ಯೆಹೋಶುವ 8:22 - ಕನ್ನಡ ಸತ್ಯವೇದವು J.V. (BSI)22 ಪಟ್ಟಣದೊಳಗೆ ನುಗ್ಗಿದವರೂ ಬಂದುಬಿಟ್ಟದ್ದರಿಂದ ಆಯಿ ಎಂಬ ಊರಿನವರು ಈಚೆಯಲ್ಲಿಯೂ ಆಚೆಯಲ್ಲಿಯೂ ಇದ್ದ ಇಸ್ರಾಯೇಲ್ಯರ ಮಧ್ಯದಲ್ಲಿ ಸಿಕ್ಕಿಬಿದ್ದರು. ಅವರು ಎಲ್ಲರನ್ನೂ ಹೊಡೆದು ಹಾಕಿದರು. ಒಬ್ಬನಾದರೂ ಉಳಿಯಲಿಲ್ಲ, ಯಾವನೂ ತಪ್ಪಿಸಿಕೊಳ್ಳಲಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 ಪಟ್ಟಣದೊಳಗೆ ನುಗ್ಗಿದವರೂ ಒಟ್ಟಿಗೆ ಸೇರಿದ್ದರಿಂದ ಆಯಿ ಎಂಬ ಊರಿನವರು ಆ ಕಡೆಯಿಂದಲೂ ಈ ಕಡೆಯಿಂದಲೂ ಇದ್ದ ಇಸ್ರಾಯೇಲ್ಯರ ಮಧ್ಯದಲ್ಲಿ ಸಿಕ್ಕಿಬಿದ್ದರು. ಅವರು ಎಲ್ಲರನ್ನೂ ಕೊಂದು ಹಾಕಿದರು. ಒಬ್ಬನಾದರೂ ಉಳಿಯಲಿಲ್ಲ, ಯಾವನೂ ತಪ್ಪಿಸಿಕೊಳ್ಳಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ನಗರಕ್ಕೆ ನುಗ್ಗಿದವರೂ ಹೊರಗೆ ಬಂದು ಆ ಜನರ ಮೇಲೆ ಎರಗಿದರು. ಹೀಗೆ ಆ ಕಡೆಯಿಂದಲೂ ಈ ಕಡೆಯಿಂದಲೂ ಇಸ್ರಯೇಲರ ಕೈಗೆ ಸಿಕ್ಕಿಬಿದ್ದರು. ಎಲ್ಲರನ್ನು ಸದೆಬಡಿಯಲಾಯಿತು. ಒಬ್ಬನಾದರೂ ಉಳಿಯಲಿಲ್ಲ. ಯಾವನೂ ತಪ್ಪಿಸಿಕೊಳ್ಳಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 ಆಗ ಅಡಗಿಕೊಂಡಿದ್ದ ಜನರು ಯುದ್ಧದಲ್ಲಿ ಸಹಾಯ ಮಾಡಲು ಪಟ್ಟಣದಿಂದ ಹೊರಬಂದರು. ಇಸ್ರೇಲಿನ ಸೈನ್ಯವು “ಆಯಿ”ಯ ಜನರ ಎರಡು ಕಡೆಗೂ ಇತ್ತು. “ಆಯಿ”ಯ ಜನರು ಸಿಕ್ಕಿಬಿದ್ದರು. ಇಸ್ರೇಲರು ಅವರನ್ನು ಸೋಲಿಸಿ ಅವರಲ್ಲಿ ಒಬ್ಬರನ್ನೂ ಜೀವಂತವಾಗಿ ಉಳಿಸಲಿಲ್ಲ. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಅವರು ಪಟ್ಟಣದೊಳಗಿಂದ ಇವರಿಗೆ ಎದುರಾಗಿ ಬಂದ ಕಾರಣ, ಅವರು ಈ ಕಡೆ ಆ ಕಡೆ ಇರುವ ಇಸ್ರಾಯೇಲರ ಮಧ್ಯದಲ್ಲಿ ಸಿಕ್ಕಿದರು. ಅವರಲ್ಲಿ ಇಬ್ಬರೂ ತಪ್ಪಿಸಿಕೊಂಡ ಹಾಗೆಯೂ ಅವರನ್ನು ಹೊಡೆದರು. ಅಧ್ಯಾಯವನ್ನು ನೋಡಿ |