಪಟ್ಟಣಗಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆಗ ಇಸ್ರಾಯೇಲರು ಪ್ರಯಾಣ ಮಾಡುವಾಗ ಮೂರನೆಯ ದಿವಸದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ ಯಾರೀಮ್ ಎಂಬ ಅವರ ಪಟ್ಟಣಗಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 9:17
24 ತಿಳಿವುಗಳ ಹೋಲಿಕೆ  

ಕಿರ್ಯತ್ಯಾರೀಮ್ ಕೆಫೀರ ಬೇರೋತ್ ಊರುಗಳವರು 743


ಕಿರ್ಯತ್ಯಾರೀಮ್ ಕೆಫೀರಾ ಬೇರೋತ್ ಊರುಗಳವರು 743


ಆದರೂ ದಾವೀದನು ಯೆಹೋವದೂತನ ಕತ್ತಿಗೆ ಹೆದರಿ ದೇವದರ್ಶನಕ್ಕೋಸ್ಕರ ಅಲ್ಲಿಗೆ ಹೋಗಲಾರದೆ ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಯಜ್ಞವನ್ನರ್ಪಿಸಿದನು.


ಆಗ ಕಿರ್ಯತ್ಯಾರೀವಿುನವರು ಬಂದು ಯೆಹೋವನ ಮಂಜೂಷವನ್ನು ತೆಗೆದುಕೊಂಡು ಹೋಗಿ ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಲ್ಲಿಟ್ಟು ಅವನ ಮಗನಾದ ಎಲ್ಲಾಜಾರನನ್ನು ಅದರ ಸೇವೆಗೋಸ್ಕರ ಪ್ರತಿಷ್ಠಿಸಿದರು.


ಮೇರೆಯ ಪಶ್ಚಿಮದ ಮೂಲೆಯಾಗಿರುವ ಈ ಬೆಟ್ಟದಿಂದ ಅದು ದಕ್ಷಿಣಕ್ಕೆ ತಿರುಗಿಕೊಂಡು ಕಿರ್ಯತ್‍ಬಾಳ್ ಅನ್ನಿಸಿಕೊಳ್ಳುತ್ತಿದ್ದ ಯೆಹೂದ್ಯರ ಕಿರ್ಯತ್ಯಾರೀಮ್ ಎಂಬ ಪಟ್ಟಣದಲ್ಲಿ ಮುಗಿಯುತ್ತದೆ. ಇದೇ ಅವರ ಪಡುವಣ ಮೇರೆ.


ಕಿರ್ಯತ್ಯಾರೀಮ್ ಅನ್ನಿಸಿಕೊಳ್ಳುವ ಕಿರ್ಯತ್ ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳೂ ಅವುಗಳ ಗ್ರಾಮಗಳೂ;


ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಫ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ಪಟ್ಟಣಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಅನ್ನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ.


ಆಯಿ ಎಂಬ ಊರಿಗಿಂತ ದೊಡ್ಡದೂ ಒಂದು ರಾಜಧಾನಿಯಷ್ಟು ಶ್ರೇಷ್ಠವೂ ಆಗಿರುವ ಗಿಬ್ಯೋನ್ ಪಟ್ಟಣದಲ್ಲಿರುವ ಜನರು ತಾವೆಲ್ಲರೂ ಯುದ್ಧವೀರರಾಗಿದ್ದರೂ ಇಸ್ರಾಯೇಲ್ಯರ ಮಧ್ಯದಲ್ಲಿ ಜೀವದಿಂದುಳಿಯುವದಕ್ಕೋಸ್ಕರ ಅವರ ಸಂಗಡ ಒಡಂಬಡಿಕೆ ಮಾಡಿಕೊಂಡರೆಂಬದನ್ನೂ ಯೆರೂಸಲೇವಿುನ ಅರಸನಾದ ಅದೋನೀಚೆದೆಕನು ಕೇಳಿ ಬಹಳವಾಗಿ ಭಯಪಟ್ಟು


ಯೆರಿಕೋವಿನವರನ್ನೂ ಆಯಿ ಎಂಬ ಊರಿನವರನ್ನೂ ಯೆಹೋಶುವನು ಸಂಹರಿಸಿದ ಸುದ್ದಿಯನ್ನು ಗಿಬ್ಯೋನಿನ ನಿವಾಸಿಗಳು ಕೇಳಿ ಅವರೂ ಒಂದು ಯುಕ್ತಿಮಾಡಿದರು.


ಅದಕ್ಕೆ ಅವರು - ನಿನ್ನ ಸೇವಕರಾದ ನಾವು ನಿಮ್ಮ ದೇವರಾದ ಯೆಹೋವನ ನಾಮಮಹತ್ತಿನ ನಿವಿುತ್ತ ಬಹುದೂರ ದೇಶದಿಂದ ಬಂದಿದ್ದೇವೆ. ನಮ್ಮ ಹಿರಿಯರೂ ದೇಶನಿವಾಸಿಗಳೂ ಆತನು ಐಗುಪ್ತದಲ್ಲಿ ನಡಿಸಿದ ಮಹತ್ಕಾರ್ಯಗಳ ಸುದ್ದಿಯನ್ನೂ


ಒಡಂಬಡಿಕೆಯಾದ ಮೂರು ದಿನಗಳ ಮೇಲೆ ಅವರು ಹತ್ತಿರದವರೂ ತಮ್ಮ ಮಧ್ಯದಲ್ಲಿಯೇ ವಾಸಿಸುವವರೂ ಆಗಿದ್ದಾರೆಂದು ಇಸ್ರಾಯೇಲ್ಯರಿಗೆ ಗೊತ್ತಾಯಿತು.


ಸಮೂಹಪ್ರಧಾನರು ಇಸ್ರಾಯೇಲ್‍ದೇವರಾದ ಯೆಹೋವನ ಹೆಸರಿನಲ್ಲಿ ಅವರಿಗೆ ಪ್ರಮಾಣಮಾಡಿದ್ದರಿಂದ ಇಸ್ರಾಯೇಲ್ಯರು ಅವರನ್ನು ಹೊಡೆಯಲಿಲ್ಲ. ಆದರೆ ಸಮೂಹದವರೆಲ್ಲಾ ಪ್ರಧಾನರಿಗೆ ವಿರೋಧವಾಗಿ ಗುಣುಗುಟ್ಟಿದರು.


ದಕ್ಷಿಣದಿಕ್ಕಿನ ಮೇರೆಯು ಪಡುವಣ ಮೂಲೆಯಾಗಿರುವ ಕಿರ್ಯತ್ಯಾರೀವಿುನ ಪ್ರಾಂತದಿಂದ ತೊಡಗಿ


ಗಟ್ಟಾಹತ್ತಿ ಯೆಹೂದದ ಕಿರ್ಯತ್ಯಾರೀವಿುನ ಬಳಿಯಲ್ಲಿ ಇಳುಕೊಂಡರು. ಆದದರಿಂದ ಆ ಸ್ಥಳಕ್ಕೆ ಇಂದಿನವರೆಗೂ ದಾನ್ಯರ ಪಾಳೆಯವೆಂಬ ಹೆಸರಿದೆ; ಅದು ಕಿರ್ಯತ್ಯಾರೀವಿುನ ಪಶ್ಚಿಮದಲ್ಲಿರುತ್ತದೆ.


ಕಿರ್ಯತ್ಯಾರೀವಿುನವರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ - ಫಿಲಿಷ್ಟಿಯರು ಯೆಹೋವನ ಮಂಜೂಷವನ್ನು ಕಳುಹಿಸಿದ್ದಾರೆ; ನೀವು ಬಂದು ಅದನ್ನು ತೆಗೆದುಕೊಂಡು ಹೋಗಿರಿ ಎಂದು ಹೇಳಿಸಿದರು.


ಸೌಲನ ಮಗನಿಗೆ ಬಾಣ, ರೇಕಾಬ್ ಎಂಬ ಇಬ್ಬರು ಸೇನಾಪತಿಗಳಿದ್ದರು. ಅವರು ಬೆನ್ಯಾಮೀನ್ ಕುಲದ ಬೇರೋತಿನವನಾದ ರಿಮ್ಮೋನನ ಮಕ್ಕಳು. (ಬೇರೋತ್ ಎಂಬದು ಬೆನ್ಯಾಮೀನ್ಯರಿಗೆ ಸೇರಿದ ಗ್ರಾಮ;


ಕಾಲೇಬನ ಮಗಳು ಅಕ್ಸಾಹ ಎಂಬಾಕೆಯು. ಇವರು ಕಾಲೇಬನ ಮಕ್ಕಳು. ಎಫ್ರಾತಳ ಚೊಚ್ಚಲಮಗನಾದ ಹೂರನ ಮಕ್ಕಳು - ಕಿರ್ಯತ್ಯಾರೀಮ್ಯರ ಮೂಲಪುರುಷನಾದ ಶೋಬಾಲ್, ಬೇತ್ಲೆಹೇಮ್ಯರ ಮೂಲಪುರುಷನಾದ ಸಲ್ಮ,


ಕಿರ್ಯತ್ಯಾರೀವಿುನವರ ಮೂಲಪುರುಷನಾದ ಶೋಬಾಲನ ಸಂತಾನದವರು - ಹಾರೋಯೆ, ಮಾನಹತಿಯರ ಅರ್ಧಜನರು,


ಕಿರ್ಯತ್ಯಾರೀಮ್ ಕುಟುಂಬಗಳವರು, ಯೆತೆರಿನವರು, ಪೂತ್ಯರು, ಶುಮಾತ್ಯರು, ವಿುಷ್ರಾಗ್ಯರು ಇವರೇ. ಇವರಿಂದ ಚೊರ್ರಾತ್ಯರೂ ಎಷ್ಟಾವೋಲ್ಯರೂ ಹೊರಟುಬಂದರು.


ಮತ್ತು ಶಮಾಯನ ಮಗನೂ ಕಿರ್ಯತ್‍ಯಾರೀಮ್ ಊರಿನವನೂ ಆದ ಊರೀಯನೆಂಬವನೊಬ್ಬನು ಯೆಹೋವನ ಹೆಸರಿನಲ್ಲಿ ಪ್ರವಾದಿಸುವವನಾಗಿದ್ದು ಯೆರೆಮೀಯನು ನುಡಿದಂತೆಯೇ ಈ ಪಟ್ಟಣಕ್ಕೂ ಈ ದೇಶಕ್ಕೂ ಅಹಿತವನ್ನು ನುಡಿಯುತ್ತಿದ್ದನು.


ಮೂವತ್ತು ಮಂದಿ ಭಟರಲ್ಲಿ ಶೂರನೂ ಮುಖ್ಯಸ್ಥನೂ ಆದ ಗಿಬ್ಯೋನಿನ ಇಷ್ಮಾಯ, ಗೆದೇರಾ ಊರಿನವರಾದ ಯೆರೆಮೀಯ ಯಹಜೀಯೇಲ್ ಯೋಹಾನಾನ್ ಯೋಜಾಬಾದರು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು