Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೋಶುವ 6:19 - ಕನ್ನಡ ಸತ್ಯವೇದವು J.V. (BSI)

19 ಎಲ್ಲಾ ಬೆಳ್ಳಿಬಂಗಾರವೂ ತಾಮ್ರ ಕಬ್ಬಿಣಗಳ ಪಾತ್ರೆಗಳೂ ಯೆಹೋವನ ಮೀಸಲಾಗಿದ್ದು ಆತನ ಭಂಡಾರಕ್ಕೆ ಸೇರತಕ್ಕವುಗಳು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಎಲ್ಲಾ ಬೆಳ್ಳಿ ಬಂಗಾರವೂ, ತಾಮ್ರ ಕಬ್ಬಿಣಗಳ ಪಾತ್ರೆಗಳೂ ಯೆಹೋವನಿಗೆ ಮೀಸಲಾಗಿದ್ದು ಆತನ ಭಂಡಾರಕ್ಕೆ ಸೇರತಕ್ಕವುಗಳು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಎಲ್ಲ ಬೆಳ್ಳಿ ಬಂಗಾರ ಹಾಗೂ ತಾಮ್ರ ಕಬ್ಬಿಣ ಪಾತ್ರೆಗಳು ಸರ್ವೇಶ್ವರಸ್ವಾಮಿಗೆ ಮೀಸಲಾಗಿದ್ದು ಅವರ ಭಂಡಾರಕ್ಕೆ ಸೇರತಕ್ಕವುಗಳು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ಎಲ್ಲಾ ವಸ್ತುಗಳು ಯೆಹೋವನ ಸ್ವತ್ತಾಗಿವೆ. ಆದ್ದರಿಂದ ಅವುಗಳನ್ನು ಆತನ ಭಂಡಾರಕ್ಕೆ ಸೇರಿಸಬೇಕು” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಎಲ್ಲಾ ಬೆಳ್ಳಿಬಂಗಾರ, ಕಂಚು, ಕಬ್ಬಿಣ ಪಾತ್ರೆಗಳು ಯೆಹೋವ ದೇವರಿಗೆ ಅರ್ಪಿತವಾಗಿರಬೇಕು. ಅವು ಯೆಹೋವ ದೇವರ ಭಂಡಾರಕ್ಕೆ ಸೇರಿರಬೇಕು,” ಎಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೋಶುವ 6:19
25 ತಿಳಿವುಗಳ ಹೋಲಿಕೆ  

ಮಹಾಯಾಜಕರು ಆ ಹಣವನ್ನು ತೆಗೆದುಕೊಂಡು ಅದು ಜೀವಹತ್ಯಕ್ಕೆ ಕೊಟ್ಟ ಕ್ರಯವಾದ್ದರಿಂದ ಅದನ್ನು ಕಾಣಿಕೇಪೆಟ್ಟಿಗೆಯಲ್ಲಿ ಹಾಕಬಾರದು ಎಂದರು.


ಮೇಲೆ ಕಂಡವರ ಕುಲಬಂಧುಗಳೂ ದೇವಾಲಯದ ಭಂಡಾರ, ಪರಿಶುದ್ಧವಸ್ತುಗಳ ಭಂಡಾರ ಇವುಗಳನ್ನು ಕಾಯುವವರೂ ಆದ ಲೇವಿಯರ ಪಟ್ಟಿ -


ಯೇಸು ಬೊಕ್ಕಸದ ಮನೆಗೆ ಎದುರಾಗಿ ಕೂತುಕೊಂಡು ಜನರು ಬೊಕ್ಕಸದಲ್ಲಿ ಹಣ ಹಾಕುವದನ್ನು ನೋಡುತ್ತಿದ್ದನು. ಅನೇಕ ಮಂದಿ ಐಶ್ವರ್ಯವಂತರು ಬಹಳ ಬಹಳ ಹಾಕುತ್ತಿರಲು


ಅವರು ದಶಮಾಂಶವನ್ನು ಕೂಡಿಸುವಾಗ ಆರೋನನ ವಂಶದವನಾದ ಯಾಜಕನೊಬ್ಬನು ಅವರ ಸಂಗಡ ಇರಬೇಕು. ಲೇವಿಯರು ತಮಗೆ ದೊರಕಿದ ಭಾಗದ ದಶಮಾಂಶವನ್ನು ದೇವಾಲಯದ ಬಂಡಾರದ ಕೊಠಡಿಗಳಲ್ಲಿಡಬೇಕು,


ಅರಸನಾದ ದಾವೀದನು ಇವುಗಳನ್ನೂ ಎದೋಮ್ಯರು ಮೋವಾಬ್ಯರು ಅಮ್ಮೋನಿಯರು ಫಿಲಿಷ್ಟಿಯರು ಅಮಾಲೇಕ್ಯರು ಎಂಬೀ ಸುತ್ತಣ ಜನಾಂಗಗಳಿಂದ ಕಿತ್ತುಕೊಂಡ ಬೆಳ್ಳಿಬಂಗಾರವನ್ನೂ ಯೆಹೋವನಿಗೋಸ್ಕರ ಪ್ರತಿಷ್ಠಿಸಿದನು.


ಇದಲ್ಲದೆ ಯೆಹೋವನು ಮುಂತಿಳಿಸಿದ ಪ್ರಕಾರ ಅವನು ಯೆಹೋವನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿದ್ದ ಎಲ್ಲಾ ದ್ರವ್ಯವನ್ನು ತೆಗೆದುಕೊಂಡುಹೋದನು. ಇಸ್ರಾಯೇಲ್ಯರ ಅರಸನಾದ ಸೊಲೊಮೋನನು ಯೆಹೋವನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಸಾಮಾನುಗಳನ್ನು ಮುರಿದುಬಿಟ್ಟನು.


ಅರಸನಾದ ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಬೇಕಾದ ಎಲ್ಲಾ ಸಾಮಾನುಗಳನ್ನು ಸಿದ್ಧಮಾಡಿಸಿದನಂತರ ತನ್ನ ತಂದೆಯಾದ ದಾವೀದನು ಯೆಹೋವನಿಗೆ ಹರಕೆಹೊತ್ತು ಪ್ರತಿಷ್ಠಿಸಿದ ಬೆಳ್ಳಿ ಬಂಗಾರವನ್ನೂ ಸಾಮಾನುಗಳನ್ನೂ ದೇವಾಲಯದ ಭಂಡಾರಕ್ಕೆ ಸೇರಿಸಿದನು.


ಅರಸನಾದ ದಾವೀದನು ಇವುಗಳನ್ನೂ ತನ್ನಿಂದ ಅಪಜಯಹೊಂದಿದ ಅರಾಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು, ಅಮಾಲೇಕ್ಯರು ಎಂಬೀ ಸುತ್ತಣ ಜನಾಂಗಗಳಿಂದಲೂ ಚೋಬದ ಅರಸನಾದ ರೆಹೋಬನ ಮಗ ಹದದೆಜೆರನಿಂದಲೂ


ಚೀಯೋನ್ ನಗರಿಯೇ, ಎದ್ದು ಒಕ್ಕು; ನಾನು ನಿನ್ನ ಕೊಂಬನ್ನು ಕಬ್ಬಿಣವನ್ನಾಗಿಯೂ ನಿನ್ನ ಗೊರಸನ್ನು ತಾಮ್ರವನ್ನಾಗಿಯೂ ಮಾಡುವೆನು; ನೀನು ಬಹು ಜನಾಂಗಗಳನ್ನು ಚೂರುಚೂರಾಗಿ ತುಳಿದುಬಿಡುವಿ; ಅವುಗಳಿಂದ ಹೊಡೆದ ಕೊಳ್ಳೆಯನ್ನು ಕೇವಲ ಯೆಹೋವನದಾಗಿ ಪ್ರತ್ಯೇಕಿಸುವಿ, ಅವುಗಳ ಆಸ್ತಿಯನ್ನು ಲೋಕದ ಕರ್ತನಿಗೆ ಮೀಸಲುಮಾಡುವಿ.


ಜನರು ಕಾಣಿಕೆಗಳನ್ನೂ ತಮ್ಮ ಆದಾಯದ ದಶಮಾಂಶವನ್ನೂ ದೇವರಿಗೋಸ್ಕರ ಪ್ರತ್ಯೇಕಿಸಿದ ಮುಡುಪನ್ನೂ ನಿರ್ವಂಚನೆಯಿಂದ ತಂದು ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನು; ಅವನ ತಮ್ಮನಾದ ಶಿಮ್ಮಿಯು ದ್ವಿತೀಯ ಸ್ಥಾನದವನು.


ತನ್ನ ತಂದೆಯೂ ತಾನೂ ಪ್ರತಿಷ್ಠಿಸಿದ ಬೆಳ್ಳಿಬಂಗಾರವನ್ನೂ ಪಾತ್ರೆಗಳನ್ನೂ ದೇವಾಲಯದಲ್ಲಿ ತಂದಿಟ್ಟನು.


ಯೆಹೋವನ ಆಲಯದ ಅಂಗಳಗಳು, ಸುತ್ತಣ ಕೋಣೆಗಳು, ದೇವಾಲಯದ ಭಂಡಾರಗಳು, ಪ್ರತಿಷ್ಠಿತ ವಸ್ತುಗಳ ಭಂಡಾರಗಳು ಇವುಗಳ ವಿಷಯವಾಗಿಯೂ


ಇವರಲ್ಲದೆ ದರ್ಶಿಯಾದ ಸಮುವೇಲನೂ ಕೀಷನ ಮಗನಾದ ಸೌಲನೂ ನೇರನ ಮಗನಾದ ಅಬ್ನೇರನೂ ಚೆರೂಯಳ ಮಗನಾದ ಯೋವಾಬನೂ ಹಾಗೆಯೇ ಮಾಡಿದ್ದರು. ಈ ಪ್ರಕಾರ ಪ್ರತಿಷ್ಠಿತವಾದದ್ದೆಲ್ಲವೂ ಶೆಲೋಮೋತನ ಮತ್ತು ಅವನ ಸಹೋದರರ ವಶದಲ್ಲಿತ್ತು.


ಶೆಲೋಮೋತನೂ ಅವನ ಸಹೋದರರೂ ಪ್ರತಿಷ್ಠಿತವಸ್ತುಗಳ ಭಂಡಾರವನ್ನು ಕಾಯುವವರು; ಇವರು ಶೆಬೂವೇಲನ ಗೋತ್ರಬಂಧುಗಳು.


ಯೆಹೋವನ ಆಲಯದ ಮತ್ತು ಅರಮನೆಯ ಎಲ್ಲಾ ದ್ರವ್ಯವನ್ನೂ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನೂ ತೆಗೆದುಕೊಂಡು ಹೋದನು.


ಕೂಡಲೇ ಕೂಷ್ಯನಾದ ಎಬೆದ್ಮೆಲೆಕನು ಅವರನ್ನು ಕರೆದುಕೊಂಡುಹೋಗಿ ಅರಮನೆಯನ್ನು ಹೊಕ್ಕು ಖಜಾನೆಯ ಕೆಳಗಣ ಕೋಣೆಯಿಂದ ಜೀರ್ಣವಾದ ಹರಕು ಚಿಂದಿಪಂದಿಗಳನ್ನು ತೆಗೆದುಕೊಂಡು ಬಾವಿಯೊಳಗೆ ಹಗ್ಗಗಳಿಂದ ಯೆರೆಮೀಯನಿಗೆ ಮುಟ್ಟಿಸಿ


ಬೆಂಕಿಯನ್ನು ತಡೆಯುವ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ,


ನಾಲ್ಕನೆಯ ವರುಷದಲ್ಲಿ ಅದರ ಎಲ್ಲಾ ಹಣ್ಣುಗಳೂ ದೇವರವಾಗಿರಬೇಕು; ಅವುಗಳನ್ನು ಯೆಹೋವನಿಗೆ ಕೃತಜ್ಞತೆಯ ಕಾಣಿಕೆಯನ್ನಾಗಿ ಸಮರ್ಪಿಸಬೇಕು.


ಒಂದನ್ನೂ ಬಿಡದೆ ಮನುಷ್ಯರನ್ನೂ ಪಶುಗಳನ್ನೂ ಸೆರೆಹಿಡಿದರು.


ಅವರು ಸೆರೆಯವರನ್ನೂ ಪಶುಗಳನ್ನೂ ಆಸ್ತಿಯನ್ನೂ ತೆಗೆದುಕೊಂಡು ಯೆರಿಕೋ ಪಟ್ಟಣದ ಎದುರಾಗಿ ಯೊರ್ದನ್ ಹೊಳೆಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿದ್ದ ಪಾಳೆಯಕ್ಕೆ ಅಂದರೆ ಮೋಶೆ, ಮಹಾಯಾಜಕನಾದ ಎಲ್ಲಾಜಾರ್, ಇಸ್ರಾಯೇಲ್ಯರ ಸರ್ವಸಮೂಹದವರು ಇವರ ಬಳಿಗೆ ಬಂದರು.


ಇಸ್ರಾಯೇಲ್ಯರು ನನ್ನ ನಿಬಂಧನೆಯನ್ನು ಮೀರಿ ಪಾಪಿಷ್ಠರಾಗಿದ್ದಾರೆ. ಮೀಸಲಾದ ವಸ್ತುಗಳನ್ನು ತೆಗೆದುಕೊಂಡು ಕಳ್ಳರಾಗಿ ತಮ್ಮ ಸಾಮಾನುಗಳಲ್ಲಿ ಅಡಗಿಸಿಟ್ಟು ವಂಚಕರಾದರು.


ಅರಸನಾದ ದಾವೀದನೂ ಗೋತ್ರಪ್ರಧಾನರೂ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಸೇನಾನಾಯಕರೂ ಯೆಹೋವನ ಆಲಯದ ವೃದ್ಧಿಗೋಸ್ಕರ ತಮಗೆ ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯ ಒಂದು ಭಾಗವನ್ನು ಯೆಹೋವನಿಗೆಂದು ಮುಡುಪಾಗಿ ಇಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು